Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗ್ರಾಮೀಣ ಭಾಗದ ಪ್ರತಿ ಮನೆಗೂ ನಳ ಸಂಪರ್ಕ ಒದಗಿಸಿ
(ರಾಜ್ಯ ) ಜಿಲ್ಲೆ

ಗ್ರಾಮೀಣ ಭಾಗದ ಪ್ರತಿ ಮನೆಗೂ ನಳ ಸಂಪರ್ಕ ಒದಗಿಸಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜಲಜೀವನ ಮಿಶನ್ ಯೋಜನೆ | ಎಂಎಲ್ಸಿ ಸುನೀಲಗೌಡ ಅಧಿಕಾರಿಗಳಿಗೆ ಸೂಚನೆ


ವಿಜಯಪುರ: ಜಲಜೀವನ ಮಿಶನ್ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗಳಿಗೂ ನಳಗಳ ಸಂಪರ್ಕ ಒದಗಿಸಬೇಕು. ತಾಂತ್ರಿಕ ನೆಪಹೇಳಿ ಯಾವುದೇ ಕುಟುಂಬವನ್ನು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಬಾರದು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಜಯಪುರ ತಾಲೂಕಿನ ಹೊನಗನಹಳ್ಳಿ ಮತ್ತು ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ, ಕಾತ್ರಾಳ ಹಾಗೂ ಅರ್ಜುಣಗಿ ಗ್ರಾಮಗಳಲ್ಲಿ ಜಲಜೀವನ್ ಮಿಶನ್ ಯೋಜನೆಯಡಿ ನಾನಾ ಗ್ರಾಮಗಳ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸುವ ನಳಗಳ ಸಂಪರ್ಕ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 
ಹಲವಾರು ಗ್ರಾಮಗಳಲ್ಲಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಅನೇಕ ಮನೆಗಳಿಗೆ ನಳಗಳ ಸಂಪರ್ಕವನ್ನು ನಿರಾಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ನಗರ ಪ್ರದೇಶದ ಜನರಿಗೆ ನೀಡಲಾಗುವ ರೀತಿಯಲ್ಲಿ ಗ್ರಾಮೀಣ ಭಾಗದ ಜನರಿಗೂ ಮನೆಮನೆಗಳಿಗೆ ಕುಡಿಯಲು ನೀರು ಪೂರೈಸುವ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಯಾವ ಕುಟುಂಬವೂ ಈ ಯೋಜನೆಯಿಂದ ವಂಚಿತರಾಗದಂತೆ ನಳಗಳ ಸಂಪರ್ಕ ಒದಗಿಸಲು ಜಾಗರೂಕತೆಯಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಈಗಾಗಲೇ ಎಲ್ಲ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಜಲಜೀವನ ಮಿಶನ್ ಅನುಷ್ಠಾನ ಸಂದರ್ಭದಲ್ಲಿ ನಳಗಳಗೆ ಸಂಪರ್ಕ ಒದಗಿಸಲು ಪೈಪುಗಳನ್ನು ಅಳವಡಿಸುವಾಗ ಜೆಸಿಬಿ ಮೂಲಕ ಈ ರಸ್ತೆಗಳನ್ನು ಅಗೆಯಬಾರದು.  ಪೈಪು ಅಳವಡಿಸಲು ಅಗತ್ಯವಿರುವಷ್ಟು ಮಾತ್ರ ರಸ್ತೆಯನ್ನು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ಕಟ್ ಮಾಡಬೇಕು. ಪೈಪು ಅಳವಡಿಸಿದ ನಂತರ ಮತ್ತೆ ಆ ರಸ್ತೆಯಲ್ಲಿ ಅಗೆಯಲಾಗಿರುವ ಜಾಗವನ್ನು ಯಥಾರೀತಿ ದುರಸ್ಥಿ ಮಾಡಿ ಕೊಡಬೇಕು. ಈ ಬಗ್ಗೆ ಗ್ರಾಮಸ್ಥರೂ ಕೂಡ ತಂತಮ್ಮ ಪ್ರದೇಶದಲ್ಲಿ ನಡೆಯುವ ಕಾಮಗಾರಿಯ ಬಗ್ಗೆ ಮುತುವರ್ಜಿ ವಹಿಸಬೇಕು. ಏನಾದರೂ ಸಮಸ್ಯೆ ಎದುರಾದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು.  ಅಲ್ಲದೇ, ಗ್ರಾಮ ಪಂಚಾಯಿತಿಗಳೂ ಕೂಡ ಈ ಕಾಮಗಾರಿಗಳು ಸಂಪೂರ್ಣಗೊಂಡ ನಂತರ ಮಾತ್ರ ಅವುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು. 
ಮುಂದಿನ ಒಂದೂವರೆ ವರ್ಷದಲ್ಲಿ ಜಲಧಾರೆ ಯೋಜನೆಯಡಿ ಎಲ್ಲ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆಯಾಗಲಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದು, ಗ್ರಾಮೀಣ ಭಾಗದ ಜನರಿಗೂ ನಗರ ಪ್ರದೇಶಗಳಂತೆ ನದಿಯಿಂದ ಕುಡಿಯಲು ನೀರು ಲಭ್ಯವಾಗಲಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.
*ಹೊನಗನಹಳ್ಳಿ ಕಾರ್ಯಕ್ರಮ*
ವಿಜಯಪುರ ತಾಲೂಕಿನ ಹೊನಗನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ಹೊನಗನಹಳ್ಳಿಯ ರೂ. 1.70 ಕೋ., ಸವನಳ್ಳಿಯಲ್ಲಿ ರೂ. 97 ಲಕ್ಷ ಮತ್ತು ತೊನಶ್ಯಾಳ ಆರ್. ಸಿ. ಕೇಂದ್ರದ ರೂ. 20.02 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. 
ಈ ಸಂದರ್ಭದಲ್ಲಿ ಹೊನಗನಹಳ್ಳಿ ಗ್ರಾ. ಪಂ. ಅಧ್ಯಕ್ಷ ನಚಿಕೇತ ಬಿದರಿ, ಮುಖಂಡರಾದ ಶಶಿಧರ ಬಿದರಿ, ಶಿವಯ್ಯ ಒಡೆಯರ, ಮಹಾಂತೇಶ ಹಳ್ಳಿ, ವಿ. ಆರ್. ಗೌಡರ, ರಾವುತ ಗಾಣಗೇರ, ಹಣಮಂತ ಹಚಡದ, ಬಸವರಾಜ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
*ಉಪ್ಪದಿನ್ನಿ ಕಾರ್ಯಕ್ರಮ*
ಬಬಲೇಶ್ವರ ತಾಲೂಕಿನ ಉಪ್ಪದಿನ್ನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, ಉಪ್ಪಲದಿನ್ನಿ ಗ್ರಾಮದ ರೂ. 81.65 ಲಕ್ಷ, ಹಂಚಿನಾಳ ಪಿ. ಎಂ. ಗ್ರಾಮದ ರೂ. 27.97 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಸಂಗಯ್ಯ ಹಿರೇಮಠ, ಚಂದ್ರಶೇಖರ ಪೂಜಾರಿ, ಸೋಮು ಬಿರಾದಾರ, ಸಿದ್ದಪ್ಪ ಬೀಳಗಿ, ಅಶೋಕಗೌಡ ಪಾಟೀಲ, ಮೌಲಾಸಾಬ ಜಾಗೀರದಾರ, ಚಾಂದಸಾಬ ಜಾಗೀರದಾರ, ದುಂಡಪ್ಪ ಕೋಲಕಾರ, ಶಮನಸಾಬ ಮುಳವಾಡ, ಮಲ್ಲಿಕಾರ್ಜುನ ರಾಜಂಗಳ. ಮಮದಾಪುರ ಗ್ರಾಂ. ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ಲಕ್ಷ್ಮಣ ತೇಲಿ ಮುಂತಾದವರು ಉಪಸ್ಥಿತರಿದ್ದರು.
*ಕಾತ್ರಾಳ ಕಾರ್ಯಕ್ರಮ*
ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು, ಕಾತ್ರಾಳ ಗ್ರಾಮದ ಬಿರಾದಾರ ವಸ್ತಿಯ ರೂ. 20.50 ಲಕ್ಷ, ಬೋಳಚಿಕ್ಕಲಗಿ ಗ್ರಾಮದ ಆಶ್ರಯ ಕಾಲನಿಯ ರೂ. 15.36 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾರ್ಜನ ಅಂಗಡಿ, ಗ್ರಾ. ಪಂ. ಸದಸ್ಯರಾದ ಗುರಬಸು ತೇವರಟ್ಟಿ, ಕೆ. ಎಚ್. ನರಳೆ, ಮಹ್ಮಮದಸಾಬ ಜಮಾದಾರ, ವಿಠ್ಠಲ ಮಾದರ, ಮಲ್ಲಯ್ಯ ಹಿರೇಮಠ, ಸಿದ್ದು ತೋಟದ, ರಾಜು ಬಿರಾದಾರ, ಮುಖಂಡರಾದ ರಾಮನಿಂಗ ಕೂಕಟನೂರ, ಸದಾಶಿವ ಸಜ್ಜನ, ಸಯ್ಯದ ಅತ್ತಾರ, ಮುಂತಾದವರು ಉಪಸ್ಥಿತರಿದ್ದರು.
*ಅರ್ಜುಣಗಿ ಕಾರ್ಯಕ್ರಮ*
ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸುನೀಲಗೌಡ ಪಾಟೀಲ ಅವರು, ಹೊಕ್ಕುಂಡಿ ಗ್ರಾಮದ ಹೊಕ್ಕುಂಡಿ ವಸ್ತಿಯ ರೂ. 31.50 ಲಕ್ಷ, ಅರ್ಜುಣಗಿ ಗ್ರಾಮದ ಮಡಿವಾಳ ವಸ್ತಿ(ತಂವಸೆ ವಸ್ತಿ)ಯ ರೂ. 24.32 ಲಕ್ಷ ಮತ್ತು ಅರ್ಜುಣಗಿ ಗ್ರಾಮದ ಹೆಬ್ಬಾಳಟ್ಟಿ ತೋಟದ ವಸ್ತಿ(ಪ್ರಧಾನಿ ವಸ್ತಿ)ಯಲ್ಲಿ ರೂ. 21.26 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗ ಭೂಮಿಪೂಜೆ ನೆರವೇರಿಸಿದರು.  ಈ ಸಂದರ್ಭದಲ್ಲಿ ಅರ್ಜುಣಗಿ ಗ್ರಾ. ಪಂ. ಅಧ್ಯಕ್ಷ ರಫೀಕ ಸೋನಾರ, ಮುಖಂಡರಾದ ರಮೇಶ ದೇಸಾಯಿ, ಉಮಾಕಾಂತ ತಡಾಕೆ, ಅಶೋಕ ಕಾಖಂಡಕಿ, ಸಿದ್ದಪ್ಪ ಕಲಬೀಳಗಿ, ಗೈಬುಸಾಬ ಕೌಜಲಗಿ, ಮುದಕನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ

ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ

ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ

ಅಂಬರ ಚುಂಬಿತ ಪ್ರೇಮ ಪ್ರೇಮ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜಿಲ್ಲಾ ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆ :ಇಂದು ಪ್ರದಾನ
    In (ರಾಜ್ಯ ) ಜಿಲ್ಲೆ
  • ಮಾ.೨೨ ರಂದು ಸಂವಿಧಾನ ಜಾಗೃತಿ ಸಮಾವೇಶ :ಮಯೂರ
    In (ರಾಜ್ಯ ) ಜಿಲ್ಲೆ
  • ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡಿ :ಉಜ್ವಲಾ
    In (ರಾಜ್ಯ ) ಜಿಲ್ಲೆ
  • ಅಂಬರ ಚುಂಬಿತ ಪ್ರೇಮ ಪ್ರೇಮ
    In ವಿಶೇಷ ಲೇಖನ
  • ಅಗ್ನಿ ಅವಘಡ: ರೂ.50 ಲಕ್ಷ ಮೌಲ್ಯದ ವಸ್ತುಗಳು ಭಸ್ಮ!
    In (ರಾಜ್ಯ ) ಜಿಲ್ಲೆ
  • ಏತ ನೀರಾವರಿ ಯೋಜನೆಯ ಪ್ರಾರಂಭಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಇಡ್ಲಿ-ವಡೆ ಜೊತೆಗೆ ಗ್ಯಾಸ್​ಗೂ ಬಿಲ್! :ಭಾರಿ ವೈರಲ್
    In (ರಾಜ್ಯ ) ಜಿಲ್ಲೆ
  • ಸಚಿವ ಎಂ.ಬಿ.ಪಾಟೀಲ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ
    In (ರಾಜ್ಯ ) ಜಿಲ್ಲೆ
  • ಸಿಲಿಂಡರ್ ಸ್ಟಾಕ್ ಇಲ್ಲ :ಸಚಿವ ಮುನಿಯಪ್ಪ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.