Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ಇಡೀ ಸಮಾಜಕ್ಕೆ ತನ್ನದೇಯಾದ ಅತ್ಯಮೂಲ್ಯವಾದ ಸಂದೇಶಗಳನ್ನು ನೀಡಿದ ವೇಮನರ ಆದರ್ಶಗಳು ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿವೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಹೇಳಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಜರುಗಿದ ವೇಮನರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವೇಮನರು ತನ್ನನ್ನು ತಾನು ತಿದ್ದಿಕೊಂಡು ಮಹಾಯೋಗಿಯಾಗಿ ಬೆಳೆದರು ಎಂದರು.ಬಸವಶರಣ ಸಂಗಮ ಸೇವಾ ಸಮೀತಿ ಅಧ್ಯಕ್ಷ ಸಂಗಪ್ಪಣ್ಣ ತಡವಲ್ ಮಾತನಾಡಿ, ವೇಮನರ ಬಾಲ್ಯ, ಸಮಾಜ ಅವರನ್ನು ಕಂಡ ರೀತಿ, ಮುಂದೆ ಅವರು ಬದಲಾಗಿ ಸಮಾಜಕ್ಕೆ ನೀಡಿದ ದಿವ್ಯಸಂದೇಶಗಳ ಕುರಿತು ಮಾಹಿತಿ ನೀಡಿದರು.ಶಿಕ್ಷಕ ಪ್ರಲ್ಹಾದ್ ಕುಲಕರ್ಣಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಮಾಡಿದ ಸರ್ಕಾರದ ನಿಲುವನ್ನು ಶ್ಲಾಘಿಸಿ, ಧನ್ಯವಾದ ಸಲ್ಲಿಸಲಾಯಿತು.ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್.ವಾಲೀಕಾರ, ಮುಖ್ಯಗುರು ಪಿ.ಸಿ.ತಳಕೇರಿ, ಉಪನ್ಯಾಸಕ ಆಕ್ರಮ್ ಪಾಷಾ, ಕೆ.ಎಮ್.ನಂದಿ, ಪ್ರಕಾಶ ಪೂಜಾರಿ, ಎಸ್.ಜಿ.ತಾವರಖೇಡ, ಗೊಲ್ಲಾಳ ಬಿರಾದಾರ, ಬಸವರಾಜ ಬಡಿಗೇರ, ಕೆ.ಜಿ.ಪವಾರ ಸೇರಿದಂತೆ ಸರ್ಕಾರಿ ಪದವಿ…
ದೇವರಹಿಪ್ಪರಗಿ: ಗಣರಾಜ್ಯೋತ್ಸವ ದಿನಾಚರಣೆಯ ಜವಾಬ್ದಾರಿಗಳನ್ನು ತಾಲ್ಲೂಕು ಆಡಳಿತದ ಜೊತೆಗೆ ವಿವಿಧ ಇಲಾಖೆಗಳು ವಹಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಗಣರಾಜ್ಯೋತ್ಸವ, ಅಂಗವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಚರಣೆಯ ಜೊತೆಗೆ ಸ್ಥಳೀಯ ಶಾಲೆಗಳ ಮಕ್ಕಳ ಉಪಹಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ವಜಾರೋಹಣದ ಕುರಿತು ಸೂಕ್ತ ಕ್ರಮವಹಿಸಲು ಸೂಚಿಸಿದರು.ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಮಕ್ಕಳಿಗೆ ಉಪಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದರು.ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಯೋಧನ ಸ್ಮಾರಕದ ರಿಪೇರಿ ಕುರಿತು ಗಮನ ಸೆಳೆದರು.ನಂತರ ಕಾಶೀನಾಥ ತಳಕೇರಿ, ಜಾನು ಗುಡಿಮನಿ, ಬಸವರಾಜ ತಳಕೇರಿ, ರಾವುತ ತಳಕೇರಿ ಮಾತನಾಡಿದರು.ಶಿರಸ್ತೇದಾರ ಸುರೇಶ ಮ್ಯಾಗೇರಿ, ತಾಲ್ಲೂಕು ಪಂಚಾಯಿತಿಯ ಶ್ರೀನಿವಾಸ ಪವಾರ, ಸಿಆರ್‌ಪಿ ವಿಜಯಲಕ್ಷ್ಮೀ ನವಲಿ, ಸಿಡಿಪಿಓ ಎಸ್.ಎನ್.ಹಿರೇಮಠ, ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ, ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣಸಂಸ್ಥೆಯ ಎ.ಕೆ.ಆನಂದ, ಮಹಿಳಾ ಪಿಎಸ್‌ಐ ಎಸ್.ಬಿ.ನಡುವಿನಕೇರಿ, ಶಾಂತಾ ಕಸ್ತೂರಿ, ವ್ಹಿ.ವಾಯ್.ಹಳ್ಳಿ, ಆರ್.ಆರ್.ಕೋರಿ, ಆರ್.ಜಿ.ಕೋಟಿನ್, ಪಿ.ಸಿ.ತಳಕೇರಿ, ಶಿವಶರಣ ಪೂಜಾರಿ, ನಾನಾಗೌಡ…
ಇಂಡಿ: ಪಟ್ಟಣದ ಮಧ್ಯ ಭಾಗದಲ್ಲಿ ಪಾಳುಬಿದ್ದಿದ್ದಜಾಗವನ್ನು ಗುರುತಿಸಿ, ಅದನ್ನು ಸದುಪಯೋಗಮಾಡಿಕೊಂಡು 30 ಕೋಟಿ ರೂ,ಗಳ ವೆಚ್ಚದಲ್ಲಿ 246ವ್ಯಾಪಾರಿ ಮಳಿಗೆಗಳುಳ್ಳ ಮೆಗಾ ಮಾರುಕಟ್ಟೆ ನಿರ್ಮಿಸಿದ್ದು, ಅವುಗಳಲ್ಲಿ ಈಗಾಗಲೇ 100 ಮಳಿಗೆಗಳು ವ್ಯಾಪಾರಕ್ಕೆ ಸಿದ್ದವಾಗಿವೆ. ಅವುಗಳನ್ನು ಬಹಿರಂಗ ಹರಾಜು ಮಾಡಿ ಪುರಸಭೆಗೆ ಆದಾಯ ಮಾಡಿಕೊಡಬೇಕೆಂದು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದಕ್ಕೆ ಪುರಸಭೆಯ ಸದಸ್ಯರು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ಯಶವಂತರಾಯಗೌಡ ಅವರು ಮನವಿ ಮಾಡಿಕೊಂಡರು.ಅವರು ಗುರುವಾರ ಮೆಗಾ ಮಾರುಕಟ್ಟೆಯಆವರಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೆಗಾ ಮಾರುಕಟ್ಟೆಗೆ ಶಾಸಕರ ಅನುದಾನದಲ್ಲಿ 8ಕೋಟಿ ನೀಡಲಾಗಿದೆ. ಇನ್ನುಳಿದ ಹಣವನ್ನು ಸರ್ಕಾರದವಿವಿಧ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳಲಾಗಿದೆ. ಆಸಾಲವನ್ನು ಪುರಸಭೆ ಸಕಾಲದಲ್ಲಿ ತೀರಿಸುವ ಉದ್ದೇಶದಿಂದ ಸರ್ಕಾರಿ ನಿಯಮಾನುಸಾರ ಸಿದ್ದಗೊಂಡಿರುವ ಮೆಗಾ ಮಾರುಕಟ್ಟೆಯ ಮಳಿಗೆಗಳನ್ನು ಹರಾಜು ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದರು.ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಅನೀಲಗೌಡ ಬಿರಾದಾರ ಮಾತನಾಡಿ, ಮುಂಬರುವ ದಿನಾಂಕ 22 ಮತ್ತು 23 ರಂದು ನಡೆಯುವ ಮೆಗಾ ಮಾರುಕಟ್ಟೆಯ ಮಳಿಗೆಗಳ ಹರಾಜಿಗೆ ಗ್ರೀನ್…
ಲಿಂಬೆ ನಾಡಿನಲ್ಲಿ ರಾಮನಾಮ ಜಪ | ಶರವೇಗದಲ್ಲಿ ಸಾಗುತ್ತಿರುವ ಮಂತ್ರಾಕ್ಷತೆ ಕಾರ್ಯ *- ಶಂಕರಲಿಂಗ ಜಮಾದಾರ*ಇಂಡಿ: ಭಾರತದ ಸನಾತನ ಯಾತ್ರೆಯಲ್ಲಿ ಹಿಂದೂ ಧರ್ಮದ ಧಾರ್ಮಿಕ, ಸಾಂಸ್ಕೃತಿಕ ಚರಿತ್ರೆಯ ಇತಿಹಾಸದಲ್ಲಿ ದೇವತಾ ಪುರುಷರಾಗಿರುವ ಪ್ರಭು ಶ್ರೀರಾಮಚಂದ್ರರ ಪ್ರಾಣ ಪ್ರತಿಷ್ಠಾನ ಸಮಾರಂಭ ಅಯೋಧ್ಯೆಯಲ್ಲಿ ಜರಗುತ್ತಿರುವ ಪ್ರಯುಕ್ತ ಲಿಂಬೆ ನಾಡಿನಲ್ಲಿ ಮಂತ್ರಾಕ್ಷತೆ ಹಂಚುವ ಪವಿತ್ರ ಕಾರ್ಯ ಅತ್ಯಂತ ಸಡಗರ- ಸಂಭ್ರಮದಿಂದ ನಡೆಯುತ್ತಿದೆ.ಭವಿಷ್ಯದ ಜಿಲ್ಲಾ ಕೇಂದ್ರ ಎಂದು ಬಿಂಬಿತಗೊಂಡು, ಸದ್ಯ ಪ್ರತ್ಯೇಕ ಜಿಲ್ಲಾ ಕೇಂದ್ರಕ್ಕಾಗಿ ಅತೀ ಹೆಚ್ಚು ಪ್ರತಿಭಟನೆ ನಡೆಸುತ್ತಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಅತ್ಯಂತ ವೈಶಿಷ್ಟ್ಯದಿಂದ ಮಂತ್ರಾಕ್ಷತೆ ಹಂಚುವ ಮತ್ತು ಸ್ವೀಕರಿಸುವ ಕಾರ್ಯ ಅದ್ದೂರಿಯಿಂದ ನಡೆಯುತ್ತಿದೆ.*ಭೀಮಾತೀರದಲ್ಲಿ ರಾಮನಪೂಜೆ*ರಾಜ್ಯದಲ್ಲಿಯೇ ಲಿಂಬೆನಾಡು ಭೀಮಾ ತೀರ ಎಂದೇ ಪ್ರಖ್ಯಾತಿ ಹೊಂದಿರುವ ಇಂಡಿಯ ಪ್ರತಿ ಮನೆ ಮನೆಯಲ್ಲೂ ಅತ್ಯಂತ ಸಡಗರ-ಸಂಭ್ರಮದೊಂದಿಗೆ ಶ್ರೀರಾಮನ ಭಾವಚಿತ್ರ, ಕರಪತ್ರ ಹಾಗೂ ಮಂತ್ರಾಕ್ಷತೆ ಕಾರ್ಯ ಸ್ವೀಕರಿಸುವಲ್ಲಿ, ಅದರಲ್ಲೂ ವಿಶೇಷವಾಗಿ ಗೃಹಣಿಯರು ಅರಿಶಿಣ, ಕುಂಕುಮ ಹಚ್ಚಿ ಮತ್ತು ಮಂಗಳರಾತಿ ಬೆಳಗಿ ಮಂತ್ರಾಕ್ಷತೆ ಸ್ವೀಕರಿಸುತ್ತಿರುವ ವಿಶೇಷ ಸ್ಮರಣಿಯ ಘಳಿಗೆಯಾಗಿ,…
ವಿಜಯಪುರ: ಗ್ರಾಮೀಣ ತಾಲೂಕಿನ ಕಗ್ಗೋಡ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯದ 2024-25 ನೇ ಸಾಲಿಗೆ ಆರನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆ ನಡೆಸಲಾಗುವುದು. 2023-24ನೇ ಸಾಲಿನಲ್ಲಿ ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಐದನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಕರೆಯಲಾಗಿದೆ.ಫೆಬ್ರುವರಿ ಆರರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಎಸ್.ಎ.ಟಿ.ಎಸ್ ನಂಬರ, ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ವಿದ್ಯಾರ್ಥಿಯ ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಪಾಲಕರ ಮೊಬೈಲ್ ನಂಬರ್ ನಮೂದಿಸಬೇಕು.ಹೆಚ್ಚಿನ ಮಾಹಿತಿಗಾಗಿ ಮುಖ್ಯೋಪಾಧ್ಯಾಯರು 9902716236, ನೋಡಲ್ ಅಧಿಕಾರಿಗಳು 9880832448, ಕಚೇರಿ ಸಹಾಯಕರು 8971163743 ಇವರನ್ನು ಸಂಪರ್ಕಿಸಲು ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಎಸ್. ಬಳೋಲಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರಹ್ಮದೇವನಮಡು: ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮದ ಕೆರೆಗೆ ಶುಕ್ರವಾರ ಸಿಂದಗಿ ತಾಪಂ ಇಒ ರಾಮು ಅಗ್ನಿ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ನಂತರ ಮಾತನಾಡಿ, ಕೆರೆಯಲ್ಲಿರುವ ಮೊಸಳೆ ಸೆರೆ ಹಿಡಿಯಲು ಕೆರೆ ಸುತ್ತಲಿನ ಪ್ರದೇಶಕ್ಕೆ ಸಿಸಿ ಟೀವಿ, ಜಾಳಗಿ ಅಳವಡಿಸುವಂತೆ ಸ್ಥಳದಲ್ಲಿದ್ದ ಗ್ರಾಪಂ ಪಿಡಿಒ ನಾಯ್ಕೋಡಿ ಅವರಿಗೆ ಸೂಚಿಸಿ, ತಾಲೂಕು ಅರಣ್ಶಾಧಿಕಾರಿಗಳಿಗೆ ಫೋನಾಯಿಸಿ ಮಾತನಾಡಿ, ಮೊಸಳೆಗೆ ಬಲೆ ಹಾಕಿ ಸೆರೆ ಹಿಡಿಯುವಂತೆ ತಿಳಿಸಿದರು.ಈ ವೇಳೆ ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಗ್ರಾಪಂ ಅಧ್ಶಕ್ಷರ ಪ್ರತಿನಿಧಿ ಹಣಮಂತ್ರಾಯಗೌಡ ಬಿರಾದಾರ, ಸಾಹೇಬಪಟೇಲ ಮುರಡಿ, ದೇವಿಂದ್ರ ತೊನಶ್ಶಾಳ, ಸಂಗನಗೌಡ ಪಾಟೀಲ, ಭೀಮನಗೌಡ ಹೆಬ್ಬಾಳ, ಮಲ್ಲು ಕೆಂಭಾವಿ, ಹಣಮಂತ ಯಂಟಮಾನ, ಇಶ್ಮಾಯಿಲ್ ತಂಗಡಗಿ, ಮಲ್ಲು ಭಜಂತ್ರಿ, ಉಷೇನ ಯಂಕಂಚಿ, ಬಸನಗೌಡ ಪಾಟೀಲ, ದಿನೇಶ ಕಡಕೋಳ,ಅಂಬ್ರಿಶ ಪಾಟೀಲ, ಸುರೇಶ ತಳವಾರ ಇತರರಿದ್ದರು.
ವಿಜಯಪುರ: ವಿಶ್ವಗುರು ಬಸವಣ್ಣ ರಾಜ್ಯದ ಸಾಂಸ್ಕೃತಿಕನಾಯಕ ಎಂದು ಸರಕಾರ ಘೋಷಣೆ ಮಾಡಿದ್ದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಸಾಮಾಜಿಕ ಸಮಾನತೆಯ ಹರಿಕಾರ ಕ್ರಾಂತಿಯೋಗಿ ಬಸವಣ್ಣ ಅನುಯಾಯಿಗಳು, ಪೂಜ್ಯಶ್ರೀಗಳು ಸರಕಾರದ ಈ ಸೂಕ್ತ ನಿರ್ಧಾರದಿಂದ ಅತ್ಯಂತ ಸಂತುಷ್ಟರಾಗಿದ್ದಾರೆ.ಎಲ್ಲಾ ಧರ್ಮದ ತತ್ವ ಸಿದ್ಧಾಂತ ಬಸವಣ್ಣನ ವಚನ ಸಾಹಿತ್ಯದಲ್ಲಿ ಕಾಣುತ್ತೇವೆ. ವಿಶ್ವವೇ ಅನುಕರಣೆ ಮಾಡುವ ಬಸವಣ್ಣನವರ ವಚನ ಸಾಹಿತ್ಯದ ವಿವಿಧ ಭಾಷೆಗಳಲ್ಲಿ ಅನುವಾದ ಗೊಂಡಿವೆ ಹಾಗೂ ರಾಜ್ಯದ ಎಲ್ಲಾ ತರಗತಿಯ ಪಠ್ಯ ಪುಸ್ತಕದಲ್ಲಿ ವಚನ ಸಾಹಿತ್ಯದ ಪಾಠಗಳು ಅಳವಡಿಸಬೇಕೆಂದು ಹಾಸಿಂಪೀರ ವಾಲಿಕಾರ ಸರ್ಕಾರವನ್ನು ಒತ್ತಾಯಿಸಿದರು.
ತಿಕೋಟಾ: ತಾಲ್ಲೂಕಿನ ಘೋಣಸಗಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಾಲ್ಲೂಕ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಧಿಡೀರ್ ಭೇಟಿ ನೀಡಿ ನರೇಗಾ ಯೋಜನೆಯಡಿ ಮಂಜೂರಾದ ಹೈಟೆಕ್ ಶೌಚಾಲಯದ ಅಪೂರ್ಣ ಕಾಮಗಾರಿ ಶುಕ್ರವಾರ ವೀಕ್ಷಣೆ ಮಾಡಿ ಬೇಗನೆ ಕಾಮಗಾರಿ ಮುಗಿಸುವಂತೆ ಪಿಡಿಓ ಅವರಿಗೆ ಸೂಚಿಸಿದರು.ಎರಡು ವರ್ಷದ ಹಿಂದೆ ಮಂಜೂರಾದ ಈ ಹೈಟೆಕ್ ಶೌಚಾಲಯದ ಕಾಮಗಾರಿ ಇನ್ನೂ ಮುಗಿದಿಲ್ಲ. ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಶೌಚಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದೆ ಬೇಗ ಕಾಮಗಾರಿ ಮುಗಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿ ಕೊಡಬೇಕು ಎಂದು ಹಲವು ಬಾರಿ ವಿನಂತಿಸಿದರೂ ಕಾಮಗಾರಿ ಮಾಡಲು ವಿಳಂಬವಾಗಿದೆ. ಈಗಲಾದರೂ ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಅನೂಕೂಲ ಮಾಡಿ ಕೊಡಬೇಕು ಎಂದು ಇಓ ಐನಾಪುರ ಅವರಿಗೆ ಶಾಲಾ ಮುಖ್ಯೋಪಾಧ್ಯಾಯ ಪಿ.ಎಸ್.ಗದ್ಯಾಳ ವಿನಂತಿಸಿದರು.ವರ್ಗಕೋಣೆಗೆ ಭೇಟಿ: ಶಾಲಾ ವರ್ಗಕೋಣೆಗೆ ಭೇಟಿ ನೀಡಿದ ಅವರು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವ ತಯಾರಿ ಮಾಡುತ್ತಿರುವದನ್ನು ವೀಕ್ಷಿಸಿದರು. ವರ್ಗಕೋಣೆಯಲ್ಲಿ ಪ್ರೋಜೆಕ್ಟರ್ ಬಳಸಿ ಮಕ್ಕಳು…
ವಿಜಯಪುರ: ಯುವಕರು ಸ್ವಯಂ ಉದ್ಯೋಗದ ಮೂಲಕ ಸಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗದಾತರಾಗಿ ತಾವೇ ಹೊರಹೊಮ್ಮಬೇಕು. ಅಂದಾಗ ಮಾತ್ರ ಯುವಸಮೂಹ ಯಶಸ್ವಿಯಾಗಲು ಸಾಧ್ಯ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕ ಎಸ್. ಎಂ. ಪಾಟೀಲ ಹೇಳಿದರು.ಬಬಲೇಶ್ವರ ಪಟ್ಟಣದಲ್ಲಿ ಸಚಿನ ಗಿಫ್ಟ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರವು ಉದ್ದಿಮೆ ಶೀಲಾ ಕೌಶಲ್ಯ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಯುವಕರು ಜೀವನದಲ್ಲಿ ಸಾಧನೆಯನ್ನು ಮಾಡಬೇಕು. ಅಂದಾಗ ಮಾತ್ರ ಭಾರತವು ಅಭಿವೃದ್ಧಿಶೀಲವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.ಸಮಾಜ ಕಲ್ಯಾಣ ಅಧಿಕಾರಿಗಳಾದಂತ ಸದಾನಂದ ಬಡಿಗೇರ ವಿಶ್ವದಲ್ಲಿ ಅತಿ ಹೆಚ್ಚು ಯುವ ಸಮೂಹವನ್ನು ಹೊಂದಿರುವ ಭಾರತವು ವೃತ್ತಿಪರ ಕೌಶಲ್ಯವನ್ನು ಹೊಂದುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು.ಸ್ವಯಂ ಉದ್ಯೋಗದ ಮೂಲಕ ಯುವಕರು ತಮ್ಮ ಸಾವಲಂಬನೆಯನ್ನು ಕಂಡಕೊಂಡು ತಂದೆ ತಾಯಿಗೆ ಹೊರಿಯಾಗದೆ ತಮ್ಮ ಬದುಕನ್ನು ತಾವು ರೂಪಿಸಿಕೊಳ್ಳಲು ಸ್ವಯಂ ಉದ್ಯೋಗ ಒಂದೇ ದಾರಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಂತಾಬಾಯಿ ಹಂಚಿನಾಳ ವಸತಿ ನಿಲಯ ಪಾಲಕರು, ಎಸ್ ಎಲ್ ನಾಟಿಕರ ವಸತಿ ನಿಲಯ…
ಢವಳಗಿ: ನಮ್ಮೂರ ಪ್ರೌಢಶಾಲೆ ಅಭಿವೃದ್ಧಿಗಾಗಿ ಒಂದು ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿ ಕುಡಿವ ನೀರು ಹಾಗೂ ಇನ್ನೀತರ ಮೂಲಸೌಕರ‍್ಯ ಕಲ್ಪಿಸಿಕೊಡುವಲ್ಲಿ ಶ್ರಮಿಸುತ್ತೇನೆ ಎಂದು ತಾಲ್ಲೂಕಿನ ರೂಢಗಿ ಸರಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ನೂತನ ಅಧ್ಯಕ್ಷ ಸಂಗಮೇಶ ಎನ್.ಹಾರಿವಾಳ ಹೇಳಿದರು.ತಾಲ್ಲೂಕಿನ ರೂಢಗಿ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ನೂತನ ಎಸ್.ಡಿ.ಎಂ.ಸಿ ರಚನೆ ಪ್ರಕ್ರಿಯೆ ಬಳಿಕ ಅವರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.ರೂಢಗಿ ಸರಕಾರಿ ಪ್ರೌಢಶಾಲೆಗೆ ಬರಲು ಸರಿಯಾದ ರಸ್ತೆ ಇಲ್ಲ. ಈ ಶಾಲೆಯನ್ನು ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಂಜೂರಾತಿ ಮಾಡಿಸಿಕೊಟ್ಟಿದ್ದರು. ಈ ಭಾಗದಲ್ಲಿ ಪಿಯು ಕಾಲೇಜು ಆರಂಭಕ್ಕೆ ಬೇಡಿಕೆ ಇದ್ದು, ಅದರ ಬಗ್ಗೆ ಗ್ರಾಮಸ್ಥರ ಜೊತೆಗೂಡಿ ಸಂಬಂಧಿಸಿದ ಶಾಸಕರು, ಸಚಿವರು,ಸ ರಕಾರದ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ ಸೂಳಿಭಾವಿ, ಮುಖಂಡ ಶ್ರೀಶೈಲ್ ದೊಡಮನಿ ಮಾತನಾಡಿದರು.ಶಿಕ್ಷಣ ಸಂಯೋಜಕ ಎಚ್.ಎ.ಮೇಟಿ, ಮುಖಂಡರಾದ ಎಸ್.ಪಿ.ಸೇವಾಲಾಲ್, ಮುಖ್ಯಗುರು ಬಿ.ಎಚ್.ನಾಯಕರ ಮಾತನಾಡಿದರು.ಗ್ರಾ.ಪಂ ಅಧ್ಯಕ್ಷ ಬಸವರಾಜ ಬೆಲ್ಲದ, ಗ್ರಾಮಸ್ಥರಾದ ಬಸವರಾಜ ದೊಡಮನಿ, ಶಿವರಾಜ ಲಮಾಣಿ,…
