ಚಿಮ್ಮಡ: ಶ್ರೀರಾಮ, ಶ್ರೀ ಹನುಮಾನ ಪ್ರತಿಯೊಬ್ಬರ ಆರಾದ್ಯ ದೈವ ಅವರನ್ನು ಗುತ್ತಿಗೆ ಪಡೆದವರಂತೆ ಬಿಜೇಪಿಯವರು ಏಕಪಕ್ಷೀಯವಾಗಿ ವಿಜಯೋತ್ಸವ ಆಚರಿಸುತ್ತಿರುವುದು ಹಾಗೂ ದೇವಸ್ಥಾನಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದು ಸ್ಥಳಿಯ ಕಾಂಗ್ರೆಸ್ ಘಟಕದ ಆಧ್ಯಕ್ಷ ಉಮೇಶ ಪೂಜಾರಿ ಖಂಡಿಸಿದ್ದಾರೆ.
ಗ್ರಾಮದ ಹನುಮಾನ ದೇವಸ್ಥಾನದಲ್ಲಿ ರವಿವಾರ ರಾತ್ರಿ ಸ್ಥಳಿಯ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಗ್ರಾಮದಲ್ಲಿ ಯಾವುದೇ ಧಾರ್ಮಿಕ ಕಾರ್ಯ, ಕಟ್ಟಡ ನಿರ್ಮಾಣ, ಜಾತ್ರೆ ಸೇರಿದಂತೆ ಯಾವುದೇ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮ ಮಾಡುವಾಗ ಪಕ್ಷಾತೀತವಾಗಿ ಸರ್ವ ಸಮಾಜದ ಪ್ರಮುಖರ ಸಭೆ ಕರೆದು ಕಾರ್ಯಕ್ರಮದ ರೂಪುರೇಷೆ ತಯಾರಿಸಿ ಸರ್ವರ ನೇತ್ರತ್ವದಲ್ಲಿ ಕಾರ್ಯಕ್ರಮಗಳು ನಡೆಸುವ ಪದ್ದತಿ ನಡೆದುಕೊಂಡು ಬಂದಿದೆ. ಆದರೆ ಶ್ರೀ ರಾಮ ಪ್ರಾಣ ಪ್ರತೀಷ್ಠಾನದ ನಿಮಿತ್ತ ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಏಕಪಕ್ಷೀಯವಾಗಿ ನಡೆಯುತ್ತಿರುವುದು ದುರದೃಷ್ಠಕರ. ದೇವರ ವಿಷಯದಲ್ಲಿ ರಾಜಕೀಯ ಮಾಡುವ ಬಿಜೆಪಿ ನಡೆ ಖಂಡನೀಯವಾಗಿದ್ದು ಇದಕ್ಕೆ ಗ್ರಾಮದ ಪ್ರಮುಖರು ಅವಕಾಶ ನೀಡಬಾರದಾಗಿತ್ತು. ಮುಂಬರುವ ದಿನಗಳಲ್ಲಿಯಾದರೂ ಹಿಂದಿನ ಪದ್ದತಿಯಂತೆ ಧಾರ್ಮಿಕ ಕಾರ್ಯಕ್ರಮ ನಡೆಯುವಂತೆ ಗ್ರಾಮದ ಪ್ರಮುಖರು ಕ್ರಮ ಕೈಗೊಳ್ಳಬೇಕೆಂದರು.
ಗ್ರಾಮದ ಪ್ರಮುಖರಾದ ಬಿ.ಎಸ್.ಪಾಟೀಲ, ಅಣ್ಣಪ್ಪಗೌಡ ಪಾಟೀಲ, ಅಶೋಕ ಧಡೂತಿ, ಗ್ರಾ.ಪಂ. ಸದಸ್ಯ ಬಾಳಪ್ಪ ಗಡೆಪ್ಪನವರ, ದುಂಡಪ್ಪಾ ಪಾಟೀಲ, ಮಹಾಲಿಂಗ ಬಳಗಾರ, ಪ್ರವೀಣ ಪೂಜಾರಿ, ಮಲ್ಲಿಕಾರ್ಜುನ ಬಳಗಾರ, ಪಿರಸಾಬ ನದಾಫ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

