ಬಸವನಬಾಗೇವಾಡಿ: ಪಟ್ಟಣದ ಗಣಪತಿ ವೃತ್ತದಲ್ಲಿ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆಯಂಗವಾಗಿ ಮಂಗಳವಾರ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗುರು ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದ ಅವರು, ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಆಧ್ಯಾತ್ಮಿಕ ಜ್ಙಾನವನ್ನು ಎಲ್ಲರಿಗೂ ತಲುಪಿಸಿದ್ದಾರೆ. ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಬಸವನಬಾಗೇವಾಡಿಯಲ್ಲಿ ೨೦೧೫ ರ ನವೆಂಬರ್ ತಿಂಗಳಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ಅವರು ನಡೆಸಿದ ಪ್ರವಚನ ನಾವೆಂದು ಮರೆಯುವಂತಿಲ್ಲ. ಅವರ ಪ್ರವಚನ ಕಾಲದಲ್ಲಿ ಬಸವನಬಾಗೇವಾಡಿಯನ್ನು ಸದಾ ಸ್ಮರಿಸುತ್ತಿದ್ದರು. ಅವರು ನೀಡಿರುವ ಜೀವನ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಅಶೋಕ ಬಾಗೇವಾಡಿ, ಮಹಾಂತೇಶ ಹಂಜಗಿ, ಅಶೋಕ ಗುಳೇದ, ಅನಿಲ ಮುಳವಾಡ ಶ್ರೀಶೈಲ ಮುಳವಾಡ, ರೇವಣಸಿದ್ದ ಜಾಡರ, ಪ್ರಭಾಕರ ಖೇಡದ, ಸದಾಶಿವ ಬೇವನೂರ, ಶ್ರೀಶೈಲ ಬೇವನೂರ, ಮುದುಕಣ್ಣ ನಾಗೂರ, ಮಹಾದೇವ ಹಂಜಗಿ ಇತರರು ಇದ್ದರು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

