ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ಬನಶಂಕರಿ ದೇವಿ ಪಾದಯಾತ್ರಾ ಕಮೀಟಿಯಿಂದ ಕೊಲ್ಹಾರದಿಂದ ಬದಾಮಿ ಬನಶಂಕರಿ ದೇವಸ್ಥಾನದವರೆಗೆ ೧೪ನೇ ವರ್ಷದ ಪಾದಯಾತ್ರೆಯು ದಿನಾಂಕ ೨೩ ಮಂಗಳವಾರ ಮುಂಜಾನೆ ೭ ಘಂಟೆಗೆ ಸ್ಥಳಿಯ ಬನಶಂಕರಿ ದೇವಸ್ಥಾನದಲ್ಲಿ ಮಹಾಪೂಜೆಯನ್ನು ನೆರವೇರಿಸಿದ ನಂತರ ಪಾದಯಾತ್ರೆಯು ಹೊರಡುವದು.
ನೂರಾರು ಭಕ್ತರು ತೆರಳುವ ಪಾದಯಾತ್ರೆಯವರನ್ನು ಸಕಲ ವಾದ್ಯ ಮೇಳದ ಬಾಜಾ ಭಜಂತ್ರಿಯವರೊಂದಿಗೆ ದಿಗಂಬರೇಶ್ವರ ಮಠದವರಗೆ ಬಿಳ್ಕೊಡಲಾಗುವದು.
ಯುಕೆಪಿ ಮಾರ್ಗವಾಗಿ ಬಾಡಗಂಡಿ, ಅನಗವಾಡಿ, ಗದ್ದನಕೇರಿ, ಸೀಮಿಕೇರಿ, ಕಗಲಗಂಬ, ಕಟಗೇರಿ, ಕಂಕಣಕೊಪ್ಪ, ಹಲಕುರ್ಕಿ, ಮುಚ್ಚಳಗುಡ್ಡ, ಬದಾಮಿ ರೇಲ್ವೆ ಸ್ಟೇಷನ್ ಮಾರ್ಗದ ಮೂಲಕ ಬನಶಂಕರಿ ದೇವಸ್ಥಾನಕ್ಕೆ ತೆರಳುವರು. ಪಾದಯಾತ್ರಿಕರಿಗೆ ಅಲ್ಪೋಪಹಾರ, ಊಟ, ವಸತಿ ಸೌಕರ್ಯಗಳನ್ನು ಭಕ್ತರು ಒದಗಿಸಿಕೊಡುತ್ತಾರೆ ಎಂದು ಪಾದಯಾತ್ರಾ ಕಮೀಟಿಯ ಈರಣ್ಣ ಬಾಲಗೊಂಡ, ಶ್ರೀಕಾಂತ ಅಮಾಶಿಗೌಡರ, ಬಸವರಾಜ ಯಡಹಳ್ಳಿ, ಬಸವರಾಜ ಚೌಡಪ್ಪಗೋಳ, ಕಲ್ಲಪ್ಪ ಪತಂಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
