ವಿಜಯಪುರ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಸರಕಾರದ ಸುತ್ತೋಲೆಯಂತೆ ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾಮಗಳಲ್ಲಿ ರಾಮ- ಹನುಮಂತದೇವರ ಗುಡಿಗಳು ಹಾಗೂ ಗ್ರಾಮದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ- ಪ್ರಾರ್ಥನೆ ನೆರವೇರಿಸಲಾಯಿತು.
ಅದರಂತೆ ಎಂ. ಬಿ. ಪಾಟೀಲ ಅವರ ಅಭಿಮಾನಿಗಳ ಬಳಗದವರು ಕೂಡಾ ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ರಾಮ, ಹನುಮಂತ ಮತ್ತು ಗ್ರಾಮದೇವತೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ ತಮ್ಮೂರಿನ ದೇವಸ್ಥಾನಗಳಿಗೆ ತೆರಳಿದ ಎಂ. ಬಿ. ಪಾಟೀಲ ಅವರ ಅಭಿಮಾನಿಗಳ ಬಳಗದ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಅಲ್ಲದೇ, ದೇವರ ಮೂರ್ತಿಗಳಿಗೆ ನೈವೇದ್ಯ ಅರ್ಪಿಸಿ ನಮನ ಸಲ್ಲಿಸಿದರು. ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ ನೆಲಸಲಿ ಎಂದು ಪ್ರಾರ್ಥಿಸಿದರು. ಅಲ್ಲದೇ, ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ಹಂಚಿದರು. ಅಲ್ಲದೇ, ಶ್ರೀರಾಮನ ಪರ ಜಯಘೋಷ ಹಾಕಿದರು.
Subscribe to Updates
Get the latest creative news from FooBar about art, design and business.
Related Posts
Add A Comment

