ಇಂಡಿ: ಲಾರಿ ಚಾಲಕರಿಗೆ ಮಾರಕವಾದ ಕಾನೂನು ಜಾರಿ ಮಾಡಿದ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ, ಕೂಡಲೇ ಕಾನೂನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಇಂಡಿ ತಾಲ್ಲೂಕು ಲಾರಿ ಚಾಲಕರ ಸಂಘದ ಅಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಚಾಲಕರು ಮನವಿಪತ್ರ ಸಲ್ಲಿಸಿದರು.
ಲಾರಿ ಚಾಲಕರ ಸಂಘದ ಅಧ್ಯಕ್ಷ ಮೈಬೂಬ್ ಟಾಂಗೇವಾಲೆ ಮಾತನಾಡಿ, ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆ (ಬಿಎನೆಸ್ ೨೦೨೩) ಕಾಯ್ದೆಯನ್ನು ದಿನಾಂಕ ೨೦೨೪ರ ಏಪ್ರಿಲ್ ರಿಂದ ಅನ್ವಯವಾಗುವಂತೆ ಜಾರಿ ಮಾಡಿದ್ದು, ಈ ಹೊಸ ಕಾನೂನು ವ್ಯವಸ್ಥೆಯನ್ನು ವಾಹನ ಉದ್ಯಮಕ್ಕೆ ಸಂಬಂಧಿಸಿದ ಹಲವು ನಿಯಮಗಳು ತುಂಬಾ ಕಠಿಣವಾಗಿದ್ದು, ಅದರಲ್ಲೂ ಸೆಕ್ಷೆನ್ ೧೦೬ (೧) ಮತ್ತು ಸೆಕ್ಷೆನ್ ೧೦೬ (೨) ಅಡಿಯಲ್ಲಿ ಯಾವದೇ ವಾಹನ ಚಾಲಕರು ಅಪಘಾತವನ್ನು ಮಾಡಿ ಯಾವದೇ ನಾಗರಿಕರ ಸಾವಿಗೆ ಕಾರಣವಾದರೆ ಚಾಲಕನಿಗೆ ೧೦ ವರ್ಷಗಳವರೆಗೆ ಕಠಿಣ ಶಿಕ್ಷೆ ಮತ್ತು ೭ ಲಕ್ಷಗಳ ವರೆಗೆ ದಂಡವನ್ನು ನ್ಯಾಯಾಲಯ ವಿಧಿಸಬಹುದಾಗಿದೆ.
ಲಾರಿ ಚಾಲಕರು ತಿಂಗಳಿಗೆ ೧೨ ರಿಂದ ೧೫ ಸಾವಿರ ಸಂಬಳ ಪಡೆದುಕೊಂಡು ಕೆಲಸದಲ್ಲಿದ್ದೇವೆ. ಅಪಘಾತ ಸಂಭವಿಸಿದರೆ ದಂಡದ ಹಣ ಎಲ್ಲಿಂದ ಕಟ್ಟಲು ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಸರ್ಕಾರ ಈ ಕೂಡಲೇ ಈ ಕಾಯ್ದೆಯ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ದೇಶದಾಧ್ಯಂತ ಲಾರಿ ಚಾಲಕರು ಲಾರಿ ಚಾಲನೆಯ ಕೆಲಸ ಬಿಟ್ಟು ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಇದರ ಗಂಬೀರ ಪರಿಣಾಮ ಸರ್ಕಾರ ಎದುರಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಮುಕ್ತಾರ ಟಾಂಗೇವಾಲೆ, ಜಾವೀದ ಹೊನ್ನುಟಗಿ, ಉಮೇಶ ಹೊಸಮನಿ, ಅಂಬಣ್ಣ ಕಾಂಬಳೆ, ಖಾಜೇಸಾಬ ಬಾಗವಾನ, ಮುಸ್ತಾಕ ಗೌಂಡಿ, ಸೈಪನ್ ಬಾಗವಾನ, ಹುಸೇನಿ ಮಕಾಲೆ, ಮಾಂತೇಶ ತೋಡಕರ, ಉದಯ ಗುಡಿಮನಿ, ಸಂತೋಷ ಕಣ್ಣಿ, ಬಾಳುಸುಲಾಖೆ, ಶಂಕರಪೂಜಾರಿ, ಅಯೂಬ ಶೇಖ, ನಾಸಿಕ್ ಬಾಗವಾನ, ಭೀಮಾಶಂಕರ ಬಿರಾದಾರ ವಹಿಸಿಕೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

