ವಿಜಯಪುರ: ನಗರದ ಯುವ ಭಾರತ ಸಮಿತಿ ವತಿಯಿಂದ ಶ್ರೀ ರಾಮಮಂದಿರ ಲೋಕಾರ್ಪಣೆಯನ್ನು ಸೋಮವಾರ ಅರ್ಥಪೂರ್ಣವಾಗಿ ಸಂಭ್ರಮಿಸಲಾಯಿತು.
ಕಿರಾಣಾ ಮಾರುಕಟ್ಟೆಯಲ್ಲಿ ಚಿನ್ನದ ವರ್ಣದಲ್ಲಿ ಭವ್ಯ ಮಂಟಪ ನಿರ್ಮಿಸಿ ಅಲ್ಲಿ ಅಯೋಧ್ಯೆಯಲ್ಲಿರುವ ಶ್ರೀ ರಾಮನ ಪವಿತ್ರ ಪ್ರತಿಮೆಯ ಪ್ರತಿರೂಪವನ್ನು ಇರಿಸಲಾಗಿತ್ತು. ಸಾಕ್ಷಾತ್ ಅಯೋಧ್ಯೆಯ ರಾಮಮಂದಿರ ಪ್ರತಿಮೆಯನ್ನೇ ನೋಡುವಂತೆ ಆಪ್ತವಾಗಿರುವ ಮೂರ್ತಿ ಇರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಲಾಯಿತು. ಚಿನ್ನದ ವರ್ಣದ ಬೃಹತ್ ಮಂಟಪದಲ್ಲಿ ಭವ್ಯ ಶ್ರೀರಾಮ ಮಂದಿರ, ಅದಕ್ಕೆ ಹೊಂದಿಕೊಂಡಂತೆ ಧನುರ್ಧಾರಿ ಶ್ರೀರಾಮನ ಪ್ರತಿಕೃತಿ ಹಾಗೂ ಹೃದಯ ಮಂದಿರದಲ್ಲಿ ಶ್ರೀರಾಮ ಸೀತೆಯನ್ನು ಇರಿಸಿದ ಹನುಮಂತನ ದೃಶ್ಯದ ಪ್ರತಿರೂಪ ಭಕ್ತಿಭಾವಕ್ಕೆ ಸಾಕ್ಷಿಯಾಯಿತು.
ಯುವ ಭಾರತ ಸಂಸ್ಥೆಯ ಅಧ್ಯಕ್ಷ ಉಮೇಶ ಕಾರಜೋಳ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಇಂದು ಸಮಸ್ತ ಭಾರತೀಯರ ಕನಸು ನನಸಾಗಿದೆ, ಇಂದು ಇಡೀ ದೇಶವೇ ಹೆಮ್ಮೆಪಡುವ ಹಬ್ಬದ ದಿನ, ಅನೇಕ ಜನರ ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕನಸು ನನಸಾಗಿದೆ ಎಂದರು.
ಈ ಸಂದರ್ಬದಲ್ಲಿ ಸತೀಶ ಬಾಗಿ, ವಿರೇಶ ಗೋಬ್ಬೂರ, ಸಂತೋಷಗೌಡ ಪಾಟೀಲ, ಕಲ್ಮೇಶ ಅಮರಾವತಿ, ಸಂತೋಷ ಝಳಕಿ, ಬಸವರಾಜ ಕರಿಕಬ್ಬಿ, ಈರಯ್ಯ ಹುಣಸಗಿಮಠ, ಸೋಮಶೇಖರ ಬಿರಾದಾರ, ಹಾಗೂ ಅನೇಕ ಕಾರ್ಯಕರ್ತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

