ಜ.೧೧ – ೧೨ರಂದು ಸಿಂದಗಿ ತಾಲೂಕು ಜಿಲ್ಲೆಯನ್ನಾಗಿ ರಚಿಸಬೇಕೆಂದು ಮನವಿ ಸಲ್ಲಿಕೆ
ಸಿಂದಗಿ: ತಾಲೂಕನ್ನು ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಾರಂಭವಾದ ಈ ಹೋರಾಟದ ಹಿನ್ನೆಲೆಯಲ್ಲಿ ಬರುವ ಜ.೧೧ ಅಥವಾ ೧೨ರಂದು ಸಿಎಂ ಭೇಟಿಗಾಗಿ ನಿಯೋಗ ಹೋಗಲು ನಿರ್ಧಾರ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ಬಸವ ಮಂಟಪದಲ್ಲಿ ಭಾನುವಾರ ಸಾಯಂಕಾಲ ಹಮ್ಮಿಕೊಂಡ ಸಿಂದಗಿಯನ್ನು ಜಿಲ್ಲೆಯನ್ನಾಗಿ ಮಾಡುವ ಬೇಡಿಕೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ವಿಪ ಮಾಜಿ ಸದಸ್ಯ ಅರುಣ ಶಹಾಪೂರ, ಸಾಹಿತಿಗಳು, ಸಂಘಟನೆಯ ಪ್ರಮುಖರು, ಮಹಿಳಾ ಪ್ರತಿನಿಧಿಗಳು, ಪತ್ರಕರ್ತರು ಸೇರಿಕೊಂಡು ಹತ್ತಾರು ಜನರ ನಿಯೋಗವನ್ನು ರಚಿಸಿ ಸಿಎಂ. ಡಿಸಿಎಂ, ಸಚಿವರ ಮತ್ತು ಸರಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಿಂದಗಿ ತಾಲೂಕನ್ನು ಜಿಲ್ಲೆಯನ್ನಾಗಿ ರಚಿಸಬೇಕು ಎಂಬ ಮನವಿ ಸಲ್ಲಿಕೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳ ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಮಾತನಾಡಿದರು.
ಈ ವೇಳೆ ವಿಪ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಶೋಕ ಅಲ್ಲಾಪೂರ, ಆನಂದ ಶಾಬಾದಿ, ಡಾ.ದಸ್ತಗೀರ ಮುಲ್ಲಾ (ಇಂಗಳಗಿ), ಈರಣ್ಣ ರಾವೂರ, ಸುರೇಶ ಪೂಜಾರಿ, ಪ್ರಕಾಶ ಹಿರೇಕುರುಬರ, ಸಂತೋಷ ಪಾಟೀಲ ಡಂಬಳ, ಶಿವಾನಂದ ಕಲಬುರ್ಗಿ, ವೈ.ಸಿ.ಮಯೂರ, ಸಂತೋಷ ಮಣಿಗಿರಿ, ಶಿಲ್ಪಾ ಕುದರಗೊಂಡ, ಸುನಂದಾ ಯಂಪೂರೆ ಮಹಾನಂದ ಬಮ್ಮಣ್ಣಿ, ಮಲ್ಲಿಕಾರ್ಜುನ ಅಲ್ಲಾಪೂರ, ದಾನಪ್ಪ ಜೋಗುರ, ಯಶವಂತಾರಗೌಡ ರೂಗಿ, ಮಹಾದೇವಿ ಹಿರೇಮಠ, ಶೈಲಜಾ ಸ್ಥಾವರಮಠ ಸೇರಿದಂತೆ ಮಹಿಳಾ ಪ್ರತಿನಿಧಿಗಳು, ಸಾಹಿತಿಗಳು, ಬಸವದಳದ ಸದಸ್ಯರು, ದಲಿತ ಮುಖಂಡರು, ಮಾಧ್ಯಮ ಮಿತ್ರರು ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು, ಸಂಚಾಲಕರು, ಪದಾಧಿಕಾರಿಗಳು ಭಾಗವಹಿಸಿದ್ದರು.

