ವಿಜಯಪುರ: ರಾಜ್ಯದ ಉರ್ದು ಮತ್ತು ಇತರೆ ಭಾಷಾ ಅಲ್ಪ ಸಂಖ್ಯಾತರ ಶಾಲಾ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ವಿಜಯಪುರ ಜಿಲ್ಲಾ ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಜುಬೇರ ಕೇರೂರ ನೇತೃತ್ವದ ತಂಡವು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೂಲಕ ಮನವಿ ಸಲ್ಲಿಸಿದರು.
ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಉರ್ದು ಟಿಚರ್ಸ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಾಗಾರ ಹಾಗೂ ಪಾತೀಮಾ ಶೇಖ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾಜ್ಯಾಧ್ಯಂತ ಉರ್ದು ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷಾ ಶಿಕ್ಷಕರ ಹುದ್ದೆ ಹಾಗೂ ದೈಹಿಕ ಶಿಕ್ಷಕರ ಹುದ್ದೆ ನೀಡುವಾಗ ಉರ್ದು ಭಾಷೆ ಬಲ್ಲ ಶಿಕ್ಷಕರಿಗೆ ನಿಯುಕ್ತಿಗೊಳಿಸುವದು. ಏಕೆಂದರೆ ದೈಹಿಕ ವಿಷಯ ಪಠ್ಯ ಪುಸ್ತಕ ಉರ್ದು ಶಾಲೆಯಲ್ಲಿ ಉರ್ದು ಭಾಷೆಯಲ್ಲಿ ಮುದ್ರಿತವಾಗಿರುತ್ತದೆ. ಉರ್ದು ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದ ಪ್ರತಿ ತಾಲ್ಲೂಕಿನ ಬಿ.ಇ.ಓ. ಕಾರ್ಯಾಲಯದಲ್ಲಿ ಒಂದು ಇ.ಸಿ.ಓ. ಹಾಗೂ ಬಿ.ಆರ್.ಸಿ. ಕಾರ್ಯಾಲಯದಲ್ಲಿ ಒಂದು ಬಿ.ಆರ್.ಪಿ. ಹುದ್ದೆ ಪ್ರತ್ಯೇಕವಾದ ಮಂಜೂರಿ ನೀಡಬೇಕು ಎಂದರು.
ರಾಜ್ಯದ ಎಲ್ಲಾ ಉರ್ದು ಮತ್ತು ಇತರೆ ಅಲ್ಪ ಸಂಖ್ಯಾತರ ಭಾಷಾ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನ (ಸ್ಮಾರ್ಟ ಕ್ಲಾಸ್) ಸೌಲಭ್ಯ, ಪ್ರತಿ ಕಿರಿಯ ಪ್ರಾಥಮಿಕ ಶಾಲೆಗೆ ಐದು ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ 10 ಗಣಕಯಂತ್ರಗಳನ್ನು ಒದಗಿಸುವದು. ರಾಜ್ಯಾದ್ಯಂತ ಪ್ರತಿ ಜಿಲ್ಲೆಗೊಂದು ಜಿಲ್ಲಾ ಕೇಂದ್ರದಲ್ಲಿ ಒಂದು ಉರ್ದು ಭವನ ನಿರ್ಮಿಸುವದು. ಅಲ್ಪ ಸಂಖ್ಯಾತರ ಮಕ್ಕಳಿಗೆ ಈಗಾಗಲೇ ನೀಡುತ್ತಿರುವ ರೂ.1000 ಶಿಷ್ಯವೇತನವನ್ನು ರು. 5000ಕ್ಕೆ ಹೆಚ್ಚಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಉರ್ದು ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಅಜರ ಮುಲ್ಲಾ, ವಿಜಯಪುರ ನಗರದ ಉರ್ದು ಸಂಘದ ಅಧ್ಯಕ್ಷ ಬಶೀರ ನದಾಫ್, ವ ಗ್ರಾಮೀಣ ವಲಯದ ಕಾರ್ಯದರ್ಶಿ ಅಶ್ಪಾಕ ಬಾಲಸಿಂಗ್, ರಿಯಾಜ್ ತಮದಡ್ಡಿ, ಎ.ಕೆ.ಬಾಗವಾನ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಉರ್ದು ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಚಿವರಿಗೆ ಮನವಿ
Related Posts
Add A Comment

