ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಪುಣ್ಯ ಸ್ಮರಣೆ ನಿಮಿತ್ಯ ಬೃಹತ್ ಆರೋಗ್ಯ ಶಿಬಿರಕ್ಕೆ ಶಾಸಕ ಅಶೋಕ ಮನಗೂಳಿ ಚಾಲನೆ
ಸಿಂದಗಿ: ನಾವೆಲ್ಲ ಉತ್ತಮ ಆರೋಗ್ಯವಂತರಿದ್ದಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಆರೋಗ್ಯದ ಕಡೆಗೆ ಸದಾ ನಾವು ಜಾಗೃತಿ ವಹಿಸಬೇಕಾಗಿರುವುದು ಇಂದು ಅನಿವಾರ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ರವಿವಾರ ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರ ೩ ನೇ ಪುಣ್ಯ ಸ್ಮರಣೆಯ ನಿಮಿತ್ಯ ಆಯೋಜಿಸಿರುವ ಉಚಿತ ಬೃಹತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ವೈಜ್ಞಾನಿಕ ಬದುಕಿನಲ್ಲಿ ನಾವೆಲ್ಲ ಹೆಚ್ಚು ಒತ್ತಡದಲ್ಲಿದ್ದೇವೆ. ನಿರಂತರವಾಗಿ ಎಷ್ಟೇ ಕಾರ್ಯಗಳು ಮಾಡಿದರು ಮೊದಲು ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿಕೊಳ್ಳಬೇಕು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗಳಿಗೆ, ರೋಗ ನಿವಾರಣಕ್ಕೆ ಖರ್ಚು ಮಾಡಬೇಕಾಗುತ್ತದೆ. ನಮ್ಮ ತಂದೆ ದಿ.ಎಮ್.ಸಿ.ಮನಗೂಳಿ ಅವರ ಸ್ಮರಣೆಗಾಗಿ ಮನಗೂಳಿ ಆಸ್ಪತ್ರೆಯಲ್ಲಿ ನಮ್ಮ ಕುಟುಂಬದವರು ಸೇರಿ ಅನೇಕರಿಗೆ ಪ್ರಯೋಜನವಾಗಲಿ ಎಂದು ಉಚಿತ ಬೃಹತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದೇವೆ ಎಂದರು.
ಈ ವೇಳೆ ಮನಗೂಳಿ ಆಸ್ಪತ್ರೆಯ ಡಾ. ಶಾಂತವೀರ ಮನಗೂಳಿ ಮಾತನಾಡಿದರು.
ಈ ವೇಳೆ ಶಿಬಿರದಲ್ಲಿ ವಿವಿಧ ರೋಗಗಳಾದ ಹೃದಯ ಸಂಬಂಧಿಸಿದ ಕಾಯಿಲೆ, ನರರೋಗ, ಕ್ಯಾನ್ಸರ್, ಸ್ತ್ರೀರೋಗ, ಮೂತ್ರಪಿಂಡದಲ್ಲಿ ಕಲ್ಲು, ಚರ್ಮರೋಗ, ಇಸಿಜಿ, ರಕ್ತ ತಪಾಷಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ರೋಗಗಳ ತಪಾಸಣಾ ಕಾರ್ಯದಲ್ಲಿ ಸುಮಾರು ೩೮೦ ಕ್ಕೂ ಹೆಚ್ಚು ಜನ ರೋಗಿಗಳು ಶಿಬಿರದ ಲಾಭಗಳನ್ನು ಪಡೆದುಕೊಂಡರು.
ಶಿಬಿರದಲ್ಲಿ ಡಾ.ಸಂಧ್ಯಾ ಮನಗೂಳಿ, ಡಾ.ಕುಶಾಲ ತಾರಾಪೂರ, ಡಾ.ವಿಜಯಲಕ್ಷ್ಮೀ ತಾರಾಪೂರ, ಡಾ.ಮಲ್ಲಪ್ಪ ಹುಗ್ಗಿ, ಡಾ.ಸುನೀಲ ಸಜ್ಜನ, ಡಾ.ಸೌಮ್ಯಾ ಮನಗೂಳಿ, ಡಾ.ಕಿರಣಕುಮಾರಿ ಶ್ರೀಗಿರಿ ರೋಗಿಗಳಿಗೆ ಚಿಕಿತ್ಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಿದ್ದಮ್ಮಗೌಡತಿ ಮನಗೂಳಿ, ನಾಗರತ್ನಾ ಮನಗೂಳಿ, ಡಾ.ಸಂಜು ಅವಟಿ, ಡಾ.ಆರತಿ ಚಿಕ್ಕೋಡಿ, ಡಾ.ಪ್ರತಿಭಾ ಬಿರಾದಾರ, ಡಾ.ಅಶ್ವಿನಿ ಆಲೂರ, ರವಿ ಗೋಲಾ, ಸಂಗನಬಸು ಬಿರಾದಾರ, ಶ್ರೀಶೈಲ ಬೀರಗೊಂಡ, ಎಲ್.ಎಸ್.ಪೂಜಾರಿ, ಕುಮಾರ ಬಗಲಿ, ವಿನೋದ ಕಲಬುರ್ಗಿ, ಸಿದ್ದು ಮಲ್ಲೇದ, ಆನಂದ ಮುರಗಾನೂರ, ಪ್ರವೀಣ ಯಾಳವಾರ, ಸಾವಿತ್ರಿ ಗಾಣಿಗೇರ, ಮೀನಾಕ್ಷೀ ನಾಯ್ಕೋಡಿ, ಪವಿತ್ರಾ ರಾಠೋಡ, ಶಂಭು ಕಕ್ಕಳಮೇಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

