ಕೊಲ್ಹಾರ: ಅಸಂಖ್ಯಾತ ಕರಸೇವಕರ ಭಕ್ತರ ತಪಸ್ಸು ತ್ಯಾಗ ಬಲಿದಾನಕ್ಕೆ ತಕ್ಕ ಪ್ರತಿಫಲವಾಗಿ ಭಾರತೀಯರ ಮರ್ಯಾದಾ ಪುರುಷೋತ್ತಮ ಶ್ರೀರಾಮ ದೇವರ ಬಾಲರಾಮನ ಮೂರ್ತಿಯು ಅಯೋಧ್ಯೆಯ ರಾಮಲಲ್ಲಾ ಮಂದಿರದಲ್ಲಿ ಸೋಮವಾರ ಪ್ರತಿಷ್ಠಾಪನೆಗೊಂಡಿದ್ದು ವಿಶ್ವವೇ ಬೆರಗಾಗುವಂತೆ ಮಾಡಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಸೋಮವಾರ ಪಟ್ಟಣದ ಸಮೀಪವಿರುವ ಕೃಷ್ಣಾ ನದಿಯಲ್ಲಿ ಬೆಳಗಿನಜಾವ ಕಾರ್ಯಕರ್ತರೊಂದಿಗೆ ಸ್ನಾನವನ್ನು ಮುಗಿಸಿ ಪುಣ್ಯತೀರ್ಥವನ್ನು ಹೊತ್ತುಕೊಂಡು ಕೊಲ್ಹಾರ ಪುರದಲ್ಲಿರುವ ಸಕಲ ದೇವಾನು ದೇವತೆಗಳ ದೇವಸ್ಥಾನಕ್ಕೆ ತೆರಳಿ ಜಲವನ್ನು ಸಮರ್ಪಿಸಿದರು.
ರಾಮಮಂದಿರದ ಉದ್ಘಾಟನೆ ನಿಮಿತ್ಯವಾಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿರುವ ವಿವಿಧ ಸಮಾಜಗಳ ಮಂದಿರಗಳು ಏಕತಾ ಮನೋಭಾವದಿಂದ ಶುಬ್ರವಾಗಿ ಕಂಗೊಳಿಸುತ್ತಿದ್ದವು. ಧರ್ಮಗುರುಗಳ ಮಠಾಧೀಶರ ವೇದ ಮಂತ್ರಗಳ ಪಠಣದೊಂದಿಗೆ ರುದ್ರಾಭೀಷೇಕ ಹೋಮ ಹವನ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ಪ್ರಧಾನಿ ಮೋದಿಯವರ ಕರೆಯಂತೆ ಎಲ್ಲ ಗ್ರಾಮಗಳು ವಿಶೇಷವಾಗಿ ಕೊಲ್ಹಾರ ಪಟ್ಟಣ ಕೇಸರಿಮಯವಾಗಿ ಕಂಗೊಳಿಸಿ ಹಬ್ಬದ ವಾತಾವರಣ ಸೃಷ್ಟಿಯಾಗಿ ಎಲ್ಲೆಡೆ ರಂಗೋಲಿ ಚಿತ್ತಾರ ಬಿಡಿಸಿ ಜೈಶ್ರೀರಾಮ್ ಘೋಷಣೆ ಹಾಕುತ್ತಾ ಶ್ವೇತ ವರ್ಣದ ಪೋಶಾಕುಗಳನ್ನು ತೊಟ್ಟ ಕಾರ್ಯಕರ್ತರ ಸಂಬ್ರಮ ಮುಗಿಲು ಮುಟ್ಟುವಂತಿತ್ತು ಕೆಲವು ಕಡೆ ಕೀರ್ತನೆ ಭಜನೆ ಸಂಗೀತ ಪ್ರವಚನಗಳು ನಡೆದವು. ವಿಶ್ವ ಹಿಂದೂ ಪರಿಷತ್ ಭಜರಂಗದಳ, ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಧಾರ್ಮಿಕ ಮನೋಭಾವದಿಂದ ರಾಮಮಂದಿರ ಉದ್ಘಾಟನಾ ದಿನವನ್ನು ನಾಗರಿಕರಿಗೆ ಸಿಹಿ ಹಂಚುವ ಮೂಲಕ ಆಚರಣೆ ಮಾಡಿರುವುದು ನೋಡುಗರ ಕನ್ಮಣ ಸೆಳೆಯುತ್ತಿತ್ತು.
ಚಂದ್ರಶೇಖರಯ್ಯ ಹಿರೇಮಠ, ಶ್ರೀಶೈಲ ನಾ. ಗಿಡ್ಡಪ್ಪಗೋಳ, ಈರಣ್ಣ ಬಿರಾದಾರ, ವಿಣಿತಕುಮಾರ ದೇಸಾಯಿ, ಅಪ್ಪಸಿ ಮಟ್ಯಾಳ, ಸಂಗಪ್ಪ ಚಿತ್ತಾಪೂರ, ರಾಜಶೇಖರ ಶೀಲವಂತ, ಅಶೋಕ ಚೌಡಪ್ಪಗೋಳ, ಶಿವಾನಂದ ಮುರನಾಳ, ಹಣಮಂತ ಬಡಿಗೇರ, ಈರಪ್ಪ ಗಿಡ್ಡಪ್ಪಗೋಳ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

