ದೇವರಹಿಪ್ಪರಗಿ ಪಪಂ ಸದಸ್ಯರಿಂದ ತಹಶೀಲ್ದಾರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗೆ ಮನವಿ
ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲ್ಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಪಟ್ಟಣಪಂಚಾಯಿತಿ ಸದಸ್ಯರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಮಂಗಳವಾರ ಆಗಮಿಸಿದ ಪಟ್ಟಣ ಪಂಚಾಯಿತಿ ಸದಸ್ಯರು ಇಂಡಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿ ಸೃಜಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ದೇವರ ಹಿಪ್ಪರಗಿ ತಾಲ್ಲೂಕನ್ನು ನೂತನ ಜಿಲ್ಲೆಗೆ ಪರಿಗಣಿಸದೇ ಮೂಲ ಜಿಲ್ಲೆಯಾದ ವಿಜಯಪುರದಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ ಹಾಗೂ ಪ್ರಕಾಶ ಮಲ್ಲಾರಿ ಮಾತನಾಡಿ, ದೇವರಹಿಪ್ಪರಗಿ ತಾಲ್ಲೂಕು, ಜಿಲ್ಲಾ ಕೇಂದ್ರ ವಿಜಯಪುರಕ್ಕೆ ೩೦ ಕಿ.ಮೀಗಳ ಸನಿಹದಲ್ಲಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ-೫೦ರ ಮೂಲಕ ನೇರಸಂಪರ್ಕ ಹೊಂದಿದ್ದು, ಎಲ್ಲ ವಾಣಿಜ್ಯ, ವ್ಯಾಪಾರ ಸೇರಿದಂತೆ ದೈನಂದಿನ ವಹಿವಾಟುಗಳನ್ನು ಅವಲಂಬಿಸಿದೆ. ಆದ್ದರಿಂದ ವಿಜಯಪುರ ಜಿಲ್ಲೆಯೇ ತಾಲ್ಲೂಕಿನ ಜನತೆಯ ಆದ್ಯತೆಯಾಗಿದೆ ಎಂದರು.
ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಕಾಶೀನಾಥ ಬಜಂತ್ರಿ, ಉಮೇಶ ರೂಗಿ, ಸುಮಂಗಲಾ ಸೇಬೆನವರ, ಕಾಶೀನಾಥ ಜಮಾದಾರ, ಸಿಂಧೂರ ಡಾಲೇರ್, ಹುಸೇನ್ ಕೊಕಟನೂರ ಸೇರಿದಂತೆ ಪ್ರಮುಖರಾದ ಸೋಮು ದೇವೂರ, ನಬಿರಸೂಲ್ ಮಣೂರ, ಬಸಪ್ಪ ದೇವಣಗಾಂವ, ಕಾಶೀನಾಥ ಕಡ್ಲೇವಾಡ, ಅಬ್ದುಲ್ಲಾ ಬಾಗವಾನ ಇದ್ದರು.

