ಇಂಡಿ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನೆ ಸಂಭ್ರಮದ ಹಿನ್ನೆಲೆ ಅಂಗವಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸೋಮವಾರ ಅದ್ದೂರಿ ಶ್ರೀರಾಮ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ವಿಹಿಂಪ ಭಜರಂಗದಳ ಮತ್ತು ನಗರದ ಗಣ್ಯರು ಶ್ರೀ ರಾಮನ ಅಪಾರ ಅಭಿಮಾನಿಗಳು ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಶಾಂತೇಶ್ವರ ದೇವಸ್ಥಾನದಿಂದ ಶ್ರೀರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆ ಪ್ರಾರಂಭಿಸಲಾಯಿತು. ಬಡಿಗೇರ, ಬಿರಾದಾರ ಓಣಿ ಮಾರ್ಗವಾಗಿ ಅಗಸಿ ಹನುಮಾನ ದೇವಾಲಯದಿಂದ ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತದ ಮುಖಾಂತರ ಹಾದು ಬಸವೇಶ್ವರ ವೃತ್ತದಲ್ಲಿ ಶೋಭಾಯಾತ್ರೆ ಕಾರ‍್ಯಕ್ರಮ ನಡೆಯಿತು.
ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು, ಪ್ರಕಾಶ ಬಿರಾದಾರ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ನೇತಾಜಿ ಪವಾರ ಮಾತನಾಡಿದರು.
ಅಂಬಾಭವಾನಿ ಭಜನಾ ಮಂಡಳಿ ಕುಂಬಾರ ಓಣಿ, ಗುರುಸಾರ್ವಭೌಮ ಭಜನಾ ಮಂಡಳಿಯವರಿಂದ ಶೋಭಾ ಯಾತ್ರೆಯುದ್ದಕ್ಕೂ ರಾಮ ಭಜನೆ ನಡೆಯಿತು.
ಸಂಜೆ ಶ್ರೀ ಶಾಂತೇಶ್ವರ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇವಸ್ಥಾನಗಳಲ್ಲಿ ಹಾಗೂ ಗ್ರಾಮೀಣ ಭಾಗದ ಪ್ರತಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ‍್ಯಕ್ರಮ ಆಯೋಜಿಸಲಾಗಿತ್ತು.
ಜಿಆರ್‌ಜಿ ಕಾಲೇಜಿನ ಆವರಣದಲ್ಲಿ ಆಕಾಶ ದೀಪೋತ್ಸವ (ಆಕಾಶ ಬುಟ್ಟಿ) ಹಾರಿಸಲಾಯಿತು.
ಶೋಭಾಯಾತ್ರೆಯ ನಂತರ ಬಸವೇಶ್ವರ ವೃತ್ತದಲ್ಲಿ ಪ್ರಸಾದ ವ್ಯವಸ್ಥೆ ಸೇರಿದಂತೆ ಶಾಂತೇಶ್ವರ, ಅಂಬಾಭವಾನಿ ಮತ್ತು ಪಟ್ಟಣದ ಮತ್ತು ತಾಲೂಕಿನ ಅನೇಕ ದೇವಸ್ಥಾನಗಳಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ಗ್ರಾಮಗಳು ಕೇಸರಿ ಧ್ವಜದಿಂದ ಅಲಂಕೃತ ಗೊಂಡಿದ್ದವು.
ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಎಸ್.ಜಿ. ಕುಲಕರ್ಣಿ, ಶ್ರೀಕಾಂತ ಕುಡಿಗನೂರ, ಚಂದು ದೇವರ, ಮಲ್ಲು ದೇವರ, ಸಂಜಯ ಪವಾರ, ಶಾಂತು ದೇವರ, ಪ್ರಸಾದ ಮಠ, ಅಭಿನಂದನ ಕಿರಣಗಿ, ಶಾಂತು ಶಿರಕನಳ್ಳಿ, ರಾಮಸಿಂಗ ಕನ್ನೊಳ್ಳಿ, ಅಶೋಕ ಹದಗಲ್, ಮಂಜು ತೆನ್ನೆಳ್ಳಿ, ಶಿವಾನಂದ ಬೋಡಿ, ವಿಠ್ಠಲ ಹೊಸಮನಿ, ಅಪ್ಪು ಪವಾರ, ಭೀಮ ಪ್ರಚಂಡಿ, ರಾಚು ಬಡಿಗೇರ, ಹುಚ್ಚಪ್ಪ ತಳವಾರ, ಮಲ್ಲಿಕಾರ್ಜುನ ಬಿರಾದಾರ, ಬಸು ಕಂಬಾರ, ಪ್ರಶಾಂತ ಲಾಳಸಂಗಿ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

