Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ ಪಪಂ ಸದಸ್ಯರಿಂದ ತಹಶೀಲ್ದಾರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗೆ ಮನವಿ ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಪಟ್ಟಣಪಂಚಾಯಿತಿ ಸದಸ್ಯರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಮಂಗಳವಾರ ಆಗಮಿಸಿದ ಪಟ್ಟಣ ಪಂಚಾಯಿತಿ ಸದಸ್ಯರು ಇಂಡಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿ ಸೃಜಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ದೇವರ ಹಿಪ್ಪರಗಿ ತಾಲ್ಲೂಕನ್ನು ನೂತನ ಜಿಲ್ಲೆಗೆ ಪರಿಗಣಿಸದೇ ಮೂಲ ಜಿಲ್ಲೆಯಾದ ವಿಜಯಪುರದಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ ಹಾಗೂ ಪ್ರಕಾಶ ಮಲ್ಲಾರಿ ಮಾತನಾಡಿ, ದೇವರಹಿಪ್ಪರಗಿ ತಾಲ್ಲೂಕು, ಜಿಲ್ಲಾ ಕೇಂದ್ರ ವಿಜಯಪುರಕ್ಕೆ ೩೦ ಕಿ.ಮೀಗಳ ಸನಿಹದಲ್ಲಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ-೫೦ರ ಮೂಲಕ ನೇರಸಂಪರ್ಕ ಹೊಂದಿದ್ದು, ಎಲ್ಲ ವಾಣಿಜ್ಯ, ವ್ಯಾಪಾರ ಸೇರಿದಂತೆ ದೈನಂದಿನ ವಹಿವಾಟುಗಳನ್ನು ಅವಲಂಬಿಸಿದೆ. ಆದ್ದರಿಂದ ವಿಜಯಪುರ ಜಿಲ್ಲೆಯೇ ತಾಲ್ಲೂಕಿನ ಜನತೆಯ ಆದ್ಯತೆಯಾಗಿದೆ ಎಂದರು.ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಕಾಶೀನಾಥ ಬಜಂತ್ರಿ, ಉಮೇಶ ರೂಗಿ,…
ಬಸವನಬಾಗೇವಾಡಿ: ಪಟ್ಟಣದ ಗಣಪತಿ ವೃತ್ತದಲ್ಲಿ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆಯಂಗವಾಗಿ ಮಂಗಳವಾರ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗುರು ನಮನ ಸಲ್ಲಿಸಲಾಯಿತು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದ ಅವರು, ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಆಧ್ಯಾತ್ಮಿಕ ಜ್ಙಾನವನ್ನು ಎಲ್ಲರಿಗೂ ತಲುಪಿಸಿದ್ದಾರೆ. ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಬಸವನಬಾಗೇವಾಡಿಯಲ್ಲಿ ೨೦೧೫ ರ ನವೆಂಬರ್ ತಿಂಗಳಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ಅವರು ನಡೆಸಿದ ಪ್ರವಚನ ನಾವೆಂದು ಮರೆಯುವಂತಿಲ್ಲ. ಅವರ ಪ್ರವಚನ ಕಾಲದಲ್ಲಿ ಬಸವನಬಾಗೇವಾಡಿಯನ್ನು ಸದಾ ಸ್ಮರಿಸುತ್ತಿದ್ದರು. ಅವರು ನೀಡಿರುವ ಜೀವನ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಅಶೋಕ ಬಾಗೇವಾಡಿ, ಮಹಾಂತೇಶ ಹಂಜಗಿ, ಅಶೋಕ ಗುಳೇದ, ಅನಿಲ ಮುಳವಾಡ ಶ್ರೀಶೈಲ ಮುಳವಾಡ, ರೇವಣಸಿದ್ದ ಜಾಡರ, ಪ್ರಭಾಕರ ಖೇಡದ, ಸದಾಶಿವ ಬೇವನೂರ, ಶ್ರೀಶೈಲ ಬೇವನೂರ, ಮುದುಕಣ್ಣ ನಾಗೂರ, ಮಹಾದೇವ ಹಂಜಗಿ ಇತರರು ಇದ್ದರು.…
ಬಸವನಬಾಗೇವಾಡಿ: ಅಖಂಡ ಬಸವನಬಾಗೇವಾಡಿ ತಾಲೂಕಿನ ಕೊಡಗಾನೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಸಿದ್ದಪ್ಪ ಎಸ್.ಬೂದಿಗೋಳಿ ಅವರು ವಯೋನಿವೃತ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಯಲ್ಲಿ ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ವಿವಿಧ ಬಾಂಧವರು ಸನ್ಮಾನಿಸಿ ಶುಭಕೋರಿದರು.ಇವರು ಶಿಕ್ಷಣ ಇಲಾಖೆಯಲ್ಲಿ 30 ವರ್ಷ, 4 ತಿಂಗಳು ಸೇವೆ ಸಲ್ಲಿಸಿದ್ದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಜಿ.ಡಿ.ಪಾಟೀಲ, ಎಚ್.ಬಿ.ಕೊಡೆಕಲ್, ಗುರು ಇಂಗಳಗಿ, ಯರಡೋಣಿ, ಬಸರಕೋಡ,ಎಸ್ಡಿಎಂಸಿ ಸದಸ್ಯರು, ಬಂಧು-ಬಾಂಧವರು ಇತರರು ಇದ್ದರು.
ಬಸವನಬಾಗೇವಾಡಿ: ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ರಾಮ ಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಬಸವಜನ್ಮ ಸ್ಮಾರಕ ಮುಂಭಾಗದಲ್ಲಿ ಸಿದ್ಧಲಿಂಗ ಸ್ವಾಮೀಜಿ, ಪಂಚಾಕ್ಷರಿ ಕಾಳಹಸ್ತೇಶ್ವರಮಠ ಚಾಲನೆ ನೀಡಿದರು.ಆರ್.ಎಸ್.ಎಸ್ ಜಿಲ್ಲಾ ಘಟಕದ ಸೇವಾ ಪ್ರಮುಖ ಡಾ.ಬಸವರಾಜ ಚವ್ಹಾಣ ಮಾತನಾಡಿ, ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ರಾಮ ಮಂದಿರ ಭಾವಚಿತ್ರ ಹಾಗೂ ಮಂತ್ರಾಕ್ಷತೆ ವಿತರಣೆ ಮಾಡಲಿದ್ದಾರೆ. ವಿತರಣೆಗೆ ತೆರಳಿದಾಗ ಕಾರ್ಯಕರ್ತರು ಶುಭ್ರ ವಸ್ತ್ರ ಧರಿಸಿರಬೇಕು. ಮಂತ್ರಾಕ್ಷತೆಯ ಮಹತ್ವ ತಿಳಿಸಿಕೊಡಬೇಕು ಎಂದು ಹೇಳಿದರು.ವಿ.ಎಚ್.ಪಿ ಪ್ರಧಾನ ಕಾರ್ಯದರ್ಶಿ ಅಶ್ವಿನಿಕುಮಾರ ಪಟ್ಟಣಶೆಟ್ಟಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಎಸ್.ಎ.ದೇಗಿನಾಳ, ವಿವೇಕಾನಂದ ಕಲ್ಯಾಣಶೆಟ್ಟಿ, ಪರಶುರಾಮ ಕುರಾಡೆ, ಬಸವರಾಜ ಬಿಜಾಪುರ, ರಾಜು ಮುಳವಾಡ, ಈಶ್ವರ ಪರಮಗೊಂಡ, ನಾಗರಾಜ ಪಟ್ಟಣಶೆಟ್ಟಿ, ವಿಠ್ಠಲ ಕುಲಕರ್ಣಿ, ರಾಜು ಮೋದಿ, ಪ್ರಭು ಪಟ್ಟಣಶೆಟ್ಟಿ, ಚನ್ನಯ್ಯ ಸಾರಂಗಮಠ, ಶ್ರೀಶೈಲ ಶಿರಗುಪ್ಪಿ, ಸ್ವರೂಪರಾಣಿ ಬಿಂಜಲಬಾವಿ, ಮಹಾದೇವಿ ಬಿರಾದಾರ, ಜಯಶ್ರೀ ಪಟ್ಟಣಶೆಟ್ಟಿ, ಮಹೇಶ ಸಾಲವಾಡಗಿ, ವಿಶ್ವನಾಥ ನೆಗಿನಾಳ ಇದ್ದರು. ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಹಾಗೂ ರಾಮಮಂದಿರ…
ಬಸವನ ಬಾಗೇವಾಡಿ: ಇಂದಿನ ಕಾಲದಲ್ಲಿ ಮಕ್ಕಳಿಗೆ ವಿದ್ಯೆ ಚೆನ್ನಾಗಿ ಸಿಗುತ್ತಿದೆಯಾದರೂ ಅವರಿಗೆ ಕಷ್ಟ ಗೊತ್ತಾಗದೇ ಇರುವದು ವಿಷಾದನೀಯ. ಮಕ್ಕಳು ವಿದ್ಯೆಯನ್ನು ಚೆನ್ನಾಗಿ ಕಲಿಯುವ ಜೊತೆಗೆ ಉತ್ತಮ ಸಂಸ್ಕಾರ ಕಲಿತುಕೊಳ್ಳುವಂತಾಗಬೇಕೆಂದು ಚಲನಚಿತ್ರ ಹಾಸ್ಯನಟ ವೈಜನಾಥ ಬಿರಾದಾರ ಹೇಳಿದರು.ಪಟ್ಟಣಕ್ಕೆ ಸೋಮವಾರ ಸಂಜೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚಿಕ್ಕವರಿದ್ದಾಗ ಅಷ್ಟಾಗಿ ಹಿರಿಯರು ವಿದ್ಯೆಗೆ ಮಹತ್ವ ಕೊಡುತ್ತಿರಲಿಲ್ಲ. ನಾವು ಶಾಲೆಯಿಂದ ಬಂದ ನಂತರ ಮನೆಯಲ್ಲಿ ಹೇಳುವ ಎಲ್ಲ ಕೆಲಸಗಳನ್ನು ಮಾಡುವ ಪರಿಸ್ಥಿತಿಯಿತ್ತು. ಅಭ್ಯಾಸ ಮಾಡಲು ಅಷ್ಟಾಗಿ ಸಮಯ ಸಿಗುತ್ತಿರಲಿಲ್ಲ. ಇಂದು ಮಕ್ಕಳಿಗೆ ಹೆಚ್ಚು ಕೆಲಸಗಳನ್ನು ಹಚ್ಚದೇ ಅವರಿಗೆ ಅಭ್ಯಾಸ ಮಾಡಲು ಅವಕಾಶ ಕೊಟ್ಟರೂ ಅವರು ಅದನ್ನು ಸದುಪಯೋಗ ಪಡಿಸಿಕೊಳ್ಳದೇ ಮೊಬೈಲ್ದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಈ ಅಭ್ಯಾಸ ಹೋಗಿ ಅವರು ಉತ್ತಮ ವಿದ್ಯಾವಂತರಾಗಿ ಹೊರಹೊಮ್ಮುವಂತಾಗಬೇಕಾದ ಅಗತ್ಯವಿದೆ ಎಂದರು.ನಾನು ಇದುವರೆಗೂ ಸುಮಾರು ೫೫೦ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ನಾನು ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದು. ರಂಗಭೂಮಿಯು ಕಲಾವಿದರರನ್ನು ಬೆಳೆಯಲು ಅವಕಾಶ ನೀಡುತ್ತದೆ. ನಾನು ನಟಿಸಿದ…
ಯಡ್ರಾಮಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವವು ಜ.೪ ಮತ್ತು ಜ.೫ ಎರೆಡು ದಿನಗಳ ಕಾಲ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.ಗುರುವಾರ (ಜ.೪) ರಂದು ಸಾಯಂಕಾಲ ದೇವಿಯನ್ನು ಬಣ್ಣದಿಂದ ದೇವಸ್ಥಾನಕ್ಕೆ ಕರೆದುಕೊಂಡು ಬಂದು, ಅಲಂಕಾರ ಮಾಡಿದ ರಥದಲ್ಲಿ ಶ್ರೀ ದೇವಿಯು ಆಸೀನಳಾಗುವಳು. ನಂತರ ರಾತ್ರಿ ೧೧ ಗಂಟೆಗೆ ಮಂಗಳೂರು ಹುಲಿ ವೇಷದಾರಿ ಕುಣಿತ, ಡೊಳ್ಳು ಕುಣಿತ, ಕುದುರೆ ಕುಣಿತ, ಕರಡಿ ಮಜಲು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಹಳೆ ಬಜಾರ್, ವಿರಕ್ತಮಠ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮೆರವಣಿಗೆ ಹೊರಟು ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ಬ್ರಾಹ್ಮಿ ಮಹೋರ್ತದಲ್ಲಿ ಶ್ರೀ ದೇವಿಗೆ ಗಂಗಾಸ್ನಾನ ನಡೆಯುವದು. ನಂತರ ಶ್ರೀ ದೇವಿಯ ಮೆರವಣಿಗೆ ಹೊರಟು ಪಟ್ಟಣದ ನಡುಗಟ್ಟೆ ಲಕ್ಷ್ಮೀದೇವಿಯ ದೇವಸ್ಥಾನದ ಹತ್ತಿರ ತಲುಪುವದು. ಸಾಯಂಕಾಲ ೪ರ ವರೆಗೆ ಭಕ್ತರ ಹರಕೆ, ಪೂಜೆ, ನೈವೇಧ್ಯ ನೆರವೇರಲಿದ್ದು, ನಂತರ ಶ್ರೀ ದೇವಿಯ ಮೆರವಣಿಗೆ ಪ್ರಾರಂಭಗೊಂಡು…
ವಿಜಯಪುರ: ಜಿಲ್ಲೆಯ ೭ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ೫೬ ಸರ್ಕಾರಿ ಹಾಗೂ ಖಾಸಗಿ ಪ್ರೌಢ ಶಾಲೆಗಳಿಗೆ ಪ್ರತಿ ಶಾಲೆಗೆ ೦೧ ಲ್ಯಾಪಟಾಪ್ ಹಾಗೂ ೦೧ ಕಲರ್ ಪ್ರಿಂಟರ್‌ನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ನವದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿಯವರು ೨೦೨೪ ಹೊಸ ವರ್ಷದ ನಿಮಿತ್ಯ ಸೋಮವಾರದಂದು ಅವರ ಕಾರ್ಯಕರ್ತರು ಶಾಲೆಗಳಿಗೆ ತೆರಳಿ ಲ್ಯಾಪಟಾಪ್ ಹಾಗೂ ಪ್ರಿಂಟರಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಸವನ ಬಾಗೇವಾಡಿ ತಾಲೂಕಿನ ೮ ಪ್ರೌಢ ಶಾಲೆಗಳು, ಇಂಡಿ ತಾಲೂಕಿನ ೮ ಪ್ರೌಢ ಶಾಲೆಗಳು, ಸಿಂದಗಿ ತಾಲೂಕಿನ ೮ ಪ್ರೌಢ ಶಾಲೆಗಳು, ಚಡಚಣ ತಾಲೂಕಿನ ೮ ಪ್ರೌಢ ಶಾಲೆಗಳು, ಬಬಲೇಶ್ವರ ತಾಲೂಕಿನ ೮ ಪ್ರೌಢ ಶಾಲೆಗಳು, ವಿಜಯಪೂರ ನಗರದ ೮ ಪ್ರೌಢ ಶಾಲೆಗಳು ಹಾಗೂ ಮುದ್ದೇಬಿಹಾಳ ತಾಲೂಕಿನ ೮ ಪ್ರೌಢ ಶಾಲೆಗಳನ್ನು ಒಳಗೊಂಡಿವೆ.
ಆಲಮಟ್ಟಿ: ಇಲ್ಲಿಯ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಕಾರ್ಮಿಕರಿಗೆ ಆರು ತಿಂಗಳಿಂದ ವೇತನ ಪಾವತಿ ಮಾಡದಿರುವುದನ್ನು ಖಂಡಿಸಿ ಅರಣ್ಯ ದಿನಗೂಲಿಗಳು ಮಂಗಳವಾರ ಇಲ್ಲಿ ಪ್ರತಿಭಟಿಸಿದರು.ರಾಕ್ ಉದ್ಯಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ ೧೦೦ ಕ್ಕೂ ಹೆಚ್ಚು ಕಾರ್ಮಿಕರು ಮೆರವಣಿಗೆ ನಡೆಸಿ ವೇತನ ವಿಳಂಬ ಧೋರಣೆ ಖಂಡಿಸಿದರು.ಮುಖ್ಯ ಎಂಜಿನಿಯರ್ ಕಚೇರಿ ಎದುರು ಸಂಜೆಯವರೆಗೂ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ, ಇದರಿಂದ ನಮ್ಮ ನಿತ್ಯ ಜೀವನದ ಸಾಗಿಸುವುದು ದುಸ್ತರವಾಗಿದೆ ಎಂದು ನೊಂದು ನುಡಿದರು.ಪ್ರತಿಭಟನೆ ಮಾಡಿದಾಗಷ್ಟೇ ನಮಗೆ ವೇತನವಾಗುತ್ತದೆ, ಇಲ್ಲದಿದ್ದರೇ ನಮ್ಮ ಗೋಳು ಕೇಳುವವರೂ ಯಾರೂ ಇಲ್ಲ ಎಂದರು.ಕಳೆದ ೨೦ ವರ್ಷಗಳಿಂದ ಇಲ್ಲಿ ಕನಿಷ್ಠ ಕೂಲಿಗಾಗಿ ದುಡಿಯುತ್ತಿದ್ದೇವೆ, ಉದ್ಯಾನವನ ನಿರ್ಮಾಣ, ನಿರ್ವಹಣೆಯಲ್ಲಿ ನಮ್ಮ ಪಾತ್ರ ಅಧಿಕ, ಇಂತಹ ಪರಿಸ್ಥಿತಿಯಲ್ಲಿ ಆರು ತಿಂಗಳಿಂದ ವೇತನ ಆಗಿಲ್ಲ ಎಂದರೇ ನಮ್ಮ ಜೀವನ ನಿರ್ವಹಣೆ ಹೇಗೆ? ಎಂದು ಅವರು ಪ್ರಶ್ನಿಸಿದರು.*ಬಾರದ ಮುಖ್ಯ ಎಂಜಿನಿಯರ್:*ಮುಖ್ಯ ಎಂಜಿನಿಯರ್ ಕಚೇರಿಯ ಎದುರು ಸಂಜೆಯವರೆಗೂ ಕುಳಿತರೂ ಆಲಮಟ್ಟಿಯಲ್ಲಿದ್ದರೂ ಮುಖ್ಯ ಎಂಜಿನಿಯರ್…
ಮುದ್ದೇಬಿಹಾಳ: ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿಯಂತ್ರಣ, ಕೋವಿಡ್ ೧೯.ಎಓ-೧ ರೂಪಾಂತರಿ ಉಪತಳಿ ಹಾಗೂ ಹದಿಹರೆಯದವರ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ‘ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ’ (ಎಎಂಪಿಕೆ) ಯೋಜನೆ ಅಡಿಯಲ್ಲಿ ಗುರುತಿಸಿ ಅನೀಮಿಯಾದಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೇರದಾಳ ಹೇಳಿದರು.ಇಲ್ಲಿನ ಎಂ.ಜಿ.ವ್ಹಿ.ಸಿ ಮಹಾವಿದ್ಯಾಲಯದಲ್ಲಿ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಆರೋಗ್ಯ ಮಹತ್ವದ ಬಗ್ಗೆ ಅರಿವು ಹೊಂದುವದು ಅವಶ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮತ್ತು ರೋಗ ನಿಯಂತ್ರಣದ ಕುರಿತು ಮುಂಜಾಗ್ರತೆ ಕ್ರಮಗಳನ್ನು ಹಾಗೂ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಅವಶ್ಯ ಇದೆ ಎಂದರು.ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿ ರೋಗ ಬಾರದಂತೆ ಮುಂಜಾಗೃತೆ ವಹಿಸುವುದು ಉತ್ತಮ. ರೋಗವಾಹಕ ಸೊಳ್ಳೆಗಳಿಂದ ರೋಗ ಹರಡದಂತೆ ಕ್ರಮ ವಹಿಸಲು ಅಗತ್ಯ…
ನಿಡಗುಂದಿ: ೩೯ ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಕಮದಾಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಬಿ. ಉಣ್ಣಿಭಾವಿ ಅವರನ್ನು ಗ್ರಾಮಸ್ಥರು, ನಾನಾ ಸಂಘಟನೆಗಳು, ಅವರ ಶಿಷ್ಯಂದಿರು ಸನ್ಮಾನಿಸಿ ಗುರುಭಕ್ತಿ ಮೆರೆದರು.ಉಣ್ಣಿಭಾವಿ ಅವರ ಸೇವೆ ಹಾಗೂ ವಿದ್ಯಾರ್ಥಿಗಳ ಕುರಿತು ಅವರ ಕಾಳಜಿ ಹಾಗೂ ಬದ್ಧತೆ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸಹಸ್ರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ ಉಣ್ಣಿಭಾವಿ ಅವರ ಸೇವೆ ಅನನ್ಯ ಎಂದರು. ನಿವೃತ್ತಿಯ ದಿನ ರಾಜ್ಯದ ನಾನಾ ಕಡೆಯಿಂದ ಅವರ ಶಿಷ್ಯರು ಬಂದು ಸನ್ಮಾನಿಸಿದ್ದು ಅವರ ಸೇವೆಗೆ ಸಂದ ಗೌರವ ಎಂದರು. ಸಮುದಾಯದ ಸಹಭಾಗಿತ್ವದಿಂದ ಕಮದಾಳ ಶಾಲೆಯಲ್ಲಿಯೂ ಸ್ಮಾರ್ಟ್ ಕ್ಲಾಸ್ ಅಳವಡಿಸಬೇಕು, ಅದಕ್ಕೆ ಬೇಕಾದ ಹಣವನ್ನು ಗ್ರಾಮಸ್ಥರು ನೀಡಬೇಕು ಎಂದರು. ಇದರಿಂದ ಮಕ್ಕಳ ಕಲಿಕೆ ಇನ್ನಷ್ಟು ದೃಡೀಕರಣಗೊಳ್ಳಲಿದೆ ಎಂದರು. ಪ್ರಾಸ್ತವಿಕವಾಗಿ ಮಾತನಾಡಿದ ಶಿಕ್ಷಕ ಎಂ.ಎಸ್. ಯಳಮೇಲಿ, ಎಲ್ಲಾ ಶಿಕ್ಷಕರನ್ನು ಒಗ್ಗೂಡಿಸಿ…
