ದೇವರಹಿಪ್ಪರಗಿ: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಹನುಮಾನ, ವಿಠ್ಠಲ ಮಂದಿರ, ಕೆಇಬಿ ಆಂಜನೇಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಿ, ಪ್ರಸಾದ ವಿತರಿಸಲಾಯಿತು.
ಪಟ್ಟಣದ ಮೇನ್ ಬಜಾರಿನ ಹನುಮಾನ ದೇವಸ್ಥಾನದಲ್ಲಿ ಜಡಿಮಠದ ಜಡೇಸಿದ್ಧೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗೂ ವಠಾರದ ವಿಠ್ಠಲ ಮಂದಿರದಲ್ಲಿ ವಿಪ್ರ ಸಮುದಾಯದ ಶಿವಚಿದಂಬರ್ ಸೇವಾ ಸಮೀತಿಯವರು ಹಾಗೂ ಇಂಡಿ ರಸ್ತೆಯ ಕೆಇಬಿ ಆಂಜನೇಯ ದೇವಾಲಯದಲ್ಲಿ ಹೆಸ್ಕಾಂ ಸಿಬ್ಬಂದಿ ಶ್ರೀಪಾದ ಜೋಷಿಯವರ ಮೂಲಕ ಶ್ರೀರಾಮನಿಗೆ ಭಜನೆ, ಭಕ್ತಿಗೀತೆಗಳ ಸಹಿತ ಶಾಸ್ತ್ರೋಕ್ತ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ಸೇರಿದ ಭಕ್ತಸಮೂಹಕ್ಕೆ ಪ್ರಸಾದ ವಿತರಿಸಲಾಯಿತು.
ತಾಲ್ಲೂಕಿನ ಕೋರವಾರ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಸಹ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಶ್ರೀರಾಮನ ಭಾವಚಿತ್ರ ಹಾಗೂ ಕಟೌಟಗಳಿಗೆ ಪೂಜೆ ನೆರವೇರಿಸಿ ಮಹಾಪ್ರಸಾದ ವಿತರಿಸಲಾಯಿತು. ಇನ್ನು ಮನೆಗಳಲ್ಲಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ನಂತರ ಸಿಹಿಅಡುಗೆ ಮಾಡಿ ಪ್ರಸಾದ ಸ್ವೀಕರಿಸಿದ್ದು ಕಂಡು ಬಂತು. ಬೆಳಿಗ್ಗೆಯಿಂದ ಮಧ್ಯಾನ್ಹದವರೆಗೆ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರವನ್ನು ಟಿ.ವ್ಹಿ ಯ ಮೂಲಕ ವೀಕ್ಷಿಸಿದ ಮಹಿಳೆಯರು, ಮಕ್ಕಳು ಸಾಯಂಕಾಲ ಆಗುತ್ತಿದ್ದಂತೆಯೇ ಹಣತೆಗಳಲ್ಲಿ ದೀಪ ಬೆಳಗಿಸಿ ಭಕ್ತಿ, ಭಾವದಿಂದ ಸಂಭ್ರಮಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

