ವಿಜಯಪುರ: ಜಿಲ್ಲೆಯ ೭ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ೫೬ ಸರ್ಕಾರಿ ಹಾಗೂ ಖಾಸಗಿ ಪ್ರೌಢ ಶಾಲೆಗಳಿಗೆ ಪ್ರತಿ ಶಾಲೆಗೆ ೦೧ ಲ್ಯಾಪಟಾಪ್ ಹಾಗೂ ೦೧ ಕಲರ್ ಪ್ರಿಂಟರ್‌ನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ನವದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿಯವರು ೨೦೨೪ ಹೊಸ ವರ್ಷದ ನಿಮಿತ್ಯ ಸೋಮವಾರದಂದು ಅವರ ಕಾರ್ಯಕರ್ತರು ಶಾಲೆಗಳಿಗೆ ತೆರಳಿ ಲ್ಯಾಪಟಾಪ್ ಹಾಗೂ ಪ್ರಿಂಟರಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನ ಬಾಗೇವಾಡಿ ತಾಲೂಕಿನ ೮ ಪ್ರೌಢ ಶಾಲೆಗಳು, ಇಂಡಿ ತಾಲೂಕಿನ ೮ ಪ್ರೌಢ ಶಾಲೆಗಳು, ಸಿಂದಗಿ ತಾಲೂಕಿನ ೮ ಪ್ರೌಢ ಶಾಲೆಗಳು, ಚಡಚಣ ತಾಲೂಕಿನ ೮ ಪ್ರೌಢ ಶಾಲೆಗಳು, ಬಬಲೇಶ್ವರ ತಾಲೂಕಿನ ೮ ಪ್ರೌಢ ಶಾಲೆಗಳು, ವಿಜಯಪೂರ ನಗರದ ೮ ಪ್ರೌಢ ಶಾಲೆಗಳು ಹಾಗೂ ಮುದ್ದೇಬಿಹಾಳ ತಾಲೂಕಿನ ೮ ಪ್ರೌಢ ಶಾಲೆಗಳನ್ನು ಒಳಗೊಂಡಿವೆ.
Subscribe to Updates
Get the latest creative news from FooBar about art, design and business.
Related Posts
Add A Comment

