Author: editor.udayarashmi@gmail.com

ಸಿಂದಗಿ: ವಿದ್ಯಾರ್ಥಿಗಳು ಕೀಳರಿಮೆ, ಹಿಂಜರಿಕೆ ತೊರೆದು, ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಹಲವಾರು ದೌರ್ಬಲ್ಯಗಳು, ನ್ಯೂನ್ಯತೆಗಳಿದ್ದು, ಅದನ್ನು ಎದುರಿಸಿ ಮುಂದುವರೆಯಬೇಕು ಎಂದು ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಮುಕ್ತಾ ಹಿರೇಮಠ ಕಿವಿಮಾತು ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಮಹಾವಿದ್ಯಾಲಯದ ಸಭಾಭವನದಲ್ಲಿ ಶ್ರೀ ಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿ ಸ್ಥಾನ ವಹಿಸಿ ಅವರು ಮಾತನಾಡಿದರು.ಸಾನಿಧ್ಯ ವಹಿಸಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿದರು.ಈ ವೇಳೆ ಪ್ರಾಚಾರ್ಯ ಎಂ.ಎಸ್ ಹೈಯಾಳಕರ ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಾಧ್ಯಕ್ಷ ಎಸ್.ಎಸ್. ಸಜ್ಜನ, ಪ್ರಧಾನ ಕಾರ್ಯದರ್ಶಿ ಗಂಗಾ ಗಾಲೀಬ ದೇವಣಗಾಂವ, ಎಂ.ಎಸ್. ಸಜ್ಜನ, ಸುವರ್ಣಾ ಹಿಪ್ಪರಗಿ ವೇದಿಕೆಯ ಮೇಲಿದ್ದರು.ಈ ವೇಳೆ ಬೋರಗಿ ಎಂ.ಪಿ.ಎಸ್ ಶಾಲೆಗೆ ಶಿಕ್ಷಕಿಯಾಗಿ ಆಯ್ಕೆಯಾದ ಎಂ.ಎಸ್ ಸಜ್ಜನ ಹಾಗೂ ವಿದ್ಯಾರ್ಥಿನಿ ಸುವರ್ಣ ಹಿಪ್ಪರಗಿ ಅವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿನಿ ವಿಶಾಲಾಕ್ಷಿ ಮಾಲಿಪಾಟೀಲ ನಿರೂಪಿಸಿದರು. ಉಪನ್ಯಾಸಕಿ ಹೇಮಾ ಹಿರೇಮಠ…

Read More

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬಿ ಎಚ್ಚರಿಕೆ ಸಿಂದಗಿ: ತಾಲೂಕಿನಲ್ಲಿ ೫೧ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿದ್ದಾರೆ. ಈ ರೀತಿಯಾಗಿ ಮಕ್ಕಳು ಬಳಲಬಾರದು ಎಂಬ ದೃಷ್ಠಿಯಿಂದ ಸರಕಾರ ತಾಲೂಕು ಆಸ್ಪತ್ರೆಯಲ್ಲಿ ಎನ್‌ಆರ್‌ಸಿ ಮಕ್ಕಳ ಘಟಕಗಳನ್ನು ಸ್ಥಾಪಿಸಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬಿ ಹೇಳಿದರು.ಪಟ್ಟಣಕ್ಕೆ ದಿಡೀರನೇ ವಿವಿಧ ಇಲಾಖೆ ಮತ್ತು ಶಾಲೆಗಳಿಗೆ ಭೇಟಿ ನೀಡಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ದೃಷ್ಠಿಯಿಂದ ಮಕ್ಕಳ ಪೌಷ್ಠಿಕ ಪುನಃಶ್ಚೇತನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿನ ವೈದ್ಯಾಧಿಕಾರಿ ನಿರ್ಲಕ್ಷ್ಯದಿಂದಾಗಿ ಬಂದಿತ್ತು. ಅದನ್ನು ಖುದ್ದು ನಾವಾಗಿಯೇ ತೆಗೆಯುವ ಪರಿಸ್ಥಿತಿ ಬಂದಿದೆ. ತಾಲೂಕು ಆಸ್ಪತ್ರೆಯ ನವಜಾತ ಶಿಶುವಿನ ಘಟಕದಲ್ಲಿ ವಿದ್ಯುತ್ ವ್ಯವಸ್ಥೆ ಸರಿಯಾಗಿಲ್ಲ. ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆಯಿಲ್ಲ. ಪತ್ಯ ಅಹಾರವು ಸರಿಯಾಗಿ ನೀಡುತ್ತಿಲ್ಲ ಎಂಬುದು ಅಲ್ಲಿನ ಬಾಣಂತಿಯರಿಗೆ ವಿಚಾರಿಸಿದಾಗ ತಿಳಿದು ಬಂದಿದೆ ಹಾಗಾಗಿ ನಾಳೆ ವಿಜಯಪುರದಲ್ಲಿ ನಡೆಯುವ ಸಭೆಗೆ…

Read More

ಜ.೧೧ – ೧೨ರಂದು ಸಿಂದಗಿ ತಾಲೂಕು ಜಿಲ್ಲೆಯನ್ನಾಗಿ ರಚಿಸಬೇಕೆಂದು ಮನವಿ ಸಲ್ಲಿಕೆ ಸಿಂದಗಿ: ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಾರಂಭವಾದ ಈ ಹೋರಾಟದ ಹಿನ್ನೆಲೆಯಲ್ಲಿ ಬರುವ ಜ.೧೧ ಅಥವಾ ೧೨ರಂದು ಸಿಎಂ ಭೇಟಿಗಾಗಿ ನಿಯೋಗ ಹೋಗಲು ನಿರ್ಧಾರ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ನಗರದ ಬಸವ ಮಂಟಪದಲ್ಲಿ ಭಾನುವಾರ ಸಾಯಂಕಾಲ ಹಮ್ಮಿಕೊಂಡ ಸಿಂದಗಿಯನ್ನು ಜಿಲ್ಲೆಯನ್ನಾಗಿ ಮಾಡುವ ಬೇಡಿಕೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ವಿಪ ಮಾಜಿ ಸದಸ್ಯ ಅರುಣ ಶಹಾಪೂರ, ಸಾಹಿತಿಗಳು, ಸಂಘಟನೆಯ ಪ್ರಮುಖರು, ಮಹಿಳಾ ಪ್ರತಿನಿಧಿಗಳು, ಪತ್ರಕರ್ತರು ಸೇರಿಕೊಂಡು ಹತ್ತಾರು ಜನರ ನಿಯೋಗವನ್ನು ರಚಿಸಿ ಸಿಎಂ. ಡಿಸಿಎಂ, ಸಚಿವರ ಮತ್ತು ಸರಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಿಂದಗಿ ತಾಲೂಕನ್ನು ಜಿಲ್ಲೆಯನ್ನಾಗಿ ರಚಿಸಬೇಕು ಎಂಬ ಮನವಿ ಸಲ್ಲಿಕೆ ಮಾಡಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಮಕ್ಕಳ ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಮಾತನಾಡಿದರು.ಈ ವೇಳೆ ವಿಪ ಮಾಜಿ ಸದಸ್ಯ ಅರುಣ…

Read More

ವಿಜಯಪುರ: ಕವಿಯ ಭಾಷೆಯ ಒಳಗಿನ ಪಲ್ಲಟಗಳು ಕವಿತೆಯ ರೂಪ ಮತ್ತು ವಸ್ತುವಿನಲ್ಲೂ ಹುಡುಕಾಟ, ವಿನಾಶಕಾರಿ ಕ್ರಮಗಳು, ಚಿಂತೆಗಳು, ಮಾನವ ಜನಾಂಗದ ಆರೋಗ್ಯ ಮತ್ತು ಮನಸ್ಸನ್ನು ಕೇಂದ್ರಿಕರಿಸುವ ಆಲೋಚನೆಗೆ ಲೇಖಕರು ಸಾಮಾನ್ಯ ಮೌಲ್ಯಗಳ ಅರ್ಥಪೂರ್ಣತೆಗಾಗಿ ಕವನಗಳು ಶ್ರೇಷ್ಟತೆಯನ್ನು ಪಡೆಯುತ್ತವೆ ಎಂದು ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭೀಮಣ್ಣ ಸ.ಬಜಂತ್ರಿ ಅವರ ‘ನಾನ್ಯಾರು ನನ್ನವರು ಯಾರು’? ಆಧುನಿಕ ವಚನ ಸಂಕಲನ ಕೃತಿ ಪರಿಚಯ ಮಾಡುತ್ತ ಸಂಕಲನದಲ್ಲಿ ಅಂತರಂಗದ ಶೋಧನೆ, ಮನೋವೈಜ್ಞಾನಿಕ ಚಿಂತನೆ, ಆಧ್ಯಾತ್ಮಿಕ ಚಿಂತನೆ ಬದುಕಿನ ಸಂಬಂಧ ಇವೆಲ್ಲವೂ ಬದುಕಿನ ಸಿಹಿ-ಕಹಿ ಅನುಭವಗಳನ್ನು ಪ್ರೀತಿಯಿಂದ ಎಲ್ಲವೂ ಭಾವನಾತ್ಮಕವಾಗಿ ತೆರೆದುಕೊಳ್ಳುತ್ತಿವೆ. ಸಂಕಲನ ಕನ್ನಡ ಸಾಹಿತ್ಯಕ್ಕೆ ನೆಮ್ಮದಿ ಹಾಗೂ ಭರವಸೆಯ ಕೃತಿ ಎಂದರು.ಜಿಲ್ಲಾ ಶಿಕ್ಷಣಾಧಿಕಾರಿ ಡಾ. ಎ.ಎಮ್.ಲಿಮಕರ ಮಾತನಾಡುತ್ತ, ಸಾಮಾಜಿಕ ವ್ಯವಸ್ಥೆಯ ಕರಾಳತೆಯ ಬಗ್ಗೆ ಸುತ್ತಲಿನ ಬದುಕಿನಲ್ಲಿ ನಡೆಯುವ ವಿದ್ಯಮಾನಗಳು, ಮೌಡ್ಯತೆ, ಅನಿಷ್ಟಗಳ ಬಗೆಗೆ ಅರಿವು ಮೂಡಿಸುವ ಕೃತಿ ಎಂದು ಹೇಳಿದರು. ಆರ್.ಪಿ.ಚವ್ಹಾಣ, ಅಕ್ಷಯ ನಾಗೇಶಿ ಮಾತನಾಡಿದರು.…

Read More

ಕಜಾಪ ಆಲಮೇಲ ತಾಲೂಕು ಘಟಕದ ಉದ್ಘಾಟನೆ | ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಆಗ್ರಹ ಆಲಮೇಲ: ಜಾನಪದ ಸಂಸ್ಕೃತಿಯು ಗಟ್ಟಿಯಾದ ತಳಹದಿಯಲ್ಲಿ ಹುಟ್ಟಿ ವಿಶಾಲವಾದ ಮನೋಭೂಮಿಕೆಯಲ್ಲಿ ಹರಡಿಕೊಂಡಿದೆ. ಸಾರ್ವತ್ರಿಕ ಮೌಲ್ಯಗಳಾದ ಪ್ರೀತಿ, ಕರುಣೆ, ಸಹನೆ, ಸಮಾನತೆ, ಭಾವೈಕ್ಯತೆ, ಸಹಬಾಳ್ವೆ ಮತ್ತು ಆರೋಗ್ಯಕರ ವಿಷಯಾದಿಗಳು ಜಾನಪದ ಸಂಸ್ಕೃತಿಯ ಆಶಯವಾಗಿವೆ. ಜಾನಪದ ಇಂದು ರೂಪ ಬದಲಾಯಿಸಿದರೂ ತತ್ವ -ಚಿಂತನೆಗಳು ಬದಲಾಗಿಲ್ಲ. ಅದಕ್ಕಾಗಿ ಜಾನಪದಕ್ಕೆ ಎಂದಿಗೂ ಅಳಿವಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಅಭಿಪ್ರಾಯಪಟ್ಟರು.ತಾಲೂಕಿನ ಕಡಣಿ ಗ್ರಾಮದ ಶಂಕರಲಿಂಗೇಶ್ವರ ದೇವಾಲಯದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಮಂಟಪದ ಗೀಗೀಪದಕಾರ ಕಡಣಿ ಕಲ್ಲಪ್ಪ ವೇದಿಕೆಯಲ್ಲಿ, ಕನ್ನಡ ಜಾನಪದ ಪರಿಷತ್ ಆಲಮೇಲ ತಾಲೂಕು ಘಟಕದ ಉದ್ಘಾಟನೆ ಮಾಡಿ ಮಾತನಾಡುತ್ತಾ ಹಲಸಂಗಿ ಗೆಳೆಯರ ಬಳಗದ ಜಾನಪದ ಸೇವೆ ನಾಡಿಗೆ ಅನನ್ಯವಾದುದು. ಸರಕಾರ ಹಲಸಂಗಿ ಗೆಳೆಯರ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಆಗ್ರಹಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಮಾತನಾಡಿ, ಹಳ್ಳಿಗಳು ಜಾನಪದ…

Read More

ಇಂಡಿ: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಉತ್ತರ ವಲಯ ಮಟ್ಟದ ಪೋಲಿಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಇಂಡಿಯ ಗ್ರಾಮಾಂತರ ಸಿಪಿಐ ಮಲ್ಲಿಕಾರ್ಜುನ ಎಂ. ಡಪ್ಪಿನ ಅವರು ಪ್ರಥಮ ಸ್ಥಾನ ಪಡೆದು ಆರು ಚಿನ್ನದ ಪದಕ ಪಡೆದಿದ್ದಾರೆ.ಸಾಧನೆ ಮಾಡಿದ ಡಪ್ಪಿನ ಅವರಿಗೆ ಬೆಳಗಾವಿ ಉತ್ತರ ವಲಯದ ಪೋಲಿಸ್ ಮಹಾನಿರ್ದೇಶಕ ವಿಕಾಸಕುಮಾರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಮಲ್ಲಿಕಾರ್ಜುನ ಡಪ್ಪಿನ ೨೦೦೫ ರಲ್ಲಿ ತರಬೇತಿ ಪಡೆದು ಬೆಳಗಾವಿಯಲ್ಲಿ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಹುಬ್ಬಳ್ಳಿ ಧಾರವಾಡ ರಾಯಚೂರು, ಯಾದಗಿರಿ ಬೀದರ್, ಕಲಬುರಗಿ, ಬಳ್ಳಾರಿ, ವಿಜಯನಗರ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.ಪೋಲಿಸ್ ವೃತ್ತಿ ನೈಪುಣ್ಯತೆಯೊಂದಿಗೆ ಕೈಗೊಳ್ಳ ಬೇಕಾದ ವೈಜ್ಞಾನಿಕ ಕಾನೂನು ಜ್ಞಾನ, ಸಾಕ್ಷಿಗಳ ಸಂಗ್ರಹದಲ್ಲಿ ನೈಪುಣ್ಯತೆ ಬೆರಳಚ್ಚು ತನಿಖೆ, ವಿಧಿ ವಿಜ್ಞಾನ, ಪಾದದ ಮುದ್ರೆ, ಫೋಟೋ ವಿಡಿಯೋಗ್ರಫಿ, ಶ್ವಾನದಳಪೋಲಿಸ್ ವೃತ್ತಿಪರ ತನಿಖೆ ಸೇರಿದಂತೆ ಹಲವು ಮಹತ್ವದ ಪರೀಕ್ಷೆಯಲ್ಲಿ ಸಿಪಿಐ ಎಂ.ಎಂ. ಡಪ್ಪಿನರವರು ಅತ್ಯುತ್ತಮ ಸಾಧನೆ ತೋರಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.ಲಖನೌದಲ್ಲಿ ೬೭ ನೇ ರಾಷ್ಟ್ರೀಯ ಕರ್ತವ್ಯ ಕೂಟ ಹಿನ್ನೆಲೆಯಲ್ಲಿ ಎಲ್ಲ ತಾಲೂಕು, ಜಿಲ್ಲಾ ಹಾಗೂ ವಲಯ…

Read More

ಇಂಡಿ: ಕುವೆಂಪುರವರ ಸಾಹಿತ್ಯ ೨೦ನೇ ಶತಮಾನದ ಸಾಕ್ಷಿಪ್ರಜ್ಞೆಯಾಗಿ, ೨೧ನೇ ಶತಮಾನದಲ್ಲೂ ಪ್ರಭಾವಿಯಾಗಿದೆ. ಶ್ರೀಸಾಮಾನ್ಯನನ್ನು ಜಗನ್ಮಾನ್ಯನೆಂದು ನಂಬಿ ಎಲ್ಲ ವಯೋಮಾನದ ಓದುಗರ ಆಸಕ್ತಿ ಅಭಿರುಚಿಗಳನ್ನು ತಣಿಸುವಂತೆ ಆಯಾ ಕಾಲ ಮತ್ತು ಸಂದರ್ಭಗಳಿಗೆ ಸ್ಪಂದಿಸುವ ಸಾಹಿತ್ಯ ಸೃಷ್ಟಿಸಿದ್ದು ಕುವೆಂಪು ಅವರ ವೈಶಿಷ್ಟ್ಯವಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಶನಿವಾರ ಸಂಜೆ ಇಂಡಿಯ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ ಕೇಂದ್ರದಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-೨ ರಲ್ಲಿ ಕುವೆಂಪು ಮತ್ತು ನಾಟಕಗಳು ಕುರಿತು ಅವರು ಉಪನ್ಯಾಸ ನೀಡಿದರು.ಕನ್ನಡ ರಂಗಭೂಮಿಗೆ ಕುವೆಂಪುರವರ ಕೊಡುಗೆ ಅನನ್ಯ.ಅವರು ಪಾರಂಪರಿಕ ಪುರಾಣ ಕಥೆಗಳನ್ನು ಸಮಕಾಲೀನ ಅಗತ್ಯಕ್ಕೆ ಅನುಗುಣವಾಗಿ ಮರು ರೂಪಿಸಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಗಿದ್ದಾರೆ. ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಶ್ಮಶಾನ ಕುರುಕ್ಷೇತ್ರ, ಮಹಾರಾತ್ರಿ ಇಂಥ ನಾಟಕಗಳ ಮೂಲಕ ಪುರಾಣಗಳ ಮರು ವ್ಯಾಖ್ಯಾನ ಮಾಡಿ,ಕನ್ನಡ ಸಾಹಿತ್ಯದ ಬೃಹನ್ಮೂರ್ತಿಯಾಗಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಿರಗಿ ಪ್ರೌಢ ಶಾಲಾ ಶಿಕ್ಷಕ ವೈ.ಜಿ. ಬಿರಾದಾರ ಮಾತನಾಡಿ, ಮನುಜ ಮತ, ವಿಶ್ವಪಥ ಎಂಬ ಮಹಾನ್…

Read More

ಆಲಮಟ್ಟಿ: ಔಷಧ ವ್ಯಾಪಾರವು ಸೇವಾ ಮನೋಧರ್ಮ ವ್ಯಾಪಾರವಾಗಿದ್ದು, ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಔಷಧ ವ್ಯಾಪಾರಿಗಳ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಔಷಧ ವ್ಯಾಪಾರಿಗಳು ಬಹು ಎಚ್ಚರಿಕೆಯಿಂದ ವಹಿವಾಟು ನಡೆಸಬೇಕು ಎಂದು ವಿಜಯಪುರದ ಸಹಾಯಕ ಔಷಧ ನಿಯಂತ್ರಕ ಆರ್. ಪರಶುರಾಮ ಹೇಳಿದರು.ಭಾನುವಾರ, ಇಲ್ಲಿಯ ಸಮುದಾಯ ಭವನದಲ್ಲಿ ಜರುಗಿದ ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಔಷಧೀಯ ಕ್ಷೇತ್ರದಲ್ಲಿ ನೂತನ ಆವಿಷ್ಕಾರದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಔಷಧ ಕ್ಷೇತ್ರದಲ್ಲಿ ನಿತ್ಯವೂ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿರುತ್ತವೆ, ಸಾಕಷ್ಟು ಬದಲಾವಣೆಗಳು ಆಗಿರುತ್ತವೆ, ಅವುಗಳ ಬಗ್ಗೆ ಕಾರ್ಯಾಗಾರ ಏರ್ಪಡಿಸಿರುವುದರಿಂದ ಔಷಧ ವ್ಯಾಪಾರಸ್ಥರಿಗೆ ಪರಿಣಿತಿ ಹೊಂದಲು ಸಹಾಯವಾಗಲಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೆ.ಆರ್. ಎತ್ತಿನಮನಿ ಮಾತನಾಡಿದರು.ಸಹಾಯಕ ಔಷಧ ನಿಯಂತ್ರಕಿ ಶ್ವೇತಾ ನಾಗಠಾಣ, ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ಡಾ ಸಂತೋಷ ರಾಮದುರ್ಗ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್. ಬಿರಾದಾರ, ಔಷಧ ವ್ಯಾಪಾರಸ್ಥರ ಸಂಘದ…

Read More

ಕರಜಗಿ-ವಿಜಯಪುರರಾಷ್ಟ್ರೀಯ ಹೆದ್ದಾರಿ ನಿರ್ಮಾಣ | ಫೆಬ್ರವರಿ ಅಂತ್ಯಕ್ಕೆ ಭೂಮಿಪೂಜೆ ಇಂಡಿ: ಗಡಿಭಾಗದ ಕರಜಗಿ ಗ್ರಾಮದಿಂದ ಇಂಡಿ ಪಟ್ಟಣದ ಮಾರ್ಗವಾಗಿ ವಿಜಯಪುರಕ್ಕೆ ಸಾಗಲಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಭೂಸ್ವಾಧಿನ ಪ್ರಕ್ರಿಯೆ ನಡದಿದ್ದು, ಫೆಬ್ರವರಿ ಕೊನೆಯ ವಾರದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡುವ ಚಿಂತನೆ ಹೊಂದಿದ್ದೇವೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆ ಸಧ್ಯ ನಾಗಠಾಣ ಗ್ರಾಮದವರೆಗೆ ಬಂದಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಗುತ್ತಿಗೆದಾರನಿಗೆ ಕಾಮಗಾರಿ ಆದೇಶ ನೀಡಲಾಗುವುದು. ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಸಚಿವರ ಗಮನ ಸೆಳೆದು ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂಮಿಪೂಜೆ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹಮ್ಮಿಕೊಂಡಿರುವ ಅಭಿವೃದ್ದಿ ಕಾರ‍್ಯಕ್ರಮಗಳು ಹಾಗೂ ವಿಜಯಪುರ ಜಿಲ್ಲೆಯ ಅಭಿವೃದ್ದಿಗೆ ನೀಡಿರುವ ಲಕ್ಷಕೋಟಿ ಅನುಧಾನದಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತದಾರರ ಬಳಿ ಹೋಗುತ್ತೇವೆ ಎಂದ ಅವರು, ಹಿಂದೆಂದೂ ಯಾವ ಸರ್ಕಾರವೂ ನೀಡದಷ್ಟು ಅನುದಾನ…

Read More

ದೇವರಹಿಪ್ಪರಗಿ: ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ನಿಧಾ ಹೊನ್ನುಟಗಿ ಇತ್ತೀಚಿಗೆ ತಿಕೋಟಾದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಉರ್ದು ಮಾಧ್ಯಮದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ವಿದ್ಯಾರ್ಥಿನಿಯ ಸಾಧನೆಗೆ ಪ್ರೌಢಶಾಲಾ ಮುಖ್ಯಗುರು, ಎಲ್ಲ ಶಿಕ್ಷಕರು ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.

Read More