Author: editor.udayarashmi@gmail.com

ಚಿಮ್ಮಡ: ಶ್ರೀರಾಮ, ಶ್ರೀ ಹನುಮಾನ ಪ್ರತಿಯೊಬ್ಬರ ಆರಾದ್ಯ ದೈವ ಅವರನ್ನು ಗುತ್ತಿಗೆ ಪಡೆದವರಂತೆ ಬಿಜೇಪಿಯವರು ಏಕಪಕ್ಷೀಯವಾಗಿ ವಿಜಯೋತ್ಸವ ಆಚರಿಸುತ್ತಿರುವುದು ಹಾಗೂ ದೇವಸ್ಥಾನಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದು ಸ್ಥಳಿಯ ಕಾಂಗ್ರೆಸ್ ಘಟಕದ ಆಧ್ಯಕ್ಷ ಉಮೇಶ ಪೂಜಾರಿ ಖಂಡಿಸಿದ್ದಾರೆ.ಗ್ರಾಮದ ಹನುಮಾನ ದೇವಸ್ಥಾನದಲ್ಲಿ ರವಿವಾರ ರಾತ್ರಿ ಸ್ಥಳಿಯ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಗ್ರಾಮದಲ್ಲಿ ಯಾವುದೇ ಧಾರ್ಮಿಕ ಕಾರ್ಯ, ಕಟ್ಟಡ ನಿರ್ಮಾಣ, ಜಾತ್ರೆ ಸೇರಿದಂತೆ ಯಾವುದೇ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮ ಮಾಡುವಾಗ ಪಕ್ಷಾತೀತವಾಗಿ ಸರ್ವ ಸಮಾಜದ ಪ್ರಮುಖರ ಸಭೆ ಕರೆದು ಕಾರ್ಯಕ್ರಮದ ರೂಪುರೇಷೆ ತಯಾರಿಸಿ ಸರ್ವರ ನೇತ್ರತ್ವದಲ್ಲಿ ಕಾರ್ಯಕ್ರಮಗಳು ನಡೆಸುವ ಪದ್ದತಿ ನಡೆದುಕೊಂಡು ಬಂದಿದೆ. ಆದರೆ ಶ್ರೀ ರಾಮ ಪ್ರಾಣ ಪ್ರತೀಷ್ಠಾನದ ನಿಮಿತ್ತ ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಏಕಪಕ್ಷೀಯವಾಗಿ ನಡೆಯುತ್ತಿರುವುದು ದುರದೃಷ್ಠಕರ. ದೇವರ ವಿಷಯದಲ್ಲಿ ರಾಜಕೀಯ ಮಾಡುವ ಬಿಜೆಪಿ ನಡೆ ಖಂಡನೀಯವಾಗಿದ್ದು ಇದಕ್ಕೆ ಗ್ರಾಮದ ಪ್ರಮುಖರು ಅವಕಾಶ ನೀಡಬಾರದಾಗಿತ್ತು. ಮುಂಬರುವ ದಿನಗಳಲ್ಲಿಯಾದರೂ ಹಿಂದಿನ ಪದ್ದತಿಯಂತೆ ಧಾರ್ಮಿಕ ಕಾರ್ಯಕ್ರಮ ನಡೆಯುವಂತೆ ಗ್ರಾಮದ ಪ್ರಮುಖರು ಕ್ರಮ ಕೈಗೊಳ್ಳಬೇಕೆಂದರು.ಗ್ರಾಮದ ಪ್ರಮುಖರಾದ…

Read More

ಚಿಮ್ಮಡ: ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರದ ಲೋಕಾರ್ಪಣೆ ನಿಮಿತ್ತ ಗ್ರಾಮದಲ್ಲಿ ರವಿವಾರ ಹಾಗೂ ಸೋಮವಾರ ವಿವಿಧ ಧಾರ್ಮಿಕ, ಸಾಂಸೃತಿಕ, ಅದ್ಯಾತ್ಮಿಕ ಕಾರ್ಯಕ್ರಮಗಳು ವಿಜ್ರಂಬಣೆಯಿಂದ ನಡೆದವು.ಸ್ಥಳಿಯ ಗ್ರಾ.ಪಂ. ಸದಸ್ಯ ಪ್ರಕಾಶ ಪಾಟೀಲ, ಹಣಮಂತ ಪೂಜಾರಿ, ಚನ್ನಪ್ಪಾ ತೇಲಿ, ಕಾಳು ಬಡಿಗೇರ, ಮೋನೇಶ ಬಡಿಗೇರ, ಈಶ್ವರ ಅರುಟಗಿ, ಶಿವಾನಂದ ದಿನ್ನಿಮನಿ ಹಾಗೂ ಭಗತ್‌ಸಿಂಗ ಯುವಕ ಮಂಡಲದ ನೇತ್ರತ್ವದಲ್ಲಿ ಸೋಮವಾರ ಶ್ರೀ ಪ್ರಭುಲಿಂಗೇಶ್ವರ ಹಾಗೂ ಶ್ರೀ ಹನುಮಾನ ದೇವಸ್ಥಾನಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಮಂಗಳವಾರ ಮುಂಜಾನೆ ಶ್ರೀ ಪ್ರಭು ಮಹಾಸ್ವಾಮಿಗಳು ಹಾಗೂ ಶ್ರೀ ಜನಾರ್ಧನ ಮಹಾರಾಜರ ಸಾನಿಧ್ಯದಲ್ಲಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಕುಂಭದೊಂದಿಗೆ ಆಗಮಿಸಿ ಭಕ್ತಿ ಮೆರೆದರು.ಮದ್ಯಾಹ್ನ ಇಡೀ ಗ್ರಾಮಕ್ಕೆ ಹುಗ್ಗಿ, ಕಿಚಡಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗಣವೇಶಧಾರಿ ಮಕ್ಕಳಿಗೆ ಹನುಮಾನ ಚಾಲಿಸಾ ನೀಡಿ ಪುರಸ್ಕರಿಸಲಾಯಿತು, ಸಾಯಂಕಾಲ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಗ್ರಾ.ಪಂ.…

Read More

ಮುದ್ದೇಬಿಹಾಳ: ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ತಾಲೂಕಿನ ಯರಗಲ್ಲ ಗ್ರಾಮದ ಕಲಾವಿದ ಬಸವರಾಜ ಹಡಪದ ತಮ್ಮ ಕುಂಚದಲ್ಲಿ ಶ್ರೀ ರಾಮರ ಹಾಗೂ ಮಂದಿರದ ಚಿತ್ರ ಬಿಡಿಸುವ ಮೂಲಕ ಭಕ್ತಿ ಸಮರ್ಪಿಸಿದರು.

Read More

ಜೆಎಸ್ಸೆಸ್ ಆಸ್ಪತ್ರೆಯಲ್ಲಿ ೬೧ ಉಚಿತ ಹೆರಿಗೆ | ತಾಯಿ-ಮಕ್ಕಳು ಕ್ಷೇಮ | ರಾಮ – ಸೀತೆ ನಾಮಕರಣ ವಿಜಯಪುರ: ರಾಮ ಮಂದಿರ ನಿರ್ಮಾಣ ಎನ್ನುವುದು ಸಮಸ್ತ ಹಿಂದೂ ಬಾಂಧವರ ಕನಸಾಗಿತ್ತು. ಇಂದು ಆ ಕನಸು ನನಸಾಗುವ ಮೂಲಕ ಮಾರ್ಯದಾ ಪುರುಷೋತ್ತಮ ಪ್ರಭು ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ. ನಮ್ಮ ಪರಂಪರೆಯ ಹೆಗ್ಗಳಿಕೆಯಾಗಿರುವ ಶ್ರೀರಾಮ ಇಂದು ಅಯೋಧ್ಯೆಯ ಮಂದಿರದಲ್ಲಿ ವಿರಾಜಮಾನವಾಗಿರುವುದು ಹಿಂದೂ ಹೃದಯಗಳಲ್ಲಿ ಐನೂರು ವರ್ಷಗಳಿಂದ ಉಳಿದಿದ್ದ ಕತ್ತಲೆಯ ಮೇಲೆ ಬೆಳಕು ಚಲ್ಲಿದಂತಾಗಿದೆ ಎಂದು ರಾಮನಗೌಡ ಬ ಪಾಟೀಲ್ ಯತ್ನಾಳ ಹೇಳಿದರು.ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ರಾಮಮಂದಿರ ಲೋಕಾರ್ಪಣೆ ಹಾಗೂ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಆಯೋಜಿಸಲಾಗಿದ್ದ ಅಯೋಧ್ಯಾ ಸಂಭ್ರಮೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರಾಮಮಂದಿರ ಲೋಕಾರ್ಪಣೆಯನ್ನು ನೆನಪುಳಿಯುವಂತೆ ಮಾಡುವುದಕ್ಕೆಂದು ನಿರ್ಧಾರ ಮಾಡಿ ನಮ್ಮ ಆಸ್ಪತ್ರೆಯಲ್ಲಿ ಕಳೆದ ೫ ದಿನಗಳಿಂದ ಉಚಿತ ಹೆರಿಗೆ ಮಾಡಿಸುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಭಾರತದ ಇತಿಹಾಸದಲ್ಲಿಯೇ ರಾಮನ ಹೆಸರಿನಲ್ಲಿ ಇಂಥ ಸೇವೆಯನ್ನು ಒದಗಿಸಿದ್ದು…

Read More

ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಅವರಿಗೆ ಅಭಿನಂದನಾ ಸಮಾರಂಭದ ಬಗ್ಗೆ ಮತ್ತು ಲೋಕಸಭೆ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳ ಬಗ್ಗೆ ಚರ್ಚಿಸಲು ಜ.೨೪ ರಂದು ಬೆಳಿಗ್ಗೆ ೧೧ಗಂಟೆಗೆ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಮದರಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೇಸ್ ಪಕ್ಷದ ಪೂರ್ವ ಭಾವಿ ಸಭೆ ಕರೆಯಲಾಗಿದೆ. ಪಕ್ಷದ ವಿವಿಧ ಘಟಕಗಳ ಎಲ್ಲ ಪದಾಧಿಕಾರಿಗಳು ಸೇರಿದಂತೆ ಸರ್ವ ಸದಸ್ಯರು ಹಾಜರಿರುವಂತೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೊಲ್ಹಾರ: ಅಸಂಖ್ಯಾತ ಕರಸೇವಕರ ಭಕ್ತರ ತಪಸ್ಸು ತ್ಯಾಗ ಬಲಿದಾನಕ್ಕೆ ತಕ್ಕ ಪ್ರತಿಫಲವಾಗಿ ಭಾರತೀಯರ ಮರ್ಯಾದಾ ಪುರುಷೋತ್ತಮ ಶ್ರೀರಾಮ ದೇವರ ಬಾಲರಾಮನ ಮೂರ್ತಿಯು ಅಯೋಧ್ಯೆಯ ರಾಮಲಲ್ಲಾ ಮಂದಿರದಲ್ಲಿ ಸೋಮವಾರ ಪ್ರತಿಷ್ಠಾಪನೆಗೊಂಡಿದ್ದು ವಿಶ್ವವೇ ಬೆರಗಾಗುವಂತೆ ಮಾಡಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಸೋಮವಾರ ಪಟ್ಟಣದ ಸಮೀಪವಿರುವ ಕೃಷ್ಣಾ ನದಿಯಲ್ಲಿ ಬೆಳಗಿನಜಾವ ಕಾರ್ಯಕರ್ತರೊಂದಿಗೆ ಸ್ನಾನವನ್ನು ಮುಗಿಸಿ ಪುಣ್ಯತೀರ್ಥವನ್ನು ಹೊತ್ತುಕೊಂಡು ಕೊಲ್ಹಾರ ಪುರದಲ್ಲಿರುವ ಸಕಲ ದೇವಾನು ದೇವತೆಗಳ ದೇವಸ್ಥಾನಕ್ಕೆ ತೆರಳಿ ಜಲವನ್ನು ಸಮರ್ಪಿಸಿದರು.ರಾಮಮಂದಿರದ ಉದ್ಘಾಟನೆ ನಿಮಿತ್ಯವಾಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿರುವ ವಿವಿಧ ಸಮಾಜಗಳ ಮಂದಿರಗಳು ಏಕತಾ ಮನೋಭಾವದಿಂದ ಶುಬ್ರವಾಗಿ ಕಂಗೊಳಿಸುತ್ತಿದ್ದವು. ಧರ್ಮಗುರುಗಳ ಮಠಾಧೀಶರ ವೇದ ಮಂತ್ರಗಳ ಪಠಣದೊಂದಿಗೆ ರುದ್ರಾಭೀಷೇಕ ಹೋಮ ಹವನ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.ಪ್ರಧಾನಿ ಮೋದಿಯವರ ಕರೆಯಂತೆ ಎಲ್ಲ ಗ್ರಾಮಗಳು ವಿಶೇಷವಾಗಿ ಕೊಲ್ಹಾರ ಪಟ್ಟಣ ಕೇಸರಿಮಯವಾಗಿ ಕಂಗೊಳಿಸಿ ಹಬ್ಬದ ವಾತಾವರಣ ಸೃಷ್ಟಿಯಾಗಿ ಎಲ್ಲೆಡೆ ರಂಗೋಲಿ ಚಿತ್ತಾರ ಬಿಡಿಸಿ ಜೈಶ್ರೀರಾಮ್ ಘೋಷಣೆ ಹಾಕುತ್ತಾ ಶ್ವೇತ ವರ್ಣದ ಪೋಶಾಕುಗಳನ್ನು ತೊಟ್ಟ ಕಾರ್ಯಕರ್ತರ ಸಂಬ್ರಮ ಮುಗಿಲು…

Read More

ವಿಜಯಪುರ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಸರಕಾರದ ಸುತ್ತೋಲೆಯಂತೆ ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾಮಗಳಲ್ಲಿ ರಾಮ- ಹನುಮಂತದೇವರ ಗುಡಿಗಳು ಹಾಗೂ ಗ್ರಾಮದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ- ಪ್ರಾರ್ಥನೆ ನೆರವೇರಿಸಲಾಯಿತು.ಅದರಂತೆ ಎಂ. ಬಿ. ಪಾಟೀಲ ಅವರ ಅಭಿಮಾನಿಗಳ ಬಳಗದವರು ಕೂಡಾ ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ರಾಮ, ಹನುಮಂತ ಮತ್ತು ಗ್ರಾಮದೇವತೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಬೆಳಿಗ್ಗೆ ತಮ್ಮೂರಿನ ದೇವಸ್ಥಾನಗಳಿಗೆ ತೆರಳಿದ ಎಂ. ಬಿ. ಪಾಟೀಲ ಅವರ ಅಭಿಮಾನಿಗಳ ಬಳಗದ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಅಲ್ಲದೇ, ದೇವರ ಮೂರ್ತಿಗಳಿಗೆ ನೈವೇದ್ಯ ಅರ್ಪಿಸಿ ನಮನ ಸಲ್ಲಿಸಿದರು. ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ ನೆಲಸಲಿ ಎಂದು ಪ್ರಾರ್ಥಿಸಿದರು. ಅಲ್ಲದೇ, ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ಹಂಚಿದರು. ಅಲ್ಲದೇ, ಶ್ರೀರಾಮನ ಪರ ಜಯಘೋಷ ಹಾಕಿದರು.

Read More

ವಿಜಯಪುರ: ನಗರದ ಯುವ ಭಾರತ ಸಮಿತಿ ವತಿಯಿಂದ ಶ್ರೀ ರಾಮಮಂದಿರ ಲೋಕಾರ್ಪಣೆಯನ್ನು ಸೋಮವಾರ ಅರ್ಥಪೂರ್ಣವಾಗಿ ಸಂಭ್ರಮಿಸಲಾಯಿತು.ಕಿರಾಣಾ ಮಾರುಕಟ್ಟೆಯಲ್ಲಿ ಚಿನ್ನದ ವರ್ಣದಲ್ಲಿ ಭವ್ಯ ಮಂಟಪ ನಿರ್ಮಿಸಿ ಅಲ್ಲಿ ಅಯೋಧ್ಯೆಯಲ್ಲಿರುವ ಶ್ರೀ ರಾಮನ ಪವಿತ್ರ ಪ್ರತಿಮೆಯ ಪ್ರತಿರೂಪವನ್ನು ಇರಿಸಲಾಗಿತ್ತು. ಸಾಕ್ಷಾತ್ ಅಯೋಧ್ಯೆಯ ರಾಮಮಂದಿರ ಪ್ರತಿಮೆಯನ್ನೇ ನೋಡುವಂತೆ ಆಪ್ತವಾಗಿರುವ ಮೂರ್ತಿ ಇರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಲಾಯಿತು. ಚಿನ್ನದ ವರ್ಣದ ಬೃಹತ್ ಮಂಟಪದಲ್ಲಿ ಭವ್ಯ ಶ್ರೀರಾಮ ಮಂದಿರ, ಅದಕ್ಕೆ ಹೊಂದಿಕೊಂಡಂತೆ ಧನುರ್ಧಾರಿ ಶ್ರೀರಾಮನ ಪ್ರತಿಕೃತಿ ಹಾಗೂ ಹೃದಯ ಮಂದಿರದಲ್ಲಿ ಶ್ರೀರಾಮ ಸೀತೆಯನ್ನು ಇರಿಸಿದ ಹನುಮಂತನ ದೃಶ್ಯದ ಪ್ರತಿರೂಪ ಭಕ್ತಿಭಾವಕ್ಕೆ ಸಾಕ್ಷಿಯಾಯಿತು.ಯುವ ಭಾರತ ಸಂಸ್ಥೆಯ ಅಧ್ಯಕ್ಷ ಉಮೇಶ ಕಾರಜೋಳ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಇಂದು ಸಮಸ್ತ ಭಾರತೀಯರ ಕನಸು ನನಸಾಗಿದೆ, ಇಂದು ಇಡೀ ದೇಶವೇ ಹೆಮ್ಮೆಪಡುವ ಹಬ್ಬದ ದಿನ, ಅನೇಕ ಜನರ ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕನಸು ನನಸಾಗಿದೆ ಎಂದರು.ಈ‌ ಸಂದರ್ಬದಲ್ಲಿ ಸತೀಶ ಬಾಗಿ, ವಿರೇಶ ಗೋಬ್ಬೂರ, ಸಂತೋಷಗೌಡ ಪಾಟೀಲ, ಕಲ್ಮೇಶ ಅಮರಾವತಿ,…

Read More

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ | ಸುಳ್ಳು ವರದಿ ಸೃಷ್ಟಿ | ಪ್ರಕರಣ ಮುಚ್ಚಿ ಹಾಕಲು ಯತ್ನ ಹುಬ್ಬಳ್ಳಿ: ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ. ಈ ಕಾರಣದಿಂದಲೇ ಕರ್ನಾಟಕ ರಾಜ್ಯ ಸರ್ಕಾರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರದವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಪಾದಿಸಿದರು.ಹಾನಗಲ್‌ನಲ್ಲಿ ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿ ಶನಿವಾರ ಪ್ರತಿಭಟನೆ ಮಾಡುವ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕ್ರಿಮಿನಲ್‌ಗಳಿಗೆ ಕುಮಕ್ಕು ಸಿಗುತ್ತಿದೆ. ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ ಎಂದು ಅವರು ಕಿಡಿ ಕಾರಿದರು.ಹಾನಗಲ್‌ನಲ್ಲಿ ನಡೆದ ಸಾಮೂಹಿಕ ಅತ್ಯಚಾರದಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇಷ್ಟಾದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎನ್ನುತ್ತಾರೆ. ಹಾಗಾದರೆ ಇಬ್ಬರು ‌ಪೊಲೀಸರನ್ನ ಅಮಾನತು ಮಾಡಿದ್ದು ಏಕೆ..? ಎಂದು ಅವರು ಪ್ರಶ್ನಿಸಿದರು.ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ…

Read More