ಸಿಂದಗಿ: ವಿದ್ಯಾರ್ಥಿಗಳು ಕೀಳರಿಮೆ, ಹಿಂಜರಿಕೆ ತೊರೆದು, ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಹಲವಾರು ದೌರ್ಬಲ್ಯಗಳು, ನ್ಯೂನ್ಯತೆಗಳಿದ್ದು, ಅದನ್ನು ಎದುರಿಸಿ ಮುಂದುವರೆಯಬೇಕು ಎಂದು ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಮುಕ್ತಾ ಹಿರೇಮಠ ಕಿವಿಮಾತು ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಮಹಾವಿದ್ಯಾಲಯದ ಸಭಾಭವನದಲ್ಲಿ ಶ್ರೀ ಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿ ಸ್ಥಾನ ವಹಿಸಿ ಅವರು ಮಾತನಾಡಿದರು.
ಸಾನಿಧ್ಯ ವಹಿಸಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿದರು.
ಈ ವೇಳೆ ಪ್ರಾಚಾರ್ಯ ಎಂ.ಎಸ್ ಹೈಯಾಳಕರ ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಾಧ್ಯಕ್ಷ ಎಸ್.ಎಸ್. ಸಜ್ಜನ, ಪ್ರಧಾನ ಕಾರ್ಯದರ್ಶಿ ಗಂಗಾ ಗಾಲೀಬ ದೇವಣಗಾಂವ, ಎಂ.ಎಸ್. ಸಜ್ಜನ, ಸುವರ್ಣಾ ಹಿಪ್ಪರಗಿ ವೇದಿಕೆಯ ಮೇಲಿದ್ದರು.
ಈ ವೇಳೆ ಬೋರಗಿ ಎಂ.ಪಿ.ಎಸ್ ಶಾಲೆಗೆ ಶಿಕ್ಷಕಿಯಾಗಿ ಆಯ್ಕೆಯಾದ ಎಂ.ಎಸ್ ಸಜ್ಜನ ಹಾಗೂ ವಿದ್ಯಾರ್ಥಿನಿ ಸುವರ್ಣ ಹಿಪ್ಪರಗಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ವಿಶಾಲಾಕ್ಷಿ ಮಾಲಿಪಾಟೀಲ ನಿರೂಪಿಸಿದರು. ಉಪನ್ಯಾಸಕಿ ಹೇಮಾ ಹಿರೇಮಠ ಸ್ವಾಗತಿಸಿದರು. ಪಲ್ಲವಿ ಹೆಳವರ ಪ್ರಾರ್ಥಿಸಿದರು. ಗಂಗಾ ಗಾಲೀಬ ದೇವಣಗಾಂವ ವಂದಿಸಿದರು.
ಇದೇ ಸಂದರ್ಭದಲ್ಲಿ ಡಾ.ಚನ್ನಪ್ಪ ಕಟ್ಟಿ, ಡಾ.ಎಂ.ಎಂ.ಪಡಶೆಟ್ಟಿ, ಭೀಮನಗೌಡ ಸಿಂಗನಳ್ಳಿ, ಮುಕ್ತಾಯಕ್ಕ ಕತ್ತಿ, ಬಸಮ್ಮ ಧರಿ, ಮಹಾವಿದ್ಯಾಲಯದ ಸಿಬ್ಬಂದಿ ಗಿರೀಶ ಕುಲಕರ್ಣಿ, ಯು.ಸಿ ಪೂಜೇರಿ, ಎಂ.ಪಿ. ಸಾಗರ. ಜಿ.ಎ. ನಂದಿಮಠ, ಆರ್.ಎ. ಹಾಲಕೇರಿ, ಎ.ಎ.ಕೋಕಣಿ, ಲಕ್ಷ್ಮೀ ಮಾರ್ಸನಳ್ಳಿ, ಹೇಮಾ ಕಾಸರ, ಸತೀಶ ಕಕ್ಕಸಗೇರಿ, ಶಿವಶಂಕರ ಕುಂಬಾರ, ಲಕ್ಷ್ಮೀ ಭಜಂತ್ರಿ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

