ತಿಕೋಟಾ: ತಾಲ್ಲೂಕಿನ ಘೋಣಸಗಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಾಲ್ಲೂಕ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಧಿಡೀರ್ ಭೇಟಿ ನೀಡಿ ನರೇಗಾ ಯೋಜನೆಯಡಿ ಮಂಜೂರಾದ ಹೈಟೆಕ್ ಶೌಚಾಲಯದ ಅಪೂರ್ಣ ಕಾಮಗಾರಿ ಶುಕ್ರವಾರ ವೀಕ್ಷಣೆ ಮಾಡಿ ಬೇಗನೆ ಕಾಮಗಾರಿ ಮುಗಿಸುವಂತೆ ಪಿಡಿಓ ಅವರಿಗೆ ಸೂಚಿಸಿದರು.
ಎರಡು ವರ್ಷದ ಹಿಂದೆ ಮಂಜೂರಾದ ಈ ಹೈಟೆಕ್ ಶೌಚಾಲಯದ ಕಾಮಗಾರಿ ಇನ್ನೂ ಮುಗಿದಿಲ್ಲ. ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಶೌಚಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದೆ ಬೇಗ ಕಾಮಗಾರಿ ಮುಗಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿ ಕೊಡಬೇಕು ಎಂದು ಹಲವು ಬಾರಿ ವಿನಂತಿಸಿದರೂ ಕಾಮಗಾರಿ ಮಾಡಲು ವಿಳಂಬವಾಗಿದೆ. ಈಗಲಾದರೂ ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಅನೂಕೂಲ ಮಾಡಿ ಕೊಡಬೇಕು ಎಂದು ಇಓ ಐನಾಪುರ ಅವರಿಗೆ ಶಾಲಾ ಮುಖ್ಯೋಪಾಧ್ಯಾಯ ಪಿ.ಎಸ್.ಗದ್ಯಾಳ ವಿನಂತಿಸಿದರು.
ವರ್ಗಕೋಣೆಗೆ ಭೇಟಿ: ಶಾಲಾ ವರ್ಗಕೋಣೆಗೆ ಭೇಟಿ ನೀಡಿದ ಅವರು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವ ತಯಾರಿ ಮಾಡುತ್ತಿರುವದನ್ನು ವೀಕ್ಷಿಸಿದರು. ವರ್ಗಕೋಣೆಯಲ್ಲಿ ಪ್ರೋಜೆಕ್ಟರ್ ಬಳಸಿ ಮಕ್ಕಳು ನೃತ್ಯ ಕಲಿಯುತ್ತಿರುವದನ್ನು ಕಂಡು ಖುಷಿಪಟ್ಟರು. ನಲಿಕಲಿ ವರ್ಗಕೋಣೆ ವೀಕ್ಷಣೆ ಮಾಡಿದರು. ಶಾಲಾ ಮೈದಾನದಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಂಗ್ರಹಣೆಗಾಗಿ ಟ್ಯಾಂಕ ಇಲ್ಲದಿರುವದನ್ನು ಗಮನಿಸಿದ ಅವರು ನೀರಿನ ಟ್ಯಾಂಕ್ ನಿರ್ಮಿಸಿ ಕೊಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಓ ಸದಾಶಿವ ಬೋವಿನ್, ಸಂಜೀವ ರಾಠೋಡ, ಶೋಭಕ್ಕ ಶಿಳ್ಳಿನ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

