ವಿಜಯಪುರ: ವಿಶ್ವಗುರು ಬಸವಣ್ಣ ರಾಜ್ಯದ ಸಾಂಸ್ಕೃತಿಕ
ನಾಯಕ ಎಂದು ಸರಕಾರ ಘೋಷಣೆ ಮಾಡಿದ್ದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮಾಜಿಕ ಸಮಾನತೆಯ ಹರಿಕಾರ ಕ್ರಾಂತಿಯೋಗಿ ಬಸವಣ್ಣ ಅನುಯಾಯಿಗಳು, ಪೂಜ್ಯಶ್ರೀಗಳು ಸರಕಾರದ ಈ ಸೂಕ್ತ ನಿರ್ಧಾರದಿಂದ ಅತ್ಯಂತ ಸಂತುಷ್ಟರಾಗಿದ್ದಾರೆ.
ಎಲ್ಲಾ ಧರ್ಮದ ತತ್ವ ಸಿದ್ಧಾಂತ ಬಸವಣ್ಣನ ವಚನ ಸಾಹಿತ್ಯದಲ್ಲಿ ಕಾಣುತ್ತೇವೆ. ವಿಶ್ವವೇ ಅನುಕರಣೆ ಮಾಡುವ ಬಸವಣ್ಣನವರ ವಚನ ಸಾಹಿತ್ಯದ ವಿವಿಧ ಭಾಷೆಗಳಲ್ಲಿ ಅನುವಾದ ಗೊಂಡಿವೆ ಹಾಗೂ ರಾಜ್ಯದ ಎಲ್ಲಾ ತರಗತಿಯ ಪಠ್ಯ ಪುಸ್ತಕದಲ್ಲಿ ವಚನ ಸಾಹಿತ್ಯದ ಪಾಠಗಳು ಅಳವಡಿಸಬೇಕೆಂದು ಹಾಸಿಂಪೀರ ವಾಲಿಕಾರ ಸರ್ಕಾರವನ್ನು ಒತ್ತಾಯಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

