Author: editor.udayarashmi@gmail.com

– ಚೇತನ ಶಿವಶಿಂಪಿಮುದ್ದೇಬಿಹಾಳ: ಸರಿಸುಮಾರು ೫ ದಶಕಗಳ ನಂತರ ಅಯೋಧ್ಯೆ ನಗರಿಯಲ್ಲಿ ನಿರ್ಮಾಣವಾದ ರಾಮ ಮಂದಿರದಲ್ಲಿ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು.ಪಟ್ಟಣದ ಪ್ರಮುಖ ರಸ್ತೆಗಳ ಬೀದಿ ದೀಪಗಳು ಕೇಸರಿ ಬಟ್ಟೆಯಿಂದ ಅಲಂಕೃತಗೊಂಡಿದ್ದವು. ಎಲ್ಲ ದೇವಸ್ಥಾನಗಳಲ್ಲಿ ಶ್ರೀರಾಮರಿಗೆ ವಿಶೇಷ ಪೂಜೆ, ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು. ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಶ್ರೀ ರಾಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ, ಪಾನಕ ಹಂಚಿ ಭಕ್ತಿ ಸಮರ್ಪಿಸಿದರು. ಕೆಲವರು ತಮ್ಮ ಮಕ್ಕಳಿಗೆ ಶ್ರೀ ರಾಮರ ಹಾಗೂ ಸೀತಾ ಮಾತೆಯ ಉಡುಗೆ ತೊಡಿಸುವ ಮೂಲಕ ಶ್ರೀ ರಾಮಚಂದ್ರನ ದರ್ಶನ ಪಡೆದರು. ಯುವಕರು ಶುಭ್ರವಾದ ಬಿಳಿ ಬಟ್ಟೆ ತೊಟ್ಟು ಕೊರಳಿಗೆ ಕೇಸರಿ ಶಾಲು ಹಾಕಿ ತಮ್ಮ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಶ್ರೀರಾಮನಿರುವ ಕೇಸರಿ ಬಾವುಟವನ್ನು ಅಂಟಿಸಿ ಜೈ ಶ್ರೀರಾಮ ಜೈರಾಮ ಅಂತಾ ಜಯಘೋಷ ಹಾಕುತ್ತ ಊರೆಲ್ಲ ಸುತ್ತಿದರು. ಒಟ್ಟಾರೆ ಸೋಮುವಾರದಂದು ಪಟ್ಟಣ…

Read More

ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರಸ್ತಾವನೆಯಂತೆ, ವಿಜಯಪುರ ತಾಲ್ಲೂಕಿನ ಭೂ ನ್ಯಾಯ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿಸಿದೆ.ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ದಾದಾಸಾಹೇಬ ಸಿದ್ದಪ್ಪ ಬಾಗಾಯತ (ಪರಿಶಿಷ್ಟ ಜಾತಿ), ಗುರುರಾಜ ಚೆನ್ನಪ್ಪ ಯಡವಣ್ಣವರ, ಶರಣಪ್ಪ ಬಸಪ್ಪ ಕಾಖಂಡಕಿ, ಬಸವರಾಜ ಷಡಕ್ಷರಪ್ಪಾ ಹೆರಲಗಿ (ಸಾಮಾನ್ಯ ವರ್ಗ) ಅವರನ್ನು ನೇಮಕ ಮಾಡಲಾಗಿದೆ.

Read More

ವಿಜಯಪುರ: ರಾಜ್ಯದ ಉರ್ದು ಮತ್ತು ಇತರೆ ಭಾಷಾ ಅಲ್ಪ ಸಂಖ್ಯಾತರ ಶಾಲಾ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ವಿಜಯಪುರ ಜಿಲ್ಲಾ ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಜುಬೇರ ಕೇರೂರ ನೇತೃತ್ವದ ತಂಡವು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೂಲಕ ಮನವಿ ಸಲ್ಲಿಸಿದರು.ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಉರ್ದು ಟಿಚರ್ಸ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಾಗಾರ ಹಾಗೂ ಪಾತೀಮಾ ಶೇಖ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯಾಧ್ಯಂತ ಉರ್ದು ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷಾ ಶಿಕ್ಷಕರ ಹುದ್ದೆ ಹಾಗೂ ದೈಹಿಕ ಶಿಕ್ಷಕರ ಹುದ್ದೆ ನೀಡುವಾಗ ಉರ್ದು ಭಾಷೆ ಬಲ್ಲ ಶಿಕ್ಷಕರಿಗೆ ನಿಯುಕ್ತಿಗೊಳಿಸುವದು. ಏಕೆಂದರೆ ದೈಹಿಕ ವಿಷಯ ಪಠ್ಯ ಪುಸ್ತಕ ಉರ್ದು ಶಾಲೆಯಲ್ಲಿ ಉರ್ದು ಭಾಷೆಯಲ್ಲಿ ಮುದ್ರಿತವಾಗಿರುತ್ತದೆ. ಉರ್ದು ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದ…

Read More

ಶ್ರೀಮತಿ ಗೀತಾ ತಳಕಲ್ ಸಂಶೋಧನಾ ವಿದ್ಯಾರ್ಥಿನಿ, ಕನ್ನಡ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ. ಮಕ್ಕಳ ಸಾಹಿತ್ಯ ಆರಂಭದಲ್ಲಿ ಕಿವಿಯ ಮೂಲಕ ಗ್ರಹಿಸುವ ಲಾಲಿ ಹಾಡುಗಳಿಂದಲೇ ಕೂಡಿದ್ದು, ಅನಂತರ ಕಥೆಗಳಿಂದ ಬೆಳೆದು ಬಂದಿರಬಹುದು.. ಹಾಡುವ ಹಾಗೂ ಕಥೆ ಹೇಳುವವರ ಹಾವಭಾವಗಳನ್ನು ನೋಡಿಯೂ ಮಗು ಗ್ರಹಿಸಬಹುದು. ಈ ಕಾರಣದಿಂದ ಮಾನವನ ಸಾಹಿತ್ಯದ ಬುನಾದಿ ಇದಾಗಿದೆ ಎಂದರೆ ತಪ್ಪಾಗಲಾರದು. ಮಕ್ಕಳ ಸಾಹಿತ್ಯದ ಮೂಲ ಆಶಯ ಜಾನಪದವಾಗಿರುವುದು. ಜಗತ್ತಿನಲ್ಲಿ ಇದು ಹೇಗೇ ಪ್ರಾರಂಭವಾಗಿರಲಿ ಮಕ್ಕಳಿಗೆ ಅಗತ್ಯವಾದದ್ದು, ಉಪಯುಕ್ತವಾದದ್ದು ಎನ್ನುವುದಕ್ಕೆ ಎರಡನೇ ಮಾತಿಲ್ಲ. ಹಿರಿಯರೂ ಇದನ್ನು ಸವಿಯಬಹುದು ಎನ್ನುವುದು ಇದರ ಒಂದು ವಿಶೇಷ ಲಕ್ಷಣ. ಮಕ್ಕಳ ಸಾಹಿತ್ಯ ಮಕ್ಕಳಿಗೆ ನಲಿವು, ತಿಳಿವು ಎರಡನ್ನು ಕೊಡಬೇಕು. ಸಂಸ್ಕೃತಿ, ಶಿಕ್ಷಣ, ಕುಟುಂಬ ಮತ್ತು ಪರಿಸರ ಈ ನಾಲ್ಕರ ಪ್ರಭಾವ ಮಕ್ಕಳ ಸಾಹಿತ್ಯದಲ್ಲಿ ಬರಬೇಕು. ಮಕ್ಕಳ ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಭಾಷಿಕ ಬೆಳವಣಿಗೆಗೆ ಸಹಾಯಕವಾಗಬೇಕು ಮೊದಲಾದ ಅನೇಕ ಅಭಿಪ್ರಾಯಗಳು ಮಕ್ಕಳ ಸಾಹಿತ್ಯ ಕುರಿತು ವ್ಯಕ್ತವಾಗಿದೆ. ಒಟ್ಟಾರೆ…

Read More

ಹೆದ್ದಾರಿ ತಡೆ | ಟೈರುಗಳಿಗೆ ಬೆಂಕಿ | ಸಂಚಾರ ಅಸ್ತವ್ಯಸ್ತ | ರೈತರ ಆಕ್ರೋಶ ಕೊಲ್ಹಾರ: ತಾಲುಕಿನ ಮಟ್ಟಿಹಾಳ ಗ್ರಾಮದಲ್ಲಿರುವ ಕೃಷ್ಣಾ ಭಾಗ್ಯ ಜಲನಿಗಮದ ಕಾರ್ಯಾಲಯಗಳ ಮುಂದೆ ಮುಳವಾಡ ಏತ ನೀರಾವರಿಯ ಯೋಜನೆಯ ಮೂಲಕ ಪಶ್ಚಿಮ ಮತ್ತು ಪೂರ್ವ ಕಾಲುವೆಗಳಿಗೆ ತಕ್ಷಣವೇ ನೀರು ಹರಿಯಬಿಡಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ, ರೈತ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯವರು ಮಂಗಳವಾರ ಧರಣಿ ಕೈಗೊಂಡರು.ಬೀಳಗಿ ಬಾರಕೇಡ ರಾಜ್ಯ ಹೆದ್ದಾರಿಯ ಮಟ್ಟಿಹಾಳ ವೃತ್ತದಲ್ಲಿ ನೂರಾರು ರೈತರು ಸೇರಿ ಟೈರಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು. ಸುಮಾರು ೧೨ಘಂಟೆಯಿಂದ ಸಂಜೆ ೫ ಘಂಟೆಯವರೆಗೆ ಹೆದ್ದಾರಿಯನ್ನು ನಾಲ್ಕು ಕಡೆ ಪೂರ್ಣಪ್ರಮಾಣದಲ್ಲಿ ಬಂದ್ ಮಾಡಿ, ಕಾಲುವೆಗಳಿಗೆ ನೀರು ಹರಿಸುವ ತನಕ ನಾವುಗಳು ಸುಮ್ಮನಿರುವದಿಲ್ಲ, ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಬಿಡುವ ತನಕ ನಮ್ಮ ಹೋರಾಟ ನಿಲ್ಲುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ತುಳಸೀಗೇರಿ ಹಗೇದಾಳ ಮಾತನಾಡಿದರು.ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ತಮ್ಮ ಮತಕ್ಷೇತ್ರದ ಭಾಗದಲ್ಲಿ…

Read More

ವಿಜಯಪುರ: ಕಾಂಗ್ರೆಸ್ ನಾಯಕ, ಸಂಸದ ಸದಸ್ಯ ರಾಹುಲ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯಯಾತ್ರೆಯು ಆಸ್ಸಾಂನಲ್ಲಿ ಪ್ರವೇಶ ಮಾಡಿದಾಗ ಅಲ್ಲಿಯ ಬಿಜೆಪಿ ಸರಕಾರ ಕಾರ್ಯಕರ್ತರನ್ನು ಚೂಬಿಟ್ಟು ರ‍್ಯಾಲಿಯ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿರುವುದನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ್, ಕೇಂದ್ರದ ಬಿಜೆಪಿ ಸರಕಾರ ಜನವಿರೋಧಿಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಎದುರಿಸುತ್ತಿದ್ದು, ಹತಾಶೆ ಮನೋಭಾವದಿಂದ ದ್ವೇಷ ರಾಜಕಾರಣ ಮಾಡಲು ಹೊರಟಿದೆ. ಆಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಖಾಂತರ ಬಿಜೆಪಿಯ ಗೂಂಡಾ ಕಾರ್ಯಕರ್ತರನ್ನು ಬಿಟ್ಟು ಭಾರತ ಜೋಡೋ ನ್ಯಾಯಯಾತ್ರೆಯ ನೇತೃತ್ವ ವಹಿಸಿರುವ ನಮ್ಮ ನಾಯಕ ರಾಹುಲ ಗಾಂಧಿರವರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಜನ ನಿಮ್ಮ ಮುಖವಾಡವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ…

Read More

ಜಲಜೀವನ ಮಿಶನ್ ಯೋಜನೆ | ಎಂಎಲ್ಸಿ ಸುನೀಲಗೌಡ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಜಲಜೀವನ ಮಿಶನ್ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗಳಿಗೂ ನಳಗಳ ಸಂಪರ್ಕ ಒದಗಿಸಬೇಕು. ತಾಂತ್ರಿಕ ನೆಪಹೇಳಿ ಯಾವುದೇ ಕುಟುಂಬವನ್ನು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಬಾರದು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಮಂಗಳವಾರ ವಿಜಯಪುರ ತಾಲೂಕಿನ ಹೊನಗನಹಳ್ಳಿ ಮತ್ತು ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ, ಕಾತ್ರಾಳ ಹಾಗೂ ಅರ್ಜುಣಗಿ ಗ್ರಾಮಗಳಲ್ಲಿ ಜಲಜೀವನ್ ಮಿಶನ್ ಯೋಜನೆಯಡಿ ನಾನಾ ಗ್ರಾಮಗಳ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸುವ ನಳಗಳ ಸಂಪರ್ಕ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಲವಾರು ಗ್ರಾಮಗಳಲ್ಲಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಅನೇಕ ಮನೆಗಳಿಗೆ ನಳಗಳ ಸಂಪರ್ಕವನ್ನು ನಿರಾಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ನಗರ ಪ್ರದೇಶದ ಜನರಿಗೆ ನೀಡಲಾಗುವ ರೀತಿಯಲ್ಲಿ ಗ್ರಾಮೀಣ ಭಾಗದ ಜನರಿಗೂ ಮನೆಮನೆಗಳಿಗೆ ಕುಡಿಯಲು ನೀರು ಪೂರೈಸುವ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಸಮರ್ಪಕವಾಗಿ…

Read More

ಕೆಂಭಾವಿ: ಹೋಬಳಿಯ ಕೂಡಲಗಿ ಗ್ರಾಮದಲ್ಲಿ ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಯಿಂದ ಗ್ರಾಮ ಘಟಕ ಆಯ್ಕೆ ಮಾಡಲಾಯಿತು ,ಈ ಸಂದರ್ಭ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಲ್ ಮಾತನಾಡಿ, ಯುವಕರೆಲ್ಲರೂ ಶಿಕ್ಷಣವಂತರಾಗಬೇಕು , ಮೂಢನಂಬಿಕೆಯನ್ನು ತೊಲಗಿಸಬೇಕು, ಅಂಬೇಡ್ಕರ್ ಅವರು ಹಾಕಿಕೊಟ್ಟಂತ ಮಾರ್ಗದಲ್ಲಿ ನಡೆಯಬೇಕು. ಹಾಗೂ ಪ್ರೊ ಬಿ ಕೃಷ್ಣಪ್ಪನವರ ಮಾರ್ಗದಲ್ಲಿ ನಮ್ಮ ಹೋರಾಟ ಮುನ್ನಡೆಸಬೇಕೆಂದು ಕರೆ ನೀಡಿದರು ,ಈ ವೇಳೆ ಸಮಿತಿಯ ಸ ಸಂಚಾಲಕರು ನಾಗರಾಜ್ ಹೋಕುಳಿ, ಧರ್ಮಣ್ಣ ಚಿಂಚೋಳಿ, ಸಾಯಬಣ್ಣ ಕೆಂಭಾವಿ ಹೋಬಳಿ ಸಂಚಾಲಕರು, ಸದಾಶಿವ ಬೊಮ್ಮನಹಳ್ಳಿ, ಭೀಮಣ್ಣ ಅಡ್ಡಡಗಿ ಚಂದಪ್ಪ ತಳಳ್ಳಿ ಇದ್ದರು.ಆಯ್ಕೆಯಾದ ಪದಾಧಿಕಾರಿಗಳುಮಲ್ಲಪ್ಪ ನಡುವಿನಮನಿ ಗ್ರಾಮ ಘಟಕ ಸಂಚಾಲಕರು, ಸಹ ಸಂಚಾಲಕರಾಗಿ ಮಾರುತಿ ದೊಡಮನಿ, ಬಸಪ್ಪ ದೊಡಮನಿ, ಮಾನಪ್ಪ ಅಳಿಗೇರಿ, ನಂದಪ ದೊಡಮನಿ, ಶಿವು ಗುಡಿಮನಿ ಪ್ರಕಾಶ್ ಗುಡಿಮನಿ, ಯಮನಪ್ಪ ಗುಡಿಮನಿ, ಜಟ್ಟಪ್ಪ ರಬ್ನಹಳ್ಳಿ, ಮಾನಪ್ಪ ಗುಡಿಮನಿ, ಧರ್ಮಪ್ಪ ರಬ್ನಳ್ಳಿ ಭೀಮಪ್ಪ ಇತರರಿದ್ದರು.

Read More

1 ಕೋಟಿ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಕೆ | ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಂತರ ಪ್ರಧಾನಿ ನರೇಂದ್ರ ಮೋದಿ ಘೋಷಣೆ ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ‘ಸೂರ್ಯೋದಯ ಯೋಜನೆ’ ಘೋಷಿಸಿದ್ದಾರೆ.ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ದೇಶವಾಸಿಗಳು ತಮ್ಮ ಮನೆಗಳ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನಲ್ ಹೊಂದಬೇಕೆಂಬ ಅವರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರ ಘೋಷಣೆಯ ಪ್ರಕಾರ, ಯೋಜನೆಯಡಿಯಲ್ಲಿ ಒಂದು ಕೋಟಿ ಮನೆಗಳ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಸಲಾಗುತ್ತದೆ.ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು 1 ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಸೋಲಾರ್ ಅಳವಡಿಸುವ ಗುರಿಯೊಂದಿಗೆ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಪ್ರಾರಂಭಿಸುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆಯಾಗುವುದಲ್ಲದೆ ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲಿದೆ ಎಂದರು.ರಾಮಲಲ್ಲಾ ಪಟ್ಟಾಭಿಷೇಕದ ನಂತರ ಪ್ರಧಾನಿ ಮೋದಿ ಹೇಳಿದ್ದೇನು?ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ರಾಮಲಲ್ಲಾನ…

Read More