Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯುವಕರ ನ್ಯಾಯಯುತ ಹೋರಾಟ ಗೌರವಿಸಿ :ಬಬಲೇಶ್ವರ

ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ

“ನಮ್ಮ ಕಥಾ ಅರಮನೆ” ಮುನ್ನಡೆಸುವ ರೂವಾರಿ ಡಾ.ರಾಜಶೇಖರ ನಾಗೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಿಕ್ಷಕ ಉಣ್ಣಿಭಾವಿ ಅವರಿಗೆ ಬೀಳ್ಕೊಡುಗೆ
(ರಾಜ್ಯ ) ಜಿಲ್ಲೆ

ಶಿಕ್ಷಕ ಉಣ್ಣಿಭಾವಿ ಅವರಿಗೆ ಬೀಳ್ಕೊಡುಗೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp


ನಿಡಗುಂದಿ: ೩೯ ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಗೊಂಡ ಕಮದಾಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಬಿ. ಉಣ್ಣಿಭಾವಿ ಅವರನ್ನು ಗ್ರಾಮಸ್ಥರು, ನಾನಾ ಸಂಘಟನೆಗಳು, ಅವರ ಶಿಷ್ಯಂದಿರು ಸನ್ಮಾನಿಸಿ ಗುರುಭಕ್ತಿ ಮೆರೆದರು.
ಉಣ್ಣಿಭಾವಿ ಅವರ ಸೇವೆ ಹಾಗೂ ವಿದ್ಯಾರ್ಥಿಗಳ ಕುರಿತು ಅವರ ಕಾಳಜಿ ಹಾಗೂ ಬದ್ಧತೆ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸಹಸ್ರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ ಉಣ್ಣಿಭಾವಿ ಅವರ ಸೇವೆ ಅನನ್ಯ ಎಂದರು. ನಿವೃತ್ತಿಯ ದಿನ ರಾಜ್ಯದ ನಾನಾ ಕಡೆಯಿಂದ ಅವರ ಶಿಷ್ಯರು ಬಂದು ಸನ್ಮಾನಿಸಿದ್ದು ಅವರ ಸೇವೆಗೆ ಸಂದ ಗೌರವ ಎಂದರು. ಸಮುದಾಯದ ಸಹಭಾಗಿತ್ವದಿಂದ ಕಮದಾಳ ಶಾಲೆಯಲ್ಲಿಯೂ ಸ್ಮಾರ್ಟ್ ಕ್ಲಾಸ್ ಅಳವಡಿಸಬೇಕು, ಅದಕ್ಕೆ ಬೇಕಾದ ಹಣವನ್ನು ಗ್ರಾಮಸ್ಥರು ನೀಡಬೇಕು ಎಂದರು. ಇದರಿಂದ ಮಕ್ಕಳ ಕಲಿಕೆ ಇನ್ನಷ್ಟು ದೃಡೀಕರಣಗೊಳ್ಳಲಿದೆ ಎಂದರು. 
ಪ್ರಾಸ್ತವಿಕವಾಗಿ ಮಾತನಾಡಿದ ಶಿಕ್ಷಕ ಎಂ.ಎಸ್. ಯಳಮೇಲಿ, ಎಲ್ಲಾ ಶಿಕ್ಷಕರನ್ನು ಒಗ್ಗೂಡಿಸಿ ಇಡೀ ಶಾಲೆಯನ್ನು ಶೈಕ್ಷಣಿಕ ರಂಗದಲ್ಲಿ ಅಭಿವೃದ್ಧಿಯತ್ತ ಮುನ್ನಡೆಸಿದ ಕೀರ್ತಿ ಉಣ್ಣಿಭಾವಿ ಅವರದ್ದಾಗಿದೆ. ಕೇವಲ ನಾಲ್ಕೂವರೆ ವರ್ಷಗಳಲ್ಲಿ ಕಮದಾಳ ಶಾಲೆಯ ಭೌತಿಕ, ಶೈಕ್ಷಣಿಕ ವಾತಾವರಣವನ್ನೇ ಬೆರಗುಗೊಳಿಸುವಂತೆ ಬದಲಾವಣೆ ಮಾಡಿದ್ದಾರೆಂದು ಅವರ ಬಗ್ಗೆ ಮಾತನಾಡಿ ಭಾವುಕರಾದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಶಿಕ್ಷಕ ಸಂಘಟನೆಯ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ಲೋಕಣ್ಣವರ, ಅಥಣಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಂ. ಹಿರೇಮಠ ಮಾತನಾಡಿದರು.
ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ, ಬಿ.ಎಸ್. ಅವಟಿ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ, ನೌಕರರ ಸಂಘದ ಅಧ್ಯಕ್ಷ ಆರ್.ಎ. ನದಾಫ್, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಕಮತ, ಜಿ.ಎಸ್. ಪರಡಿಮಠ, ಪಟ್ಟಣ ಪಂಚಾಯ್ತಿ ಸದಸ್ಯ ಕರಿಯಪ್ಪ ಸಿಂದಗಿ, ಮುದ್ದಪ್ಪ ಯಳ್ಳಿಗುತ್ತಿ, ಆರ್.ಸಿ. ಹೊಸಗೌಡರ, ಬಸವರಾಜ ಮೇಟಿ, ಮಹಾದೇವಪ್ಪ ಮಾದರ, ಹನುಮಂತ ಮಾಳಗೊಂಡ, ಎಂ.ಆರ್. ಮಕಾನದಾರ್, ಎಂ.ಎಂ. ಮುಲ್ಲಾ, ಬಿ.ಡಿ. ಚಲವಾದಿ, ಕುಮಾರ ಬಾಗೇವಾಡಿ ಮತ್ತೀತರರು ಇದ್ದರು.
*ಸನ್ಮಾನ:*
ನಾನಾ ಕಡೆಯಿಂದ ಬಂದಿದ್ದ ಅವರ ಶಿಷ್ಯ ಬಳಗ, ನಾನಾ ಸಂಘಟನೆಗಳು, ನಾನಾ ಶಾಲೆಗಳ ನೂರಾರು ಜನರು ಬಿ.ಬಿ. ಉಣ್ಣಿಬಾವಿ ದಂಪತಿಯನ್ನು ಸನ್ಮಾನಿಸಿದರು. 
ಅಕ್ಕಮಹಾದೇವಿ ಪಟ್ಟಣಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ವಂದನಗೂರ ನಿರೂಪಿಸಿದರು. ಸುನಂದಾ ಬಡಿಗೇರ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯುವಕರ ನ್ಯಾಯಯುತ ಹೋರಾಟ ಗೌರವಿಸಿ :ಬಬಲೇಶ್ವರ

ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ

“ನಮ್ಮ ಕಥಾ ಅರಮನೆ” ಮುನ್ನಡೆಸುವ ರೂವಾರಿ ಡಾ.ರಾಜಶೇಖರ ನಾಗೂರ

‘ನಮ್ಮ ಕಥಾ ಅರಮನೆ’ ಕನ್ನಡದ ಅಕ್ಷರೋತ್ಸವಕ್ಕೆ ೮ನೇ ವಾರ್ಷಿಕೋತ್ಸವ ಸಂಭ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯುವಕರ ನ್ಯಾಯಯುತ ಹೋರಾಟ ಗೌರವಿಸಿ :ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ
    In ವಿಶೇಷ ಲೇಖನ
  • “ನಮ್ಮ ಕಥಾ ಅರಮನೆ” ಮುನ್ನಡೆಸುವ ರೂವಾರಿ ಡಾ.ರಾಜಶೇಖರ ನಾಗೂರ
    In ವಿಶೇಷ ಲೇಖನ
  • ‘ನಮ್ಮ ಕಥಾ ಅರಮನೆ’ ಕನ್ನಡದ ಅಕ್ಷರೋತ್ಸವಕ್ಕೆ ೮ನೇ ವಾರ್ಷಿಕೋತ್ಸವ ಸಂಭ್ರಮ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 24, 2026
    In ದಿನಪತ್ರಿಕೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 23, 2026
    In ದಿನಪತ್ರಿಕೆ
  • ಜು.೨೪ ರಂದು ವಿವಿಧ ಗ್ರಾಮಗಳಲ್ಲಿ ಪಿಂಚಣಿ ಅದಾಲತ್
    In (ರಾಜ್ಯ ) ಜಿಲ್ಲೆ
  • ಜಗಳ ಹಚ್ಚುವುದು ಬಸನಗೌಡರ ಚಟ :ಹಮೀದ್ ಮುಶ್ರೀಫ್
    In (ರಾಜ್ಯ ) ಜಿಲ್ಲೆ
  • ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ೭ ದಿನದೊಳಗೆ ಹೇಳಿಕೆ, ದಾಖಲೆ ಸಲ್ಲಿಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.