ಯಡ್ರಾಮಿ: ಪಟ್ಟಣದ ಆರಾಧ್ಯ ದೇವತೆ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವವು ಜ.೪ ಮತ್ತು ಜ.೫ ಎರೆಡು ದಿನಗಳ ಕಾಲ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಗುರುವಾರ (ಜ.೪) ರಂದು ಸಾಯಂಕಾಲ ದೇವಿಯನ್ನು ಬಣ್ಣದಿಂದ ದೇವಸ್ಥಾನಕ್ಕೆ ಕರೆದುಕೊಂಡು ಬಂದು, ಅಲಂಕಾರ ಮಾಡಿದ ರಥದಲ್ಲಿ ಶ್ರೀ ದೇವಿಯು ಆಸೀನಳಾಗುವಳು. ನಂತರ ರಾತ್ರಿ ೧೧ ಗಂಟೆಗೆ ಮಂಗಳೂರು ಹುಲಿ ವೇಷದಾರಿ ಕುಣಿತ, ಡೊಳ್ಳು ಕುಣಿತ, ಕುದುರೆ ಕುಣಿತ, ಕರಡಿ ಮಜಲು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಹಳೆ ಬಜಾರ್, ವಿರಕ್ತಮಠ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮೆರವಣಿಗೆ ಹೊರಟು ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ಬ್ರಾಹ್ಮಿ ಮಹೋರ್ತದಲ್ಲಿ ಶ್ರೀ ದೇವಿಗೆ ಗಂಗಾಸ್ನಾನ ನಡೆಯುವದು. ನಂತರ ಶ್ರೀ ದೇವಿಯ ಮೆರವಣಿಗೆ ಹೊರಟು ಪಟ್ಟಣದ ನಡುಗಟ್ಟೆ ಲಕ್ಷ್ಮೀದೇವಿಯ ದೇವಸ್ಥಾನದ ಹತ್ತಿರ ತಲುಪುವದು. ಸಾಯಂಕಾಲ ೪ರ ವರೆಗೆ ಭಕ್ತರ ಹರಕೆ, ಪೂಜೆ, ನೈವೇಧ್ಯ ನೆರವೇರಲಿದ್ದು, ನಂತರ ಶ್ರೀ ದೇವಿಯ ಮೆರವಣಿಗೆ ಪ್ರಾರಂಭಗೊಂಡು ಮೂಲ ಸ್ಥಾನವನ್ನು ತಲುಪುವಳು. ನಂತರ ಭಕ್ತರು ಮತ್ತು ಅರ್ಚಕರಿಂದ ದೇವಿಗೆ ಮಹಾಮಂಗಳಾರತಿ ಜರುಗುವುದರೊಂದಿಗೆ ಜಾತ್ರೆ ಮಂಗಲಗೊಳ್ಳುವದು.
ಜಾತ್ರೆಗೆ ಬರುವ ಭಕ್ತರಿಗೆ ದೇವಸ್ಥಾನ ಕಮಿಟಿ ಹಾಗೂ ಭಕ್ತರಿಂದ ಪ್ರಸಾದ ವ್ಯವಸ್ಥೆ ಇದ್ದು, ಭಕ್ತರು ಎರಡು ದಿನದ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಪುನೀತರಾಗಬೇಕು ಎಂದು ವಿನಂತಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

