Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026

ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ

ಮಾಹಿತಿ ಹಕ್ಕು ಕಾಯ್ದೆಯನ್ನು ಸಂಪೂರ್ಣ ಅಧ್ಯಯನ ಮಾಡಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕುವೆಂಪು ಸಾಹಿತ್ಯ ೨೦ನೇ ಶತಮಾನದ ಸಾಕ್ಷಿಪ್ರಜ್ಞೆ :ಬಂಡೆ
(ರಾಜ್ಯ ) ಜಿಲ್ಲೆ

ಕುವೆಂಪು ಸಾಹಿತ್ಯ ೨೦ನೇ ಶತಮಾನದ ಸಾಕ್ಷಿಪ್ರಜ್ಞೆ :ಬಂಡೆ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಕುವೆಂಪುರವರ ಸಾಹಿತ್ಯ ೨೦ನೇ ಶತಮಾನದ ಸಾಕ್ಷಿಪ್ರಜ್ಞೆಯಾಗಿ, ೨೧ನೇ ಶತಮಾನದಲ್ಲೂ ಪ್ರಭಾವಿಯಾಗಿದೆ. ಶ್ರೀಸಾಮಾನ್ಯನನ್ನು ಜಗನ್ಮಾನ್ಯನೆಂದು ನಂಬಿ ಎಲ್ಲ ವಯೋಮಾನದ ಓದುಗರ ಆಸಕ್ತಿ ಅಭಿರುಚಿಗಳನ್ನು ತಣಿಸುವಂತೆ ಆಯಾ ಕಾಲ ಮತ್ತು ಸಂದರ್ಭಗಳಿಗೆ ಸ್ಪಂದಿಸುವ ಸಾಹಿತ್ಯ ಸೃಷ್ಟಿಸಿದ್ದು ಕುವೆಂಪು ಅವರ ವೈಶಿಷ್ಟ್ಯವಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶನಿವಾರ ಸಂಜೆ ಇಂಡಿಯ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ ಕೇಂದ್ರದಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-೨ ರಲ್ಲಿ ಕುವೆಂಪು ಮತ್ತು ನಾಟಕಗಳು ಕುರಿತು ಅವರು ಉಪನ್ಯಾಸ ನೀಡಿದರು.
ಕನ್ನಡ ರಂಗಭೂಮಿಗೆ ಕುವೆಂಪುರವರ ಕೊಡುಗೆ ಅನನ್ಯ.ಅವರು ಪಾರಂಪರಿಕ ಪುರಾಣ ಕಥೆಗಳನ್ನು ಸಮಕಾಲೀನ ಅಗತ್ಯಕ್ಕೆ ಅನುಗುಣವಾಗಿ ಮರು ರೂಪಿಸಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಗಿದ್ದಾರೆ. ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಶ್ಮಶಾನ ಕುರುಕ್ಷೇತ್ರ, ಮಹಾರಾತ್ರಿ ಇಂಥ ನಾಟಕಗಳ ಮೂಲಕ ಪುರಾಣಗಳ ಮರು ವ್ಯಾಖ್ಯಾನ ಮಾಡಿ,ಕನ್ನಡ ಸಾಹಿತ್ಯದ ಬೃಹನ್ಮೂರ್ತಿಯಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಿರಗಿ ಪ್ರೌಢ ಶಾಲಾ ಶಿಕ್ಷಕ ವೈ.ಜಿ. ಬಿರಾದಾರ ಮಾತನಾಡಿ, ಮನುಜ ಮತ, ವಿಶ್ವಪಥ ಎಂಬ ಮಹಾನ್ ಸಂದೇಶದ ಮೂಲಕ ಅಲ್ಪಮಾನವರೆಲ್ಲ ವಿಶ್ವಮಾನವರಾಗಬೇಕೆಂದು ಕರೆಕೊಟ್ಟು, ಅದರಂತೆ ಬದುಕಿದ್ದ ಕುವೆಂಪು ಪ್ರಪಂಚದಲ್ಲಿರುವ ಎಲ್ಲ ಧರ್ಮಗಳ ಎಲ್ಲ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ, ಅವುಗಳ ಸಾರವನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು ಎಂದು ಹೇಳಿದರು.
ನಾದ ಕೆ.ಡಿ. ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಂ. ಬಂಡಗರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಖ್ಯಾತ ಸಂಶೋಧಕ ಡಾ. ಚನ್ನಪ್ಪ ಕಟ್ಟಿ, ಗೀತಯೋಗಿ, ಬಸವರಾಜ ಕಿರಣಗಿ, ಶ್ರೀಧರ ಹಿಪ್ಪರಗಿ, ದಾನಯ್ಯ ಮಠಪತಿ, ಡಾ. ಮಂಜುನಾಥ ಕೋಟೆಣ್ಣವರ, ರಾಚು ಕೊಪ್ಪ, ಸುಜಾತಾ ಬೀಳಗಿ, ಸುನೀಲ ಗೌರ, ಸಂಗನಗೌಡ ಹಚಡದ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಶಿಕ್ಷಕಿ ಸರೋಜಿನಿ ಮಾವಿನಮರ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕಿ ಬಿ.ಸಿ. ಭಗವಂತಗೌಡರ ನಿರೂಪಿಸಿದರು. ಶಿಕ್ಷಕ ವೀರಣ್ಣ ದಸ್ತರೆಡ್ಡಿ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026

ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ

ಮಾಹಿತಿ ಹಕ್ಕು ಕಾಯ್ದೆಯನ್ನು ಸಂಪೂರ್ಣ ಅಧ್ಯಯನ ಮಾಡಿ

ಸಂಸ್ಕರಣಾ ಘಟಕ ಅನುಷ್ಠಾನಕ್ಕೆ ಅರ್ಜಿ ಆಹ್ವಾನ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 03, 2026
    In ದಿನಪತ್ರಿಕೆ
  • ರೈತರಿಗೆ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ನೀಡುವ ಮಹದಾಸೆ
    In (ರಾಜ್ಯ ) ಜಿಲ್ಲೆ
  • ಮಾಹಿತಿ ಹಕ್ಕು ಕಾಯ್ದೆಯನ್ನು ಸಂಪೂರ್ಣ ಅಧ್ಯಯನ ಮಾಡಿ
    In (ರಾಜ್ಯ ) ಜಿಲ್ಲೆ
  • ಸಂಸ್ಕರಣಾ ಘಟಕ ಅನುಷ್ಠಾನಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗ ಮೇಳ ಇಂದು
    In (ರಾಜ್ಯ ) ಜಿಲ್ಲೆ
  • ನಮ್ಮ ಸರಕಾರ ಅಭಿವೃದ್ಧಿಗೆ ಬದ್ಧ :ಸಚಿವ ಎಂ.ಬಿ.ಪಾಟೀಲ
    In (ರಾಜ್ಯ ) ಜಿಲ್ಲೆ
  • ನೀಟ್ ಪರೀಕ್ಷೆ: ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ದ್ವಿತೀಯ ಪಿಯುಸಿ ಪರೀಕ್ಷೆ-೨ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಪರಿಶೀಲನಾ ಅದಾಲತ್ ಮುಂದೂಡಿಕೆ: ಡಿಸಿ ಡಾ.ಆನಂದ
    In (ರಾಜ್ಯ ) ಜಿಲ್ಲೆ
  • ಮದ್ಯದಂಗಡಿ ಆರಂಭಿಸದಿರಲು ಆಗ್ರಹಿಸಿ ಮುಸ್ಲಿಂ ಬಾಂಧವರ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.