ಚಿಮ್ಮಡ: ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರದ ಲೋಕಾರ್ಪಣೆ ನಿಮಿತ್ತ ಗ್ರಾಮದಲ್ಲಿ ರವಿವಾರ ಹಾಗೂ ಸೋಮವಾರ ವಿವಿಧ ಧಾರ್ಮಿಕ, ಸಾಂಸೃತಿಕ, ಅದ್ಯಾತ್ಮಿಕ ಕಾರ್ಯಕ್ರಮಗಳು ವಿಜ್ರಂಬಣೆಯಿಂದ ನಡೆದವು.
ಸ್ಥಳಿಯ ಗ್ರಾ.ಪಂ. ಸದಸ್ಯ ಪ್ರಕಾಶ ಪಾಟೀಲ, ಹಣಮಂತ ಪೂಜಾರಿ, ಚನ್ನಪ್ಪಾ ತೇಲಿ, ಕಾಳು ಬಡಿಗೇರ, ಮೋನೇಶ ಬಡಿಗೇರ, ಈಶ್ವರ ಅರುಟಗಿ, ಶಿವಾನಂದ ದಿನ್ನಿಮನಿ ಹಾಗೂ ಭಗತ್‌ಸಿಂಗ ಯುವಕ ಮಂಡಲದ ನೇತ್ರತ್ವದಲ್ಲಿ ಸೋಮವಾರ ಶ್ರೀ ಪ್ರಭುಲಿಂಗೇಶ್ವರ ಹಾಗೂ ಶ್ರೀ ಹನುಮಾನ ದೇವಸ್ಥಾನಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮಂಗಳವಾರ ಮುಂಜಾನೆ ಶ್ರೀ ಪ್ರಭು ಮಹಾಸ್ವಾಮಿಗಳು ಹಾಗೂ ಶ್ರೀ ಜನಾರ್ಧನ ಮಹಾರಾಜರ ಸಾನಿಧ್ಯದಲ್ಲಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಕುಂಭದೊಂದಿಗೆ ಆಗಮಿಸಿ ಭಕ್ತಿ ಮೆರೆದರು.
ಮದ್ಯಾಹ್ನ ಇಡೀ ಗ್ರಾಮಕ್ಕೆ ಹುಗ್ಗಿ, ಕಿಚಡಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗಣವೇಶಧಾರಿ ಮಕ್ಕಳಿಗೆ ಹನುಮಾನ ಚಾಲಿಸಾ ನೀಡಿ ಪುರಸ್ಕರಿಸಲಾಯಿತು, ಸಾಯಂಕಾಲ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ, ಬೀರಪ್ಪಾ ಹಳೆಮನಿ, ಬಸವರಾಜ ಕುಂಚನೂರ, ಪ್ರಭು ಮುಧೋಳ, ಮನೋಜ ಹಟ್ಟಿ, ಅವ್ವನಪ್ಪಾ ಮುಗಳಖೋಡ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

