ದೇವರಹಿಪ್ಪರಗಿ: ಗಣರಾಜ್ಯೋತ್ಸವ ದಿನಾಚರಣೆಯ ಜವಾಬ್ದಾರಿಗಳನ್ನು ತಾಲ್ಲೂಕು ಆಡಳಿತದ ಜೊತೆಗೆ ವಿವಿಧ ಇಲಾಖೆಗಳು ವಹಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಗಣರಾಜ್ಯೋತ್ಸವ, ಅಂಗವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಚರಣೆಯ ಜೊತೆಗೆ ಸ್ಥಳೀಯ ಶಾಲೆಗಳ ಮಕ್ಕಳ ಉಪಹಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ವಜಾರೋಹಣದ ಕುರಿತು ಸೂಕ್ತ ಕ್ರಮವಹಿಸಲು ಸೂಚಿಸಿದರು.
ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಮಕ್ಕಳಿಗೆ ಉಪಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದರು.
ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಯೋಧನ ಸ್ಮಾರಕದ ರಿಪೇರಿ ಕುರಿತು ಗಮನ ಸೆಳೆದರು.
ನಂತರ ಕಾಶೀನಾಥ ತಳಕೇರಿ, ಜಾನು ಗುಡಿಮನಿ, ಬಸವರಾಜ ತಳಕೇರಿ, ರಾವುತ ತಳಕೇರಿ ಮಾತನಾಡಿದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ತಾಲ್ಲೂಕು ಪಂಚಾಯಿತಿಯ ಶ್ರೀನಿವಾಸ ಪವಾರ, ಸಿಆರ್‌ಪಿ ವಿಜಯಲಕ್ಷ್ಮೀ ನವಲಿ, ಸಿಡಿಪಿಓ ಎಸ್.ಎನ್.ಹಿರೇಮಠ, ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ, ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣಸಂಸ್ಥೆಯ ಎ.ಕೆ.ಆನಂದ, ಮಹಿಳಾ ಪಿಎಸ್‌ಐ ಎಸ್.ಬಿ.ನಡುವಿನಕೇರಿ, ಶಾಂತಾ ಕಸ್ತೂರಿ, ವ್ಹಿ.ವಾಯ್.ಹಳ್ಳಿ, ಆರ್.ಆರ್.ಕೋರಿ, ಆರ್.ಜಿ.ಕೋಟಿನ್, ಪಿ.ಸಿ.ತಳಕೇರಿ, ಶಿವಶರಣ ಪೂಜಾರಿ, ನಾನಾಗೌಡ ಸಿದರಡ್ಡಿ, ಮಲ್ಲಿಕಾರ್ಜುನ ದೇವೂರ, ರಾಜಕುಮಾರ ಸಿಂದಗೇರಿ, ಎ.ವ್ಹಿ.ವಡ್ಡೋಡಗಿ, ಸೇರಿದಂತೆ ವಿವಿಧ ಶಾಲೆಗಳ ಮುಖ್ಯಗುರುಗಳು, ಕಾಲೇಜು ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

