ಬ್ರಹ್ಮದೇವನಮಡು: ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮದ ಕೆರೆಗೆ ಶುಕ್ರವಾರ ಸಿಂದಗಿ ತಾಪಂ ಇಒ ರಾಮು ಅಗ್ನಿ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ನಂತರ ಮಾತನಾಡಿ, ಕೆರೆಯಲ್ಲಿರುವ ಮೊಸಳೆ ಸೆರೆ ಹಿಡಿಯಲು ಕೆರೆ ಸುತ್ತಲಿನ ಪ್ರದೇಶಕ್ಕೆ ಸಿಸಿ ಟೀವಿ, ಜಾಳಗಿ ಅಳವಡಿಸುವಂತೆ ಸ್ಥಳದಲ್ಲಿದ್ದ ಗ್ರಾಪಂ ಪಿಡಿಒ ನಾಯ್ಕೋಡಿ ಅವರಿಗೆ ಸೂಚಿಸಿ, ತಾಲೂಕು ಅರಣ್ಶಾಧಿಕಾರಿಗಳಿಗೆ ಫೋನಾಯಿಸಿ ಮಾತನಾಡಿ, ಮೊಸಳೆಗೆ ಬಲೆ ಹಾಕಿ ಸೆರೆ ಹಿಡಿಯುವಂತೆ ತಿಳಿಸಿದರು.
ಈ ವೇಳೆ ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಗ್ರಾಪಂ ಅಧ್ಶಕ್ಷರ ಪ್ರತಿನಿಧಿ ಹಣಮಂತ್ರಾಯಗೌಡ ಬಿರಾದಾರ, ಸಾಹೇಬಪಟೇಲ ಮುರಡಿ, ದೇವಿಂದ್ರ ತೊನಶ್ಶಾಳ, ಸಂಗನಗೌಡ ಪಾಟೀಲ, ಭೀಮನಗೌಡ ಹೆಬ್ಬಾಳ, ಮಲ್ಲು ಕೆಂಭಾವಿ, ಹಣಮಂತ ಯಂಟಮಾನ, ಇಶ್ಮಾಯಿಲ್ ತಂಗಡಗಿ, ಮಲ್ಲು ಭಜಂತ್ರಿ, ಉಷೇನ ಯಂಕಂಚಿ, ಬಸನಗೌಡ ಪಾಟೀಲ, ದಿನೇಶ ಕಡಕೋಳ,ಅಂಬ್ರಿಶ ಪಾಟೀಲ, ಸುರೇಶ ತಳವಾರ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

