ಇಂಡಿ: ಗರ್ಭಿಣಿಯರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಡಾ|| ಪ್ರೀತಿ ಕೋಳೆಕರ ಹೇಳಿದರು.
ಪಟ್ಟಣದ ತಾಲೂಕ ಸಾರ್ವಜನಿಕ ಆಸ್ಪತ್ರೆ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕ ಬೇವನೂರು ಹಾಗೂ ಸರಕಾರೇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕ ಆಸ್ಪತ್ರೆ ಇಂಡಿ ಸಭಾಭವನದಲ್ಲಿ ಸಾಮೂಹಿಕ ಸೀಮಂತ ಕಾರ‍್ಯಕ್ರಮ, ಜೊತೆಗೆ ಎಚ್‌ಐವಿ, ಸಿಪಿಲಿಸ್, ಹೆಪಟೈಟಿಸ್ ಕಾಯಿಲೆಯ ಕುರಿತು ಜಾಗೃತಿ ಆಂದೋಲನ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಸೀಮಂತ ಕಾರ‍್ಯ ಒಂದು ಭಾವನಾತ್ಮಕ ಸಂಬಂಧ ಹೊಂದಿದ್ದು, ಮಹಿಳೆ ತನ್ನ ಚೊಚ್ಚಲ ಕುಡಿಯನ್ನು ಗರ್ಭದಲ್ಲಿ ಹೊತ್ತು ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಕಾರ‍್ಯಕ್ರಮ ಎಂದ ಅವರು, ಗರ್ಭಿಣಿಯರು ಟಿವಿ ವೀಕ್ಷಣೆಯಿಂದ ದೂರವಿರಬೇಕು. ಅದು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ಸರಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಈ ಕಾರ‍್ಯಕ್ರಮ ಆಯೋಜಿಸುತ್ತಿದ್ದು, ಮಾನಸಿಕ ಆರೋಗ್ಯದ ಕಡೆಗೂ ಅತಿ ಹೆಚ್ಚಿನ ಗಮನ ಕೊಡಬೇಕಿದೆ. ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು ಎಂದರು.
ದಂತ ವೈದ್ಯಾಧಿಕಾರಿ ಡಾ|| ರವಿ ಬತಗುಣಕಿ, ಡಾ|| ರವಿ ಅಂಬೆವಾಡಿ, ಕೆ.ಜಿ. ಶೀಲವಂತ, ಶಿವಾಜಿ ಮಾನೆ ಮಾತನಾಡಿ, ತಾಯಿಯ ಎದೆ ಹಾಲಿನ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಮಾತನಾಡಿದರು.
ಚರ್ಮರೋಗ ತಜ್ಞ ಡಾ|| ಸಂತೋಷ ಪವಾರ, ಡಾ.ಪ್ರಶಾಂತ ಧೂಮಗೊಂಡ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತಹ ವೈ.ಎಂ. ಪೂಜಾರಿ ಪಾಲ್ಗೊಂಡಂತಹ ಗರ್ಭಿಣಿ ತಾಯಂದಿರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಪೌಷ್ಟಿಕಾಂಶದ ಆಹಾರದ ಕುರಿತಾದಂತಹ ಮಾಹಿತಿ, ಹಾಗೂ ಹಚ್.ಐ.ವಿ/ ಏಡ್ಸ್ ಮತ್ತು ಹೆಪಟೈಟಿಸ್, ಸಿಪಿಲಿಸ ಕಾಯಿಲೆ ಕುರಿತು ಜಾಗೃತಿಯನ್ನು ವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಆಸ್ಪತ್ರೆಯ ಏಆರ್‌ಟಿ, ವಿಭಾಗದ ಸಿಬ್ಬಂದಿ, ಸವಿತಾ ಬೈರ್ಶೆಟ್ಟಿ, ಭುವನೇಶ್ವರಿ ಹಾಗೂ ಐಸಿಟಿಸಿ ವಿಭಾಗದ ಸಿಬ್ಬಂದಿ ಮತ್ತು ಡಿಎಸ್‌ಆರ್‌ಸಿ ಭಾಗದ ಎಲ್ಲ ಸಿಬ್ಬಂದಿಗಳು ಮತ್ತು ನಗರ ವಿಭಾಗದ ಎಲ್ಲಾ ಆಶಾ ಕಾರ್ಯಕರ್ತೆಯರು ಹಾಗೂ ಆಶಾ ಫೆಸಿಲಿಟೇಟರ್ ಅವರು ಪಾಲ್ಗೊಂಡರು.
ಸರ್ಕಾರೇತರ ಸಂಘ ಸಂಸ್ಥೆಗಳಾದಂತ ಉಜ್ವಲ ಸಂಸ್ಥೆಯ ಸಿಎಸ್‌ಸಿ. ಸಂಸ್ಥೆ ಸಿಬ್ಬಂದಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

