Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬೆಂಗಳೂರು: ಬಿಜೆಪಿ ಮಖಂಡ ಡಾ.ಗೌತಮ್ ಆರ್. ಚೌಧರಿ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧಕರಿಗೆ ವಿಜಯಕರ್ನಾಟಕ ಹಾಗು ಬೆಂಗಳೂರು ಮಿರರ್ ಪತ್ರಿಕೆಗಳು ಜಂಟಿಯಾಗಿ ಕೊಡಮಾಡುವ ೨೦೨೪ ರ ’ಹೆಲ್ತ್ ಎಕ್ಸೆಲೆನ್ಸ್’ ಪ್ರಶಸ್ತಿ ಲಭಿಸಿದೆ.ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೊಟೇಲದಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಗೌತಮ್ ಆರ್. ಚೌಧರಿ ಅವರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಖ್ಯಾತ ನಟಿ ಸಪ್ತಮಿಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಪುಣ್ಯ ಸ್ಮರಣೆ ನಿಮಿತ್ಯ ಬೃಹತ್ ಆರೋಗ್ಯ ಶಿಬಿರಕ್ಕೆ ಶಾಸಕ ಅಶೋಕ ಮನಗೂಳಿ ಚಾಲನೆ ಸಿಂದಗಿ: ನಾವೆಲ್ಲ ಉತ್ತಮ ಆರೋಗ್ಯವಂತರಿದ್ದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಆರೋಗ್ಯದ ಕಡೆಗೆ ಸದಾ ನಾವು ಜಾಗೃತಿ ವಹಿಸಬೇಕಾಗಿರುವುದು ಇಂದು ಅನಿವಾರ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ರವಿವಾರ ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ ೩ ನೇ ಪುಣ್ಯ ಸ್ಮರಣೆಯ ನಿಮಿತ್ಯ ಆಯೋಜಿಸಿರುವ ಉಚಿತ ಬೃಹತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದಿನ ವೈಜ್ಞಾನಿಕ ಬದುಕಿನಲ್ಲಿ ನಾವೆಲ್ಲ ಹೆಚ್ಚು ಒತ್ತಡದಲ್ಲಿದ್ದೇವೆ. ನಿರಂತರವಾಗಿ ಎಷ್ಟೇ ಕಾರ್ಯಗಳು ಮಾಡಿದರು ಮೊದಲು ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿಕೊಳ್ಳಬೇಕು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗಳಿಗೆ, ರೋಗ ನಿವಾರಣಕ್ಕೆ ಖರ್ಚು ಮಾಡಬೇಕಾಗುತ್ತದೆ. ನಮ್ಮ ತಂದೆ ದಿ.ಎಮ್.ಸಿ.ಮನಗೂಳಿ ಅವರ ಸ್ಮರಣೆಗಾಗಿ ಮನಗೂಳಿ ಆಸ್ಪತ್ರೆಯಲ್ಲಿ ನಮ್ಮ ಕುಟುಂಬದವರು ಸೇರಿ ಅನೇಕರಿಗೆ ಪ್ರಯೋಜನವಾಗಲಿ ಎಂದು ಉಚಿತ ಬೃಹತ ಆರೋಗ್ಯ ತಪಾಸಣಾ ಶಿಬಿರವನ್ನು…
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಸಂಭ್ರಮಾಚರಣೆ | ದೀಪೋತ್ಸವ | ವಿಶೇಷ ಪೂಜೆ *- ದೇವೇಂದ್ರ ಹೆಳವರ*ವಿಜಯಪುರ: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ, ಹಾಗೂ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ಪ್ರಭು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ನಮಿಸುವ ಮೂಲಕ ಭಕ್ತಿ ಭಾವ ಮೆರೆಯಲಾಯಿತು.ನಗರದ ಗಲ್ಲಿ-ಗಲ್ಲಿಗಳಲ್ಲಿ, ವಿವಿಧ ದೇವಸ್ಥಾನಗಳಲ್ಲಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಬಣ್ಣದ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿ ಶ್ರೀರಾಮನ ಭಾವಚಿತ್ರವಿಟ್ಟು ಜನರು ಪೂಜೆ ಸಲ್ಲಿಸಿ ಶ್ರದ್ಧಾ ಭಕ್ತಿಯಿಂದ ನಮನ ಸಲ್ಲಿಸಿದರು.ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನ, ಎಂ .ಜಿ. ರಸ್ತೆಯ ಶ್ರೀ ಮಧಲಾ ಮಾರುತಿ ದೇವಸ್ಥಾನ, ವಜ್ರ ಹನುಮಾನ ನಗರ, ರೇಣುಕಾ ನಗರದ ಹನುಮಾನ ದೇವಸ್ಥಾನ, ಇಬ್ರಾಹಿಂಪುರದ ಹಿರೇಮಠ, ಹನುಮಾನ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಮರಗಮ್ಮ ದೇವಿ ದೇವಸ್ಥಾನ, ಎಂ.ಜಿ ರಸ್ತೆಯ ಶ್ರೀ ಮಧಲಾ ಮಾರುತಿ ದೇವಸ್ಥಾನ, ಮನಗೂಳಿ ಅಗಸಿಯ ಹನುಮಾನ ದೇವಸ್ಥಾನ ಸೇರಿದಂತೆ ನಗರದ ವಿವಿಧ ಬಡಾವಣೆಗಳ…
ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ೧೯,೧೯,೦೪೮ ಮತದಾರರು | ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾಹಿತಿ ವಿಜಯಪುರ: ಜಿಲ್ಲೆಯ ೮ ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ೨೦೨೪ರ ಜನವರಿ ೨೨ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ೯,೭೬,೦೭೩ ಗಂಡು, ೯,೪೨,೭೫೭ ಹೆಣ್ಣು ಹಾಗೂ ೨೧೮ ಇತರೆ ಸೇರಿದಂತೆ ಒಟ್ಟು ೧೯,೧೯,೦೪೮ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಅಂದರೆ, ದಿನಾಂಕ:೨೭-೧೦-೨೦೨೩ ರಿಂದ ೦೯-೧೨-೨೦೨೩ರವರೆಗೆ ಸ್ವೀಕೃತವಾದ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು ೧೮,೯೯,೨೪೮ ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೧೯,೧೯,೦೪೮ ಮತದಾರರಿದ್ದು, ಒಟ್ಟು ೧೯,೮೦೦ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.೧೯,೧೯,೦೪೮ ಮತದಾರರು : ಜಿಲ್ಲೆಯ ವಿಧಾನಸಭಾವಾರು ಅಂತಿಮ ಮತದಾರರ ಪಟ್ಟಿಯಲ್ಲಿರುವಂತೆ ೨೬-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ೧,೧೧,೩೩೯ ಗಂಡು, ೧,೦೯,೧೬೬ ಹೆಣ್ಣು ಹಾಗೂ ೨೨ ಇತರೆ ಮತದಾರರು ಸೇರಿದಂತೆ ಒಟ್ಟು…
ಇಂಡಿ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನೆ ಸಂಭ್ರಮದ ಹಿನ್ನೆಲೆ ಅಂಗವಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸೋಮವಾರ ಅದ್ದೂರಿ ಶ್ರೀರಾಮ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.ವಿಹಿಂಪ ಭಜರಂಗದಳ ಮತ್ತು ನಗರದ ಗಣ್ಯರು ಶ್ರೀ ರಾಮನ ಅಪಾರ ಅಭಿಮಾನಿಗಳು ವ್ಯಾಪಾರಸ್ಥರು ಪಾಲ್ಗೊಂಡಿದ್ದರು.ಶಾಂತೇಶ್ವರ ದೇವಸ್ಥಾನದಿಂದ ಶ್ರೀರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆ ಪ್ರಾರಂಭಿಸಲಾಯಿತು. ಬಡಿಗೇರ, ಬಿರಾದಾರ ಓಣಿ ಮಾರ್ಗವಾಗಿ ಅಗಸಿ ಹನುಮಾನ ದೇವಾಲಯದಿಂದ ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತದ ಮುಖಾಂತರ ಹಾದು ಬಸವೇಶ್ವರ ವೃತ್ತದಲ್ಲಿ ಶೋಭಾಯಾತ್ರೆ ಕಾರ‍್ಯಕ್ರಮ ನಡೆಯಿತು.ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿದರು.ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು, ಪ್ರಕಾಶ ಬಿರಾದಾರ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ನೇತಾಜಿ ಪವಾರ ಮಾತನಾಡಿದರು.ಅಂಬಾಭವಾನಿ ಭಜನಾ ಮಂಡಳಿ ಕುಂಬಾರ ಓಣಿ, ಗುರುಸಾರ್ವಭೌಮ ಭಜನಾ ಮಂಡಳಿಯವರಿಂದ ಶೋಭಾ ಯಾತ್ರೆಯುದ್ದಕ್ಕೂ ರಾಮ ಭಜನೆ ನಡೆಯಿತು.ಸಂಜೆ ಶ್ರೀ ಶಾಂತೇಶ್ವರ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇವಸ್ಥಾನಗಳಲ್ಲಿ ಹಾಗೂ ಗ್ರಾಮೀಣ ಭಾಗದ ಪ್ರತಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ‍್ಯಕ್ರಮ ಆಯೋಜಿಸಲಾಗಿತ್ತು.ಜಿಆರ್‌ಜಿ ಕಾಲೇಜಿನ ಆವರಣದಲ್ಲಿ…
ಇಂಡಿ: ಗರ್ಭಿಣಿಯರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಡಾ|| ಪ್ರೀತಿ ಕೋಳೆಕರ ಹೇಳಿದರು.ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕ ಬೇವನೂರು ಹಾಗೂ ಸರಕಾರೇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕ ಆಸ್ಪತ್ರೆ ಇಂಡಿ ಸಭಾಭವನದಲ್ಲಿ ಸಾಮೂಹಿಕ ಸೀಮಂತ ಕಾರ‍್ಯಕ್ರಮ, ಜೊತೆಗೆ ಎಚ್‌ಐವಿ, ಸಿಪಿಲಿಸ್, ಹೆಪಟೈಟಿಸ್ ಕಾಯಿಲೆಯ ಕುರಿತು ಜಾಗೃತಿ ಆಂದೋಲನ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ‍್ಯಕ್ರಮದಲ್ಲಿ ಮಾತನಾಡಿದರು.ಸೀಮಂತ ಕಾರ‍್ಯ ಒಂದು ಭಾವನಾತ್ಮಕ ಸಂಬಂಧ ಹೊಂದಿದ್ದು, ಮಹಿಳೆ ತನ್ನ ಚೊಚ್ಚಲ ಕುಡಿಯನ್ನು ಗರ್ಭದಲ್ಲಿ ಹೊತ್ತು ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಕಾರ‍್ಯಕ್ರಮ ಎಂದ ಅವರು, ಗರ್ಭಿಣಿಯರು ಟಿವಿ ವೀಕ್ಷಣೆಯಿಂದ ದೂರವಿರಬೇಕು. ಅದು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ಸರಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಈ ಕಾರ‍್ಯಕ್ರಮ ಆಯೋಜಿಸುತ್ತಿದ್ದು, ಮಾನಸಿಕ ಆರೋಗ್ಯದ ಕಡೆಗೂ ಅತಿ ಹೆಚ್ಚಿನ ಗಮನ ಕೊಡಬೇಕಿದೆ. ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು ಎಂದರು.ದಂತ ವೈದ್ಯಾಧಿಕಾರಿ…
ಇಂಡಿ: ತಾನು ಕೇವಲ ತುಂಬಿದ ಹೊಳೆಯಲ್ಲಿ ಡೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರವಲ್ಲ ಭವಸಾಗರದಲ್ಲಿ ಹುಟ್ಟು ಹಾಕುವ ಕೌಶಲ್ಯ ಉಳ್ಳವರು ಎಂದು ತೋರಿಸಿದವರು ನಿಜಶರಣ ಅಂಬಿಗರ ಚೌಡಯ್ಯ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ರವಿವಾರ ತಾಲೂಕಾ ಆಡಳಿತ ವತಿಯಿಂದ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ ನೇರ ನಿರ್ಭೀತ ವಚನಗಳನ್ನು ಬರೆದಿದ್ದಾರೆ ಎಂದರು.ಶಿಕ್ಷಕ ಬಸವರಾಜ ಗೊರನಾಳ ಮಾತನಾಡಿದರು.
ಇಂಡಿ: ಪಟ್ಟಣದ ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ ವಿಪ್ರ ಬಾಂಧವರೆಲ್ಲ ಸೇರಿಕೊಂಡು ಬೆಳಿಗ್ಗೆ ೯:೦೦ ಘಂಟೆಗೆ ಶ್ರೀರಾಮನ ಭವ್ಯವಾದ ಮೆರವಣಿಗೆಯೊಂದಿಗೆ ಭಜನೆ, ನೃತ್ಯ ಗೀತಾದಿಗಳೊಂದಿಗೆ, ಬಾಲರಾಮನ ವೇಷಧಾರಿಗಳೊಂದಿಗೆ ರಾಮನಾಮ ಸಂಕೀರ್ತನೆ ಮಾಡಿ, ಸಂಭ್ರಮಿಸಿದರು.ನಂತರ ರಾಮನ ಮಹಿಮೆ ಮತ್ತು ರಾಮಾಯಣದ ಅನೇಕ ದೃಷ್ಠಾಂತಗಳನ್ನು ತಮ್ಮ ಪ್ರವಚನದ ಮೂಲಕ ಪಂಡಿತ ಸರ್ವೇಶಾಚಾರ್ಯ ಅಕಮಂಚಿಯವರು ರಾಮನಲ್ಲಿರುವ ಪಿತೃಭಕ್ತಿ ಹಾಗೂ ರಾಮರಾಜ್ಯದ ಕಲ್ಪನೆಯನ್ನು ತಿಳಿ ಹೇಳಿದರು.ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸಾಯಂಕಾಲ ದೀಪೋತ್ಸವದ ಮೂಲಕ ಶ್ರೀರಾಮನನ್ನು ಭಕ್ತಿ ಭಾವದಿಂದ ಪೂಜಿಸಿದರು.
ಇಂಡಿ: ತಾಲೂಕಿನ ಮಸಳಿ ಬಿ.ಕೆ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಡಾ. ಶಿವಕುಮಾರ ಮಹಾಶಿವಯೋಗಿಗಳ ೫ ನೇ ವಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿದ್ದ ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೆಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಸಿಧ್ಧಗಂಗಾ ಮಠ ರಾಜ್ಯದಲ್ಲಿಯೇ ಲಕ್ಷಾಂತರ ಮಕ್ಕಳಿಗೆ ಉಚಿತ ವಿದ್ಯಾದಾನ, ಅನ್ನದಾನ ಮಾಡಿದ ಮಠವಾಗಿದೆ. ಆ ಮಠದಲ್ಲಿ ಕೇವಲ ಶಿಕ್ಷಣ ಮಾತ್ರ ಸಿಗಲ್ಲ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಸಮಾಜದಲ್ಲಿ ಬದುಕುವ ಬಗೆ, ಸಂಸ್ಕಾರ ಇವೆಲ್ಲವನ್ನೂ ನೀಡಲಾಗುತ್ತದೆ. ಗೀಗಾಗಿ ಅಲ್ಲಿ ಕಲಿತ ಮಕ್ಕಳು ಸಂಸ್ಕಾರವಂತರಾಗಿ ಬಾಳಿ ಬದುಕುತ್ತಾರೆ. ಅಂತಹ ಮಠದ ಲಿಂಗೈಕ್ಯ ಶ್ರೀಗಳ ಪುಣ್ಯಸ್ಮರಣೆ ಆಚರಿಸುತ್ತಿರುವುದು ನಿಮ್ಮ ಸೌಭಾಗ್ಯವೇ ಸರಿ ಎಂದರು.ಸಿದ್ದಗಂಗಾ ಮಠದಲ್ಲಿ ಕಲಿತ ವಿದ್ಯಾರ್ಥಿ ಹಣಮಂತ್ರಾಯ ಹೊನ್ನಳ್ಳಿ ಅವರಿಗೆ ಶ್ರೀಗಳು ಸತ್ಕರಿಸಿದರು.ಮಲ್ಲನಗೌಡ ಪಾಟೀಲ, ಸಂಜು ಸೋಲಾಪೂರ, ಶಿವಾನಂದ ಕ್ಷತ್ರಿ, ಸಂಜು ರಜಪೂರ, ಚಂದು ಅಗಸರ, ಬೋಜೆಪ್ಪ ಚಾಂದಕವಠೆ, ಗುರುರಾಜಗೌಡ ಲೋಣಿ, ಅದೃಷ್ಯಪ್ಪ ವಾಲಿ, ರವಿ ರಾಯಜಿ, ಬಸವರಾಜ ಪಟ್ಟಣಶೆಟ್ಟಿ, ಸಿದ್ದು ಸೋಲಾಪೂರ, ಮತ್ತಿತರರಿದ್ದರು.
ದೇವರಹಿಪ್ಪರಗಿ: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಹನುಮಾನ, ವಿಠ್ಠಲ ಮಂದಿರ, ಕೆಇಬಿ ಆಂಜನೇಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಿ, ಪ್ರಸಾದ ವಿತರಿಸಲಾಯಿತು.ಪಟ್ಟಣದ ಮೇನ್ ಬಜಾರಿನ ಹನುಮಾನ ದೇವಸ್ಥಾನದಲ್ಲಿ ಜಡಿಮಠದ ಜಡೇಸಿದ್ಧೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗೂ ವಠಾರದ ವಿಠ್ಠಲ ಮಂದಿರದಲ್ಲಿ ವಿಪ್ರ ಸಮುದಾಯದ ಶಿವಚಿದಂಬರ್ ಸೇವಾ ಸಮೀತಿಯವರು ಹಾಗೂ ಇಂಡಿ ರಸ್ತೆಯ ಕೆಇಬಿ ಆಂಜನೇಯ ದೇವಾಲಯದಲ್ಲಿ ಹೆಸ್ಕಾಂ ಸಿಬ್ಬಂದಿ ಶ್ರೀಪಾದ ಜೋಷಿಯವರ ಮೂಲಕ ಶ್ರೀರಾಮನಿಗೆ ಭಜನೆ, ಭಕ್ತಿಗೀತೆಗಳ ಸಹಿತ ಶಾಸ್ತ್ರೋಕ್ತ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ಸೇರಿದ ಭಕ್ತಸಮೂಹಕ್ಕೆ ಪ್ರಸಾದ ವಿತರಿಸಲಾಯಿತು.ತಾಲ್ಲೂಕಿನ ಕೋರವಾರ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಸಹ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಶ್ರೀರಾಮನ ಭಾವಚಿತ್ರ ಹಾಗೂ ಕಟೌಟಗಳಿಗೆ ಪೂಜೆ ನೆರವೇರಿಸಿ ಮಹಾಪ್ರಸಾದ ವಿತರಿಸಲಾಯಿತು. ಇನ್ನು ಮನೆಗಳಲ್ಲಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ನಂತರ ಸಿಹಿಅಡುಗೆ ಮಾಡಿ ಪ್ರಸಾದ ಸ್ವೀಕರಿಸಿದ್ದು ಕಂಡು ಬಂತು. ಬೆಳಿಗ್ಗೆಯಿಂದ ಮಧ್ಯಾನ್ಹದವರೆಗೆ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರವನ್ನು ಟಿ.ವ್ಹಿ ಯ ಮೂಲಕ ವೀಕ್ಷಿಸಿದ ಮಹಿಳೆಯರು, ಮಕ್ಕಳು…
