Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಿಜಯಪುರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ
(ರಾಜ್ಯ ) ಜಿಲ್ಲೆ

ವಿಜಯಪುರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ೧೯,೧೯,೦೪೮ ಮತದಾರರು | ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾಹಿತಿ

ವಿಜಯಪುರ: ಜಿಲ್ಲೆಯ ೮ ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ೨೦೨೪ರ ಜನವರಿ ೨೨ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ೯,೭೬,೦೭೩ ಗಂಡು, ೯,೪೨,೭೫೭ ಹೆಣ್ಣು ಹಾಗೂ ೨೧೮ ಇತರೆ ಸೇರಿದಂತೆ ಒಟ್ಟು ೧೯,೧೯,೦೪೮ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಅಂದರೆ, ದಿನಾಂಕ:೨೭-೧೦-೨೦೨೩ ರಿಂದ ೦೯-೧೨-೨೦೨೩ರವರೆಗೆ ಸ್ವೀಕೃತವಾದ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು ೧೮,೯೯,೨೪೮ ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೧೯,೧೯,೦೪೮ ಮತದಾರರಿದ್ದು, ಒಟ್ಟು ೧೯,೮೦೦ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.
೧೯,೧೯,೦೪೮ ಮತದಾರರು : ಜಿಲ್ಲೆಯ ವಿಧಾನಸಭಾವಾರು ಅಂತಿಮ ಮತದಾರರ ಪಟ್ಟಿಯಲ್ಲಿರುವಂತೆ ೨೬-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ೧,೧೧,೩೩೯ ಗಂಡು, ೧,೦೯,೧೬೬ ಹೆಣ್ಣು ಹಾಗೂ ೨೨ ಇತರೆ ಮತದಾರರು ಸೇರಿದಂತೆ ಒಟ್ಟು ೨,೨೦,೫೨೭ ಮತದಾರರಿದ್ದಾರೆ.
ಅದರಂತೆ, ೨೭-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೩,೮೫೮ ಗಂಡು, ೧,೦೮,೪೫೯ ಹೆಣ್ಣು ಹಾಗೂ ೨೦ ಇತರೆ ಮತದಾರರು ಸೇರಿದಂತೆ ೨,೨೨,೩೩೭ ಮತದಾರರಿದ್ದಾರೆ. ೨೮-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ೧,೦೮,೮೮೨ ಗಂಡು, ೧,೦೫,೫೭೯ ಹೆಣ್ಣು ಹಾಗೂ ೧೫ ಇತರೆ ಮತದಾರರು ಸೇರಿದಂತೆ ಒಟ್ಟು ೨,೧೪,೪೭೬ ಮತದಾರರಿದ್ದಾರೆ.
೨೯-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ೧,೧೧,೬೮೪ ಗಂಡು, ೧,೦೭,೮೩೬ ಹೆಣ್ಣು ಹಾಗೂ ೪ ಇತರೆ ಮತದಾರರು ಸೇರಿದಂತೆ ಒಟ್ಟು ೨,೧೯,೫೨೪ ಮತದಾರರಿದ್ದಾರೆ. ೩೦-ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದಲ್ಲಿ ೧,೩೯,೯೭೪ ಗಂಡು, ೧,೪೨,೪೯೪ ಹೆಣ್ಣು ಹಾಗೂ ೯೩ ಇತರೆ ಮತದಾರರು ಸೇರಿದಂತೆ ಒಟ್ಟು ೨,೮೨,೫೬೧ ಮತದಾರರಿದ್ದಾರೆ.
೩೧-ನಾಗಠಾಣ ವಿಧಾನಸಭಾ ಮತಕ್ಷೇತ್ರದಲ್ಲಿ ೧,೩೯,೫೮೨ ಗಂಡು, ೧,೩೨,೫೪೦ ಹೆಣ್ಣು ಹಾಗೂ ೧೭ ಇತರೆ ಮತದಾರರು ಸೇರಿದಂತೆ ೨,೭೨,೧೩೯ ಮತದಾರರಿದ್ದಾರೆ. ೩೨-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ೧,೨೭,೪೪೧ ಗಂಡು, ೧,೧೯,೫೮೩ ಹೆಣ್ಣು ಹಾಗೂ ೧೮ ಇತರೆ ಮತದಾರರು ಸೇರಿದಂತೆ ೨,೪೭,೦೪೨ ಮತದಾರರಿದ್ದಾರೆ ಮತ್ತು ೩೩-ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ ೧,೨೩,೩೧೩ ಗಂಡು, ೧,೧೭,೧೦೦ ಹೆಣ್ಣು ಹಾಗೂ ೨೯ ಇತರೆ ಮತದಾರರು ಸೇರಿದಂತೆ ಒಟ್ಟು ೨,೪೦,೪೪೨ ಮತದಾರರಿದ್ದು, ಒಟ್ಟು ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರದಲ್ಲಿ ೯,೭೬,೦೭೩ ಗಂಡು, ೯,೪೨,೭೫೭ ಹೆಣ್ಣು ಹಾಗೂ ೨೧೮ ಇತರೆ ಮತದಾರರು ಸೇರಿದಂತೆ ಒಟ್ಟು ೧೯,೧೯,೦೪೮ ಮತದಾರರಿದ್ದಾರೆ.
೨೦೮೫ ಮತಗಟ್ಟೆಗಳು: ಅಂತಿಮ ಮತದಾರರ ಪಟ್ಟಿಯನುಸಾರ ವಿಜಯಪುರ ಜಿಲ್ಲೆಯಲ್ಲಿ ೨೦೮೫ ಮತಗಟ್ಟೆಗಳಿದ್ದು, ವಿಧಾನಸಭಾವಾರು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ೨೪೫ ಮತಗಟ್ಟೆಗಳು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ೨೫೨ ಮತಗಟ್ಟೆಗಳು, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ೨೩೦ ಮತಗಟ್ಟೆಗಳಿವೆ. ಬಬಲೇಶ್ವರ ಮತಕ್ಷೇತ್ರದಲ್ಲಿ ೨೪೩ ಮತಗಟ್ಟೆಗಳು, ಬಿಜಾಪುರ ನಗರ ಮತಕ್ಷೇತ್ರದಲ್ಲಿ ೨೮೨ ಮತಗಟ್ಟೆಗಳಿವೆ. ನಾಗಠಾಣ ಮತಕ್ಷೇತ್ರದಲ್ಲಿ ೨೯೭, ಇಂಡಿ ಮತಕ್ಷೇತ್ರದಲ್ಲಿ ೨೬೮ ಮತಗಟ್ಟೆಗಳಿದ್ದು ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ ೨೬೮ ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ ೨೦೮೫ ಮತಗಟ್ಟೆಗಳು ಅಂತಿಮವಾಗಿ ಅಸ್ತಿತ್ವದಲ್ಲಿವೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ನಿರಂತರವಾಗಿರುವುದರಿಂದ ಅರ್ಹ ಸಾರ್ವಜನಿಕರು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ವೋಟರ್ ಹೆಲ್ಫ ಲೈನ್ ಮೊಬೈಲ್ ಆಪ್ ಮೂಲಕವಾಗಲಿ, ವಿಎಸ್‌ಪಿ ಪೋರ್ಟಲ್ ಹಾಗೂ www.ceo.karnataka.gov.in ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

ಅಂಬರ ಚುಂಬಿತ ಪ್ರೇಮ ಪ್ರೇಮ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ
    In (ರಾಜ್ಯ ) ಜಿಲ್ಲೆ
  • ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ
    In (ರಾಜ್ಯ ) ಜಿಲ್ಲೆ
  • ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ
    In (ರಾಜ್ಯ ) ಜಿಲ್ಲೆ
  • ಅಂಬರ ಚುಂಬಿತ ಪ್ರೇಮ ಪ್ರೇಮ
    In ವಿಶೇಷ ಲೇಖನ
  • ಅಗ್ನಿ ಅವಘಡ: ರೂ.50 ಲಕ್ಷ ಮೌಲ್ಯದ ವಸ್ತುಗಳು ಭಸ್ಮ!
    In (ರಾಜ್ಯ ) ಜಿಲ್ಲೆ
  • ಏತ ನೀರಾವರಿ ಯೋಜನೆಯ ಪ್ರಾರಂಭಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಇಡ್ಲಿ-ವಡೆ ಜೊತೆಗೆ ಗ್ಯಾಸ್​ಗೂ ಬಿಲ್! :ಭಾರಿ ವೈರಲ್
    In (ರಾಜ್ಯ ) ಜಿಲ್ಲೆ
  • ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ
    In (ರಾಜ್ಯ ) ಜಿಲ್ಲೆ
  • ಸಿಲಿಂಡರ್ ಸ್ಟಾಕ್ ಇಲ್ಲ :ಸಚಿವ ಮುನಿಯಪ್ಪ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.