ಕೊಲ್ಹಾರ: ಪಟ್ಟಣದ ಅಮಾನತ್ ಮೈನಾರಿಟೀಸ್ ಕೊ.ಆಪ್ ಕ್ರೆಡಿಟ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಮಹಮ್ಮದಸಲೀಂ ಅಬ್ದುಲ್ ರೆಹಮಾನ ಅತ್ತಾರ ಅವರನ್ನು ಅವಿರೋಧವಾಗಿ ಸರ್ವ ಸದಸ್ಯರು ಆಯ್ಕೆ ಮಾಡಿದರು.
ಈ ಮೊದಲು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅಲ್ಲಾಭಕ್ಷ ವಿಜಾಪೂರ ಅವರ ವಿರುದ್ದ ಅವಿಶ್ವಾಸ ಮಂಡಣೆ ಮಾಡಿದ್ದರ ಪ್ರಯುಕ್ತ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಿತು.
ಚುನಾವಣೆ ಅಧಿಕಾರಿಗಳಾಗಿ ಎಸ.ಎಸ್.ಹಂಗರಗಿ ಕಾರ್ಯ ನಿರ್ವಹಿಸಿದರು. ಅದರಂತೆ ರಶೀದ ಬಿಕ್ಕನಸಾಬ್ ಬೇಪಾರಿ ಅವರನ್ನು ಉಪಾಧ್ಯಕ್ಷ ಸ್ಥಾನದಲ್ಲಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಮುಂದುವರೆಸಲಾಯಿತು.
ಆಡಳಿತ ಮಂಡಳಿಯ ಸದಸ್ಯರಾದ ಜಾವೇದ ಬೀಳಗಿ, ಅಲ್ಲಾಭಕ್ಷ ಗಿರಗಾಂವಿ, ನೂರಹ್ಮದ ಕಂಕರಪೀರ, ಸಲೀಂ ಸಾರವಾಡ, ದಾದಾಪೀರ ಕಂಕರಪೀರ, ಶ್ರೀಮತಿ ಮಾಬೂಬಿ ಅತ್ತಾರ ಉಪಸ್ಥಿತರಿದ್ದರು. ಪಟ್ಟಣದ ಹಿರಿಯರಾದ ಕಲ್ಲು ದೇಸಾಯಿ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

