Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ಬನಶಂಕರಿ ದೇವಿ ಪಾದಯಾತ್ರಾ ಕಮೀಟಿಯಿಂದ ಕೊಲ್ಹಾರದಿಂದ ಬದಾಮಿ ಬನಶಂಕರಿ ದೇವಸ್ಥಾನದವರೆಗೆ ೧೪ನೇ ವರ್ಷದ ಪಾದಯಾತ್ರೆಯು ದಿನಾಂಕ ೨೩ ಮಂಗಳವಾರ ಮುಂಜಾನೆ ೭ ಘಂಟೆಗೆ ಸ್ಥಳಿಯ ಬನಶಂಕರಿ ದೇವಸ್ಥಾನದಲ್ಲಿ ಮಹಾಪೂಜೆಯನ್ನು ನೆರವೇರಿಸಿದ ನಂತರ ಪಾದಯಾತ್ರೆಯು ಹೊರಡುವದು.ನೂರಾರು ಭಕ್ತರು ತೆರಳುವ ಪಾದಯಾತ್ರೆಯವರನ್ನು ಸಕಲ ವಾದ್ಯ ಮೇಳದ ಬಾಜಾ ಭಜಂತ್ರಿಯವರೊಂದಿಗೆ ದಿಗಂಬರೇಶ್ವರ ಮಠದವರಗೆ ಬಿಳ್ಕೊಡಲಾಗುವದು.ಯುಕೆಪಿ ಮಾರ್ಗವಾಗಿ ಬಾಡಗಂಡಿ, ಅನಗವಾಡಿ, ಗದ್ದನಕೇರಿ, ಸೀಮಿಕೇರಿ, ಕಗಲಗಂಬ, ಕಟಗೇರಿ, ಕಂಕಣಕೊಪ್ಪ, ಹಲಕುರ್ಕಿ, ಮುಚ್ಚಳಗುಡ್ಡ, ಬದಾಮಿ ರೇಲ್ವೆ ಸ್ಟೇಷನ್ ಮಾರ್ಗದ ಮೂಲಕ ಬನಶಂಕರಿ ದೇವಸ್ಥಾನಕ್ಕೆ ತೆರಳುವರು. ಪಾದಯಾತ್ರಿಕರಿಗೆ ಅಲ್ಪೋಪಹಾರ, ಊಟ, ವಸತಿ ಸೌಕರ್ಯಗಳನ್ನು ಭಕ್ತರು ಒದಗಿಸಿಕೊಡುತ್ತಾರೆ ಎಂದು ಪಾದಯಾತ್ರಾ ಕಮೀಟಿಯ ಈರಣ್ಣ ಬಾಲಗೊಂಡ, ಶ್ರೀಕಾಂತ ಅಮಾಶಿಗೌಡರ, ಬಸವರಾಜ ಯಡಹಳ್ಳಿ, ಬಸವರಾಜ ಚೌಡಪ್ಪಗೋಳ, ಕಲ್ಲಪ್ಪ ಪತಂಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಡಿಎಸ್ಸೆಸ್ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ಹೆಣ್ಣೂರ ಶ್ರೀನಿವಾಸ ಅಭಿಮತ ಆಲಮಟ್ಟಿ: ಒಳಮೀಸಲಾತಿ ಜಾರಿ ಮಾಡುವುದು ಕೇಂದ್ರದ ಕರ್ತವ್ಯ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದನ್ನು ತಪ್ಪು ಎನ್ನುತ್ತಿರುವ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಹೇಳಿಕೆ ದಲಿತರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರ ಶ್ರೀನಿವಾಸ ಹೇಳಿದರು.ಇಲ್ಲಿಯ ಕರ್ನಾಟಕ ಗಾಂದಿ ಮಂಜಪ್ಪ ಹರ್ಡೇಕರ ಸ್ಮಾರಕದಲ್ಲಿ ಶನಿವಾರ ನಡೆದ ಎರಡು ದಿನದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕೇಂದ್ರ ಸರ್ಕಾರವೇ ಸಂವಿಧಾನದ ೩೪೧(೩) ಕ್ಕೆ ತಿದ್ದುಪಡಿ ತಂದು ಒಳಮೀಸಲಾತಿ ಜಾರಿಗೆ ತಂದರೆ ಅದಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ, ಇದು ನಮ್ಮ ಹಲವು ದಶಕಗಳ ಬೇಡಿಕೆ ಎಂದರು. ಯಾವುದೇ ಅರ್ಜಿಯನ್ನು ಹಾಕದೇ ಕೇಂದ್ರ ಸರ್ಕಾರ ಶೇ ೧೦ ರಷ್ಟು ಇಡಬ್ಲುಎಸ್ ಮೀಸಲಾತಿ ಜಾರಿಗೆ ತಂದಿತು. ಒಳಮೀಸಲಾತಿಗಾಗಿ ನಿರಂತರ ಹೋರಾಟ ನಡೆಸಿದರೂ…
ವಿಜಯಪುರ: ರಾಮ ಮಂದಿರ ಉದ್ಘಾಟನೆಯ ಈ ಐತಿಹಾಸಿಕ ಕ್ಷಣವು, ನಮ್ಮೆಲ್ಲರ ಜೀವನದಲ್ಲಿ ಅದೃಷ್ಟವಶಾತ್ ಬಂದಿದೆ. ಈ ಅಮೂಲ್ಯ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗಲು, ಪ್ರತಿಯೊಬ್ಬರ ಮನೆಯಲ್ಲಿ ದೀಪ ಬೆಳಗಿಸುವಂತೆ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕರೆ ನೀಡಿದ್ದು, ನಗರದಲ್ಲಿ ಕನಿಷ್ಠ ಒಂದು ಲಕ್ಷ ದೀಪೋತ್ಸವ ಬೆಳಗಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 500 ವರ್ಷಗಳ ತಪಸ್ಸು, ಕೊಟ್ಯಂತರ ಹಿಂದೂ ಕಾರ್ಯಕರ್ತರು, ಸ್ವಾಮೀಜಿಗಳು, ಸಾಧು-ಸಂತರ ಕನಸು ನನಸಾಗುತ್ತಿದೆ. ಜ.22 ನಮ್ಮ ದೇಶದ ಭವಿಷ್ಯದ, ಭಾರತದ ಸ್ವಾಭಿಮಾನದ ಸಂಕೇತ, ಹಿಂದುತ್ವದ ಸ್ವಾಭಿಮಾನದ ಸಂಕೇತ, ಮೊಘಲರ ದಬ್ಬಾಳಿಕೆಯ ಗುಲಾಮಗಿರಿ ತೊಲಗಿಸಿದ ಸಂಕೇತದ ದಿನವಾಗಿದೆ. ಈ ದಿನ ಅವಿಸ್ಮರಣೀಯಗೊಳಿಸಲು, ಅಯೋಧ್ಯ ರಾಮ ಮಂದಿರ ಉದ್ಘಾಟನೆಯ ದಿನವಾದ ಜ.22 ರಂದು ನಗರದಲ್ಲಿ ಕನಿಷ್ಠ ಒಂದು ಲಕ್ಷ ದೀಪ ಬೆಳಗಬೇಕು. ಈ ನಿಟ್ಟಿನಲ್ಲಿ ಪ್ರತಿ ಹಿಂದುಗಳ ಮನೆಯ ಆವರಣದಲ್ಲಿ ಕನಿಷ್ಠ ಐದು ದೀಪಗಳನ್ನು ಬೆಳಗಿಸಬೇಕು.ದೀಪಾವಳಿ ಸಂದರ್ಭದಲ್ಲಿ ನಗರದ 11 ಸಾವಿರ…
ಕೊಲ್ಹಾರ: ಪಟ್ಟಣದ ಅಮಾನತ್ ಮೈನಾರಿಟೀಸ್ ಕೊ.ಆಪ್ ಕ್ರೆಡಿಟ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಮಹಮ್ಮದಸಲೀಂ ಅಬ್ದುಲ್ ರೆಹಮಾನ ಅತ್ತಾರ ಅವರನ್ನು ಅವಿರೋಧವಾಗಿ ಸರ್ವ ಸದಸ್ಯರು ಆಯ್ಕೆ ಮಾಡಿದರು.ಈ ಮೊದಲು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲ್ಲಾಭಕ್ಷ ವಿಜಾಪೂರ ಅವರ ವಿರುದ್ದ ಅವಿಶ್ವಾಸ ಮಂಡಣೆ ಮಾಡಿದ್ದರ ಪ್ರಯುಕ್ತ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಿತು.ಚುನಾವಣೆ ಅಧಿಕಾರಿಗಳಾಗಿ ಎಸ.ಎಸ್.ಹಂಗರಗಿ ಕಾರ್ಯ ನಿರ್ವಹಿಸಿದರು. ಅದರಂತೆ ರಶೀದ ಬಿಕ್ಕನಸಾಬ್ ಬೇಪಾರಿ ಅವರನ್ನು ಉಪಾಧ್ಯಕ್ಷ ಸ್ಥಾನದಲ್ಲಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಮುಂದುವರೆಸಲಾಯಿತು.ಆಡಳಿತ ಮಂಡಳಿಯ ಸದಸ್ಯರಾದ ಜಾವೇದ ಬೀಳಗಿ, ಅಲ್ಲಾಭಕ್ಷ ಗಿರಗಾಂವಿ, ನೂರಹ್ಮದ ಕಂಕರಪೀರ, ಸಲೀಂ ಸಾರವಾಡ, ದಾದಾಪೀರ ಕಂಕರಪೀರ, ಶ್ರೀಮತಿ ಮಾಬೂಬಿ ಅತ್ತಾರ ಉಪಸ್ಥಿತರಿದ್ದರು. ಪಟ್ಟಣದ ಹಿರಿಯರಾದ ಕಲ್ಲು ದೇಸಾಯಿ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
ಇಂಡಿ: ಇಂಡಿ, ಚಡಚಣ ತಾಲೂಕಿನ ಭೀಮಾ ನದಿಯ ದಂಡೆಯ ರೈತರು ಭೀಕರ ಬರಗಾಲದ ನಿಮಿತ್ಯ ಬರುವ ದಿನಗಳಲ್ಲಿ ಗ್ರಾಮಸ್ಥರಿಗೆ ಮತ್ತು ಜನ ಜಾನುವಾರುಗಳಿಗೆ ತೊಂದರೆ ಯಾಗದಂತೆ ಮಾನವೀಯ ಆಧಾರದ ಮೇಲೆ ಕೃಷಿಗೆ ನೀರು ಬಳಸಬಾರದೆಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಮನವಿ ಮಾಡಿದ್ದಾರೆ.ಅವರು ಶುಕ್ರವಾರ ಇಂಡಿ ಮತ್ತು ಚಡಚಣ ತಾಲೂಕಿನ ಅಣಚಿ, ಧೂಳಖೇಡ, ಮರಗೂರ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರಿಗೆ ಮನವಿ ಮಾಡಿದರು.ಇಂಡಿ ಮತ್ತು ಚಡಚಣ ತಾಲೂಕಿನಲ್ಲಿ ಮಳೆ ಕಡಿಮೆಯಾಗಿರುವದರಿಂದ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ರೈತರು ಕೃಷಿಗೆ ನೀರು ಬಳಸಬಾರದು, ಅದಲ್ಲದೆ ಇಂಡಿ ಮತ್ತು ಚಡಚಣ ತಾಲೂಕಿನ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ನೀರಿನ ಅವಶ್ಯಕತೆ ಇರುವದರಿಂದ ಇಂಡಿ ಮತ್ತು ಚಡಚಣ ತಾಲೂಕುಗಳ ಭೀಮಾ ನದಿಯ ದಡದಲ್ಲಿರುವ ಗ್ರಾಮಗಳ ರೈತರು ನೀರನ್ನು ಬಳಸದಂತೆ ಕಾನೂನಾತ್ಮಕ ನಿರ್ಭಂಧ ವಿಧಿಸಿದ್ದು ಮಾನವೀಯ ಆಧಾರದ ಮೇಲೆ ನೀರು ಬಳಸದಂತೆ ೧೪೪ರನ್ವಯ ಆದೇಶ ಹೊರಡಿಸಿದೆ ಎಂದರು.ಇಂಡಿಯ ತಹಸೀಲ್ದಾರ ಬಿ.ಎಸ್.ಕಡಕಬಾವಿ, ಚಡಚಣ…
ಇಂಡಿ: ಪ್ರತಿಯೊಬ್ಬ ವಿಕಲಚೇತನರು ತಪ್ಪದೇ ತಪಾಸಣೆ ಮಾಡಿಸಿಕೊಂಡು ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಮೇಶ ಹೂಗಾರ ಹೇಳಿದರು.ಗುರುವಾರ ತಾಲೂಕಿನ ಆಳೂರ ಗ್ರಾಮದ ಗ್ರಾಮ ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರ ಸಂಘಟನೆಯಿಂದ ೨೫ ರಿಂದ ೭೦ ವರ್ಷದ ಒಳಗಿನ ವಿಕಲಚೇತನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.ಒತ್ತಡದ ಜೀವನದಲ್ಲಿ ಆರೋಗ್ಯದ ಕಾಳಜಿ ವಹಿಸದೇ ಇರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಕಾರಣ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾವು ಆರೋಗ್ಯವಾಗಿದ್ದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಇಂತಹ ತಪಾಸಣೆ ಶಿಬಿರಗಳ ಸದುಪಯೋಗ ಪಡೆದುಕೋಬೇಕು ಎಂದರು.ಈ ಸಂದರ್ಭದಲ್ಲಿ ವಿ.ಆರ್.ಡಬ್ಲ್ಯೂ ಭೀಮಾಶಂಕರ ಗುಡ್ಡೇವಾಡಿ, ಪತ್ರಕರ್ತ ಯಲಗೊಂಡ ಬೇವನೂರ, ಚಂದ್ರಕಾಂತ ದೌಲಿ, ತಾಲೂಕಾ ಕೆ.ಎಚ್.ಪಿ.ಟಿ.ಸಂಯೋಜಕ ಶಿವಾನಂದ ಸಿಂಗೆ, ಗ್ರಾಪಂ ಸದಸ್ಯರು, ಗ್ರಾಪಂ ಕಾರ್ಯದರ್ಶಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ವಿಕಲಚೇತನರು ಭಾಗವಹಿಸಿದ್ದರು.
ಇಂಡಿ: ಲಾರಿ ಚಾಲಕರಿಗೆ ಮಾರಕವಾದ ಕಾನೂನು ಜಾರಿ ಮಾಡಿದ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ, ಕೂಡಲೇ ಕಾನೂನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಇಂಡಿ ತಾಲ್ಲೂಕು ಲಾರಿ ಚಾಲಕರ ಸಂಘದ ಅಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಚಾಲಕರು ಮನವಿಪತ್ರ ಸಲ್ಲಿಸಿದರು.ಲಾರಿ ಚಾಲಕರ ಸಂಘದ ಅಧ್ಯಕ್ಷ ಮೈಬೂಬ್ ಟಾಂಗೇವಾಲೆ ಮಾತನಾಡಿ, ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆ (ಬಿಎನೆಸ್ ೨೦೨೩) ಕಾಯ್ದೆಯನ್ನು ದಿನಾಂಕ ೨೦೨೪ರ ಏಪ್ರಿಲ್ ರಿಂದ ಅನ್ವಯವಾಗುವಂತೆ ಜಾರಿ ಮಾಡಿದ್ದು, ಈ ಹೊಸ ಕಾನೂನು ವ್ಯವಸ್ಥೆಯನ್ನು ವಾಹನ ಉದ್ಯಮಕ್ಕೆ ಸಂಬಂಧಿಸಿದ ಹಲವು ನಿಯಮಗಳು ತುಂಬಾ ಕಠಿಣವಾಗಿದ್ದು, ಅದರಲ್ಲೂ ಸೆಕ್ಷೆನ್ ೧೦೬ (೧) ಮತ್ತು ಸೆಕ್ಷೆನ್ ೧೦೬ (೨) ಅಡಿಯಲ್ಲಿ ಯಾವದೇ ವಾಹನ ಚಾಲಕರು ಅಪಘಾತವನ್ನು ಮಾಡಿ ಯಾವದೇ ನಾಗರಿಕರ ಸಾವಿಗೆ ಕಾರಣವಾದರೆ ಚಾಲಕನಿಗೆ ೧೦ ವರ್ಷಗಳವರೆಗೆ ಕಠಿಣ ಶಿಕ್ಷೆ ಮತ್ತು ೭ ಲಕ್ಷಗಳ ವರೆಗೆ ದಂಡವನ್ನು ನ್ಯಾಯಾಲಯ ವಿಧಿಸಬಹುದಾಗಿದೆ.ಲಾರಿ ಚಾಲಕರು ತಿಂಗಳಿಗೆ ೧೨ ರಿಂದ…
ಕೋಲಾರ: ಬರಗಾಲದಿಂದ ತತ್ತರಿಸಿ ಕಂಗಾಲಾಗಿರುವ ರೈತರಿಗೆ ಕಾಲುವೆಯ ನೀರು ಇಲ್ಲದೇ, ಒಣಗುತ್ತಿವೆ ಇರುವ ಅಲ್ಪಸ್ವಲ್ಪ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ, ಕೂಡಲೇ ಕೋಲಾರ, ನಿಡಗುಂದಿ, ತಾಲೂಕಿನಲ್ಲಿರುವ ಮುಳವಾಡ ಏತನೀರಾವರಿಯ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ನಾಳೆ ಮಂಗಳವಾರದಂದು ರೈತರೊಂದಿಗೆ ಕೋಲಾರದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಲಾರ ತಾಲೂಕಾ ಅಧ್ಯಕ್ಷ ಸೋಮು ಬಿರಾದಾರ ತಿಳಿಸಿದ್ದಾರೆ.ನಾರಾಯಣಪುರ ಆಣೆಕಟ್ಟಿನ ಎಡ ಹಾಗೂ ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುತ್ತಿರುವುದು ಖುಷಿಯ ವಿಚಾರ, ಅದರಂತೆ ನಮ್ಮ ಬೆಳೆಗಳು ಉಳಿಯಬೇಕು ಜಾನುವಾರುಗಳಿಗೆ ಕುಡಿಯಲು ನೀರು ಬೇಕೆ ಬೇಕು ಆದ್ದರಿಂದ ಜನೇವರಿ ೨೨ ರ ಒಳಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿದರು.ಮಳೆಯ ಅಭಾವದಿಂದ ಇರುವ ಭಾವಿ, ಭೋರವೆಲ್‌ಗಳಲ್ಲಿ ನೀರಿಲ್ಲದೇ ಜಮೀನಿನಲ್ಲಿ ಇರುವ ಗೋಧಿ, ಕಡ್ಲಿ, ಶೇಂಗಾ, ಸೂರ್ಯಕಾಂತಿ, ಮೇಣಸಿನಕಾಯಿ, ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ, ರೈತ ಉಳಿಯಬೇಕಾದರೆ ಕಾಲುವೆಗೆ ನೀರು ಹರಿಸಬೇಕು ಇಲ್ಲವಾದಲ್ಲಿ…
ಬ್ರಹ್ಮದೇವನಮಡು: ಮುಖ್ಶಮಂತ್ರಿ ಸಿದ್ದರಾಮಯ್ಶ ಅವರನ್ನು ಏಕವಚನದಲ್ಲಿ ನಿಂದಿಸಿದ ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಚಂದ್ರು ಕೆಂಭಾವಿ ಒತ್ತಾಯಿಸಿದ್ದಾರೆ.ಈ ಹಿಂದೆ ಕೇಂದ್ರ ಸಚಿವರಾಗಿದ್ದಾಗ ಸಂವಿಧಾನವನ್ನು ಬದಲಾಯಿಸುವ ಕುರಿತು ಮಾತನಾಡಿ ವಿವಾದಕ್ಕೆ ಕಾರಣವಾಗಿದ್ದರು. ಬಳಿಕ ನಾಲ್ಕು ವಷ೯ ಸಾವ೯ಜನಿಕವಾಗಿ ಯಾವ ಕಾಯ೯ಕ್ರಮದಲ್ಲೂ ಪಾಲ್ಗೊಂಡಿರಲಿಲ್ಲ. ಇದೀಗ ಲೋಕಸಭೆ ಚುನಾವಣೆ ಬರುತ್ತಿದ್ದು, ಹೀಗಾಗಿ ಮತ್ತೇ ನಾಲಿಗೆ ಹರಿಬಿಟ್ಟಿದ್ದಾರೆ.ಹಿರಿಯ ನಾಯಕರ ವಿರುದ್ದ ಬಾಯಿಗೆ ಬಂದಂತೆ ಪದ ಪ್ರಯೋಗ ಮಾಡುತ್ತಿರುವದು ಸರಿಯಲ್ಲ. ಸರ್ಕಾರ ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ದೇವರಹಿಪ್ಪರಗಿ: ದೇಶದಾದ್ಯಂತ ಮಂತ್ರಾಕ್ಷತೆ ವಿತರಣೆ ಶಾಂತಿಯುತವಾಗಿ ಜರುಗುತ್ತಿದೆ. ಯಾವುದೇ ಕಾರಣಕ್ಕೂ ಮಂತ್ರಾಕ್ಷತೆ ವಿತರಣೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಸುಸಂದರ್ಭಕ್ಕೆ ಕಪ್ಪುಚುಕ್ಕೆ ಆಗಬಾರದು. ಆ ನಿಟ್ಟಿನಲ್ಲಿ ನಾವೆಲ್ಲ ಶಾಂತಿಯುತವಾಗಿ ಇರೋಣ ಎಂದು ಬಿಜೆಪಿ ಜಿಲ್ಲಾ ಧುರೀಣ ವಿಜುಗೌಡ ಪಾಟೀಲ ಹೇಳಿದರು.ಪಟ್ಟಣದ ಕರಿದೇವರ ದೇವಸ್ಥಾನದಲ್ಲಿ ಜರುಗಿದ ಸಂಘ ಪರಿವಾರ, ಬಿಜೆಪಿಯ ಪ್ರಮುಖರು, ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಳೆದ ದಿನಗಳಲ್ಲಿ ನಡೆದ ಕಹಿ ಘಟನೆಗಳನ್ನು ಮರೆಯೋಣ. ದಿ:೨೨ ರಂದು ಎಲ್ಲರೂ ಮನೆಮನೆಗಳಲ್ಲಿ ದೀಪ ಬೆಳಗಿಸಿ ಮತ್ತೊಮ್ಮೆ ದೀಪಾವಳಿ ಆಚರಿಸುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸೋಣ ಎಂದರು.ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ, ಪಟ್ಟಣದ ಶಾಂತಿ ಕದಡುವ ಕಾರ್ಯಗಳಿಗೆ ಆಸ್ಪದ ನೀಡದಂತೆ ನಾವೆಲ್ಲ ಪ್ರಬುದ್ಧರಾಗಿ ವರ್ತಿಸೋಣ ಎಂದರು.ಮನೆಮನೆಗೆ ಮಂತ್ರಾಕ್ಷತೆ ವಿತರಿಸುವ ಸಮಯದಲ್ಲಿ ಪಟ್ಟಣದ ೮ನೇ ವಾರ್ಡಿನಲ್ಲಿ ಘೋಷಣೆಗೆ ಸಂಬಂಧಿಸಿದಂತೆ ಸಂಘದ ಕಾರ್ಯಕರ್ತರು ಹಾಗೂ ಒಂದು ಸಮುದಾಯದ ನಡುವೆ ಕೈ-ಕೈ ಮಿಲಾಯಿಸಿ ವಿವಾದ ಉಂಟಾಗಿತ್ತು. ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಘದ…
