ಇಂಡಿ: ಪಟ್ಟಣದ ಶ್ರೀ ಸತ್ಯ ನಾರಾಯಣ ದೇವಸ್ಥಾನದಲ್ಲಿ ವಿಪ್ರ ಬಾಂಧವರೆಲ್ಲ ಸೇರಿಕೊಂಡು ಬೆಳಿಗ್ಗೆ ೯:೦೦ ಘಂಟೆಗೆ ಶ್ರೀರಾಮನ ಭವ್ಯವಾದ ಮೆರವಣಿಗೆಯೊಂದಿಗೆ ಭಜನೆ, ನೃತ್ಯ ಗೀತಾದಿಗಳೊಂದಿಗೆ, ಬಾಲರಾಮನ ವೇಷಧಾರಿಗಳೊಂದಿಗೆ ರಾಮನಾಮ ಸಂಕೀರ್ತನೆ ಮಾಡಿ, ಸಂಭ್ರಮಿಸಿದರು.
ನಂತರ ರಾಮನ ಮಹಿಮೆ ಮತ್ತು ರಾಮಾಯಣದ ಅನೇಕ ದೃಷ್ಠಾಂತಗಳನ್ನು ತಮ್ಮ ಪ್ರವಚನದ ಮೂಲಕ ಪಂಡಿತ ಸರ್ವೇಶಾಚಾರ್ಯ ಅಕಮಂಚಿಯವರು ರಾಮನಲ್ಲಿರುವ ಪಿತೃಭಕ್ತಿ ಹಾಗೂ ರಾಮರಾಜ್ಯದ ಕಲ್ಪನೆಯನ್ನು ತಿಳಿ ಹೇಳಿದರು.
ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸಾಯಂಕಾಲ ದೀಪೋತ್ಸವದ ಮೂಲಕ ಶ್ರೀರಾಮನನ್ನು ಭಕ್ತಿ ಭಾವದಿಂದ ಪೂಜಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

