ವಿಜಯಪುರ: ಯುವಕರು ಸ್ವಯಂ ಉದ್ಯೋಗದ ಮೂಲಕ ಸಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗದಾತರಾಗಿ ತಾವೇ ಹೊರಹೊಮ್ಮಬೇಕು. ಅಂದಾಗ ಮಾತ್ರ ಯುವಸಮೂಹ ಯಶಸ್ವಿಯಾಗಲು ಸಾಧ್ಯ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕ ಎಸ್. ಎಂ. ಪಾಟೀಲ ಹೇಳಿದರು.
ಬಬಲೇಶ್ವರ ಪಟ್ಟಣದಲ್ಲಿ ಸಚಿನ ಗಿಫ್ಟ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರವು ಉದ್ದಿಮೆ ಶೀಲಾ ಕೌಶಲ್ಯ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಯುವಕರು ಜೀವನದಲ್ಲಿ ಸಾಧನೆಯನ್ನು ಮಾಡಬೇಕು. ಅಂದಾಗ ಮಾತ್ರ ಭಾರತವು ಅಭಿವೃದ್ಧಿಶೀಲವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಸಮಾಜ ಕಲ್ಯಾಣ ಅಧಿಕಾರಿಗಳಾದಂತ ಸದಾನಂದ ಬಡಿಗೇರ ವಿಶ್ವದಲ್ಲಿ ಅತಿ ಹೆಚ್ಚು ಯುವ ಸಮೂಹವನ್ನು ಹೊಂದಿರುವ ಭಾರತವು ವೃತ್ತಿಪರ ಕೌಶಲ್ಯವನ್ನು ಹೊಂದುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು.ಸ್ವಯಂ ಉದ್ಯೋಗದ ಮೂಲಕ ಯುವಕರು ತಮ್ಮ ಸಾವಲಂಬನೆಯನ್ನು ಕಂಡಕೊಂಡು ತಂದೆ ತಾಯಿಗೆ ಹೊರಿಯಾಗದೆ ತಮ್ಮ ಬದುಕನ್ನು ತಾವು ರೂಪಿಸಿಕೊಳ್ಳಲು ಸ್ವಯಂ ಉದ್ಯೋಗ ಒಂದೇ ದಾರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಂತಾಬಾಯಿ ಹಂಚಿನಾಳ ವಸತಿ ನಿಲಯ ಪಾಲಕರು, ಎಸ್ ಎಲ್ ನಾಟಿಕರ ವಸತಿ ನಿಲಯ ಪಾಲಕರು ಬಬಲೇಶ್ವರ, ರೂಪ ಮೆತ್ರಿ, ಬಸವರಾಜ.ಸಾವಳಗಿ , ಗುರುರಾಜ ಕೊಪ್ಪದ್, ಮುಂತಾದ ಅಧಿಕಾರಿಗಳು ಪಾಲ್ಗೊಂಡಿದ್ದರು
ಗಿಫ್ಟ್ ಸೆಂಟರ್ ಮಾಲೀಕ ಸುನಿಲ್ ಕಾಂಬಳೆ, ಸಚಿನ್ ಕಾಂಬಳೆ, ಪ್ರೊ ಶಹಣೂರ್ ಗಾಡೆಕಾರ, ರಮೇಶ. ಮುದ್ದೇಬಿಹಾಳ ಸಂತೋಷ, ಕುಮಾರ್ ಮಾದರ, ಸಂತೋಷ್. ಹರಿಜನ್ ಲಕ್ಷ್ಮಣ್ ಕಾಂಬಳೆ, ಶಂಕ್ರಮ್ಮ ಕೆಳಗಿನಮನಿ ಮುಂತಾದವರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

