ಕೋಲಾರ: ಬರಗಾಲದಿಂದ ತತ್ತರಿಸಿ ಕಂಗಾಲಾಗಿರುವ ರೈತರಿಗೆ ಕಾಲುವೆಯ ನೀರು ಇಲ್ಲದೇ, ಒಣಗುತ್ತಿವೆ ಇರುವ ಅಲ್ಪಸ್ವಲ್ಪ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ, ಕೂಡಲೇ ಕೋಲಾರ, ನಿಡಗುಂದಿ, ತಾಲೂಕಿನಲ್ಲಿರುವ ಮುಳವಾಡ ಏತನೀರಾವರಿಯ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ನಾಳೆ ಮಂಗಳವಾರದಂದು ರೈತರೊಂದಿಗೆ ಕೋಲಾರದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಲಾರ ತಾಲೂಕಾ ಅಧ್ಯಕ್ಷ ಸೋಮು ಬಿರಾದಾರ ತಿಳಿಸಿದ್ದಾರೆ.
ನಾರಾಯಣಪುರ ಆಣೆಕಟ್ಟಿನ ಎಡ ಹಾಗೂ ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುತ್ತಿರುವುದು ಖುಷಿಯ ವಿಚಾರ, ಅದರಂತೆ ನಮ್ಮ ಬೆಳೆಗಳು ಉಳಿಯಬೇಕು ಜಾನುವಾರುಗಳಿಗೆ ಕುಡಿಯಲು ನೀರು ಬೇಕೆ ಬೇಕು ಆದ್ದರಿಂದ ಜನೇವರಿ ೨೨ ರ ಒಳಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿದರು.
ಮಳೆಯ ಅಭಾವದಿಂದ ಇರುವ ಭಾವಿ, ಭೋರವೆಲ್‌ಗಳಲ್ಲಿ ನೀರಿಲ್ಲದೇ ಜಮೀನಿನಲ್ಲಿ ಇರುವ ಗೋಧಿ, ಕಡ್ಲಿ, ಶೇಂಗಾ, ಸೂರ್ಯಕಾಂತಿ, ಮೇಣಸಿನಕಾಯಿ, ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ, ರೈತ ಉಳಿಯಬೇಕಾದರೆ ಕಾಲುವೆಗೆ ನೀರು ಹರಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಅವರು ಆಗ್ರಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment
