ಢವಳಗಿ: ನಮ್ಮೂರ ಪ್ರೌಢಶಾಲೆ ಅಭಿವೃದ್ಧಿಗಾಗಿ ಒಂದು ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿ ಕುಡಿವ ನೀರು ಹಾಗೂ ಇನ್ನೀತರ ಮೂಲಸೌಕರ‍್ಯ ಕಲ್ಪಿಸಿಕೊಡುವಲ್ಲಿ ಶ್ರಮಿಸುತ್ತೇನೆ ಎಂದು ತಾಲ್ಲೂಕಿನ ರೂಢಗಿ ಸರಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ನೂತನ ಅಧ್ಯಕ್ಷ ಸಂಗಮೇಶ ಎನ್.ಹಾರಿವಾಳ ಹೇಳಿದರು.
ತಾಲ್ಲೂಕಿನ ರೂಢಗಿ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ನೂತನ ಎಸ್.ಡಿ.ಎಂ.ಸಿ ರಚನೆ ಪ್ರಕ್ರಿಯೆ ಬಳಿಕ ಅವರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.
ರೂಢಗಿ ಸರಕಾರಿ ಪ್ರೌಢಶಾಲೆಗೆ ಬರಲು ಸರಿಯಾದ ರಸ್ತೆ ಇಲ್ಲ. ಈ ಶಾಲೆಯನ್ನು ಹಾಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಂಜೂರಾತಿ ಮಾಡಿಸಿಕೊಟ್ಟಿದ್ದರು. ಈ ಭಾಗದಲ್ಲಿ ಪಿಯು ಕಾಲೇಜು ಆರಂಭಕ್ಕೆ ಬೇಡಿಕೆ ಇದ್ದು, ಅದರ ಬಗ್ಗೆ ಗ್ರಾಮಸ್ಥರ ಜೊತೆಗೂಡಿ ಸಂಬಂಧಿಸಿದ ಶಾಸಕರು, ಸಚಿವರು,ಸ ರಕಾರದ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ ಸೂಳಿಭಾವಿ, ಮುಖಂಡ ಶ್ರೀಶೈಲ್ ದೊಡಮನಿ ಮಾತನಾಡಿದರು.
ಶಿಕ್ಷಣ ಸಂಯೋಜಕ ಎಚ್.ಎ.ಮೇಟಿ, ಮುಖಂಡರಾದ ಎಸ್.ಪಿ.ಸೇವಾಲಾಲ್, ಮುಖ್ಯಗುರು ಬಿ.ಎಚ್.ನಾಯಕರ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ಬಸವರಾಜ ಬೆಲ್ಲದ, ಗ್ರಾಮಸ್ಥರಾದ ಬಸವರಾಜ ದೊಡಮನಿ, ಶಿವರಾಜ ಲಮಾಣಿ, ಸದಾಶಿವ ಸೂಳಿಭಾವಿ, ಶರಣು ಕೋರಿ, ಆನಂದ ಲಮಾಣಿ, ಪರಶು ರಾಠೋಡ, ನಿಂಗು ಕೋಲಕಾರ, ರಾಜು ಈಳಗೇರ,ಪಾಂಡು ಈಳಗೇರ, ರಮೇಶ ನಾಗರಾಳ, ಲಕ್ಷ್ಮಣ ಬೊಮ್ಮಣಗಿ, ಲಕ್ಷ್ಮಣ ತಳವಾರ, ಮಲಕಾಜಿ ಚಲವಾದಿ ಇದ್ದರು.
ಶಿಕ್ಷಕರಾದ ಎಂ.ವಾಯ್.ಕಳ್ಳಿಮನಿ, ಎಸ್.ಪಿ.ಮುತ್ತಗಿ, ಅನಿಲ್ ಚವ್ಹಾಣ, ಸಾಬಣ್ಣ ಮಾದರ, ಪಿ.ಪಿ.ಕೋಟಿ, ಬಿ.ಬಿ.ಪಾಟೀಲ್, ಎಸ್.ಎಸ್.ರಾಠೋಡ, ಜಿ.ಸಿ.ಸಬರದ ಮೊದಲಾದವರು ಇದ್ದರು.
*ಎಸ್.ಡಿ.ಎಂ.ಸಿ ರಚನೆ*
ಸರಕಾರದ ನಿರ್ದೇಶನದಂತೆ ಎಸ್.ಡಿ.ಎಂ.ಸಿ ರಚನೆಗೆ ಆದೇಶ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಎಸ್.ಡಿ.ಎಂ.ಸಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಸಂಗಮೇಶ ಹಾರಿವಾಳ, ಸದಸ್ಯರಾಗಿ ಸುರೇಖಾ ಹಡಪದ, ಬೀಬಿಜಾನ ಪಾಟೀಲ್, ಮಂಜುಳಾ ಈಳಗೇರ,ಯಮನಪ್ಪ ಆಹೇರಿ, ಆನಂದ ರಾಠೋಡ, ಸೀತವ್ವ ಮಾದರ, ಸೋಮು ವಡ್ಡರ, ಬಸಮ್ಮ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

