Author: editor.udayarashmi@gmail.com

ದೇವರಹಿಪ್ಪರಗಿ: ಪಟ್ಟಣದ ೧೫ನೇ ವಾರ್ಡಿನಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗೆ ಚಾಲನೆ ನೀಡಿ, ಪೂರ್ಣಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ೧೫ನೇ ವಾರ್ಡಿನ ನಿವಾಸಿಗಳು ಬುಧವಾರ ತಹಶೀಲ್ದಾರ ಕಚೇರಿಗೆ ಆಗಮಿಸಿ ೨೦೨೨-೨೩ನೇ ಸಾಲಿನಲ್ಲಿ ಸೋಮನಗೌಡ ಪಾಟೀಲ(ಸಾಸನೂರ) ಶಾಸಕರಾದ ಸಂದರ್ಭದಲ್ಲಿ ನಗರೋತ್ಥಾನ ವಿಶೇಷ ಅನುದಾನದಡಿ ಮಂಜೂರಾದ ಕಾಮಗಾರಿಯನ್ನು ಆರಂಭಿಸಿ ನಂತರ ನಿಲ್ಲಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ.ಕಳೆದ ಒಂದು ವರ್ಷದ ಹಿಂದೆ ಜೆಸಿಬಿ ಯಂತ್ರದಿಂದ ಅಗೆದ ರಸ್ತೆ ಈವರೆಗೆ ದುರಸ್ತಿ ಕಾಣದೇ ಇರುವುದರಿಂದ ಸಾರ್ವಜನಿಕರ ತಿರುಗಾಟಕ್ಕೆ ತೊಂದರೆಯಾಗಿದೆ. ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲು ಕಾರಣವಾದರೂ ಏನು? ಯಾಕೆ ಪೂರ್ಣಗೊಳ್ಳಲಿಲ್ಲ ಎಂಬುದರ ಕುರಿತು ಆಡಳಿತಾಧಿಕಾರಿಗಳಾದ ತಹಶೀಲ್ದಾರ ಕೂಡಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬರುವ ದಿನಗಳಲ್ಲಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ವಾರ್ಡಿನ ನಿವಾಸಿಗಳು ಹೋರಾಟದ ಹಾದಿ ಆಯ್ದುಕೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿ, ಮನವಿ ಸಲ್ಲಿಸಿದರು.ಕಾಶೀನಾಥ ವಡ್ಡೋಡಗಿ, ಜ್ಞಾನೇಶ್ವರ…

Read More

ದೇವರಹಿಪ್ಪರಗಿ: ನರ್ಸರಿ ಸೇರಿದಂತೆ ಒಂದರಿಂದ ಐದನೇ ತರಗತಿಯ ಮಕ್ಕಳು ವಿಜ್ಞಾನ, ಆಹಾರ, ಕೃಷಿ ಮೇಳದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.ಪಟ್ಟಣದ ಇಂದುಮತಿ ಸಾವಳಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಜರುಗಿದ ಒಂದು ದಿನದ ಪ್ರದರ್ಶನ ಮೇಳದಲ್ಲಿ ೬೦ ಕ್ಕೂ ಹೆಚ್ಚು ಮಕ್ಕಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಸೌರವ್ಯೂಹ ರಚನೆ, ವಿದ್ಯುತ್ ಉತ್ಪಾದನೆ. ಆಹಾರ ಹಾಗೂ ಕೃಷಿಗೆ ಸಂಬಂಧಿತ ಬೆಳೆಗಳು ಹಾಗೂ ಹಣ್ಣುಗಳ ಬೆಳೆಯುವ ಹಂತ, ಮಾರಾಟದ ವಿಧಾನಗಳು. ಅರಣ್ಯಿಕರಣ ಹಾಗೂ ಅದರ ಮಹತ್ವ ಸಾರುವ ವಿವಿಧ ನಮೂನೆಗಳನ್ನು ತಯಾರಿಸಿ ವಿವರಿಸಿದರು.ವಿವರಣೆ ನೀಡುವ ಮಕ್ಕಳ ತೊದಲು ನುಡಿ ಹಾಗೂ ಅವರ ಹಾವಭಾವಗಳು ಎಲ್ಲರ ಗಮನ ಸೆಳೆದವು.ಬೆಳಿಗ್ಗೆ ಆರಂಭಗೊಂಡ ಮಕ್ಕಳ ಒಂದು ದಿನದ ಪ್ರದರ್ಶನ ಮೇಳಕ್ಕೆ ಸಿಆರ್‌ಸಿ ವಿಜಯಲಕ್ಷ್ಮೀ ನವಲಿ ಸೇರಿದಂತೆ ಪಾಲಕರು ಹಾಗೂ ಸಾರ್ವಜನಿಕರು ಭೇಟಿ ನೀಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸ್ಥಾಪಕ ಅಧ್ಯಕ್ಷ ಶಾಂತಪ್ಪ ಸಾವಳಗಿ, ಕಾರ್ಯದರ್ಶಿ ಸಂತೋಷ ಸಾವಳಗಿ, ಸಿಬ್ಬಂದಿ ಭಾಗ್ಯಶ್ರೀ ಹಂಚಾಟೆ, ಪವಿತ್ರಾ ಹಳಿಮನಿ, ಪೂಜಾ ಹಿರೇಮಠ ಮಕ್ಕಳಾದ ಪ್ರೀತಂ…

Read More

ಸಿಂದಗಿ: ಇಸ್ರೋ ಸಂಸ್ಥೆಯಲ್ಲಿ ಶ್ರೀ ಗುರುಕೃಪಾ ಶಾಲೆಯ ವಿದ್ಯಾರ್ಥಿಗಳು ಬರಬೇಕು, ಭವ್ಯ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಹಕಾರಿಯಾಗಬೇಕೆಂದು ಇಸ್ರೋ ವಿಜ್ಞಾನಿ ಅಭಿಷೇಕ ಅರವಿಂದ ದೇಶಪಾಂಡೆ ಅವರು ಕರೆ ನೀಡಿದರು.ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಈ ಸಂಸ್ಥೆಯಲ್ಲಿ ದೇಶದ ಅತ್ಯುನ್ನತ ಸಂಸ್ಥೆ ಇಸ್ರೊಕ್ಕೆ ಸೇರಿಸುವ ಮಟ್ಟದಲ್ಲಿ ಈ ಗುರುಕೃಪಾ ಶಾಲೆಯಲ್ಲಿ ಬೋಧನೆ ಆಗುತ್ತಿದೆ, ಇಲ್ಲಿಯ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯಲ್ಲಿಯ ಶಿಕ್ಷಕರು ಉತ್ತಮ ಜ್ಞಾನಾರ್ಜನೆ ಮಾಡುತ್ತಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು, ಗುರುವಿನ ಸ್ಮರಣೆ ಸದಾ ನಮ್ಮಲ್ಲಿರಬೇಕು ಎಂದು ಹೇಳಿದ ಅವರು ವಿದ್ಯಾರ್ಥಿಗಳು ತಮ್ಮಲ್ಲಿ ಜಾಣ್ಮೆ ಇದ್ದು, ಸಂಕುಚಿತ ಮನೋಭಾವನೆ ಇಟ್ಟುಕೊಳ್ಳದೇ ಧೈರ್ಯದಲ್ಲಿ ಮುನ್ನುಗ್ಗಿ ಸಾಧನೆ ಮಾಡಿದಾಗಲೇ ಗುರಿ ಮುಟ್ಟಲು ಸಾಧ್ಯ. ಅದಕ್ಕೆ ನಾನೆ ಒಂದು ಉದಾಹರಣೆ ಎಂದರಲ್ಲದೆ, ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕಲಿತ ಶಾಲೆಗೆ ಕೀರ್ತಿ ತರುವಂತವರಾಗಬೇಕೆಂದರು.ಅತಿಥಿಯಾಗಿ ಬಸವ ಸಮಿತಿ ಅಧ್ಯಕ್ಷ…

Read More

’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ ಜೆ. ಅಬ್ಬಿಗೇರಿಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨ ತಪ್ಪು ಮಾಡುವುದು ಸಹಜ ತಿದ್ದಿ ನಡೆಯೋನೇ ಮನುಜ ಎಂದು ಬಲ್ಲವರು ಹೇಳುತ್ತಾರೆ.ಅಂದರೆ ತಪ್ಪು ಮಾಡುವದು ಮಾನವನ ಸಹಜ ಗುಣ. ಎಂಥ ಮಹಾನ್ ಸಾಧಕನೇ ಆಗಲಿ, ಏನಾದರೂ ಒಂದು ತಪ್ಪು ಮಾಡಿಯೇ ಮಾಡುತ್ತಾನೆ. ಮಾನವ ಪರಿಪೂರ್ಣನಲ್ಲ. ದೇವರು ಮಾತ್ರ ಪರಿಪೂರ್ಣ ತಪ್ಪುಗಳನ್ನು ನೋಡದೆ ಕೇವಲ ಗುಣಗಳನ್ನು ಮಾತ್ರ ಗಮನಿಸುವದೇ ಕ್ಷಮೆ ’ಒಮ್ಮೆ ತಪ್ಪು ಮಾಡಿದವರಿಗೆ ಸರಿಪಡಿಸಿಕೊಳ್ಳಲು ಅವಕಾಶ ಕೊಡುವುದು ಕ್ಷಮೆ. ಘೋರ ಅಪರಾಧ ಮಾಡಿದವನನ್ನು ಸರಿದಾರಿಗೆ ತರಲು ಕ್ಷಮೆಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳು ನಮಗೆ ಕಾಣುವುದೇ ಇಲ್ಲ. ನಮ್ಮ ತಪ್ಪುಗಳು ಅರಿವಿಗೆ ಬಂದರೂ ಅವುಗಳನ್ನು ಇತರರ ಮೇಲೆ ಹೊರಿಸಿ ಕೈತೊಳೆದುಕೊಳ್ಳಲು ನೋಡುತ್ತೇವೆ. ನಮ್ಮ ತಪ್ಪುಗಳ ಕುರಿತು ನಾವು ಕ್ಷಮಾಶೀಲರಾಗಿರುತ್ತೇವೆ.ನಮ್ಮ ಎಡೆಯಲ್ಲಿನ ಎಮ್ಮೆ ಕಾಣಿಸುವದಿಲ್ಲ ಮತ್ತೊಬ್ಬರ ಎಡೆಯಲ್ಲಿನ ನೊಣ ಕಾಣಿಸುತ್ತೆ ಅಂತ ಅದಕ್ಕೆ ಹಿರಿಯರು ಗಾದೆ ಮಾಡಿದ್ದು.ಕ್ಷಮಾ ಗುಣದ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ: ಭೌತಜಗತ್ತಿಗೆ ಆಲ್ಬರ್ಟ ಐನ್‍ಸ್ಟೈನ್ ಕೊಟ್ಟ ವಿಶಿಷ್ಟ ಸಾಪೇಕ್ಷ ಸಿದ್ದಾಂತದ ಸೂತ್ರ.E=mc ಒಂದು ಕ್ಲಿಷ್ಟಕರ ಭೌತ ಸೂತ್ರ. ಆದರೆ ಅದನ್ನು ಅವರು ಉದಾಹರಿಸುವ ರೀತಿ ಶ್ಲಾಘನೀಯವಾದದ್ದು ಎಂದು ಪ್ರಾಚಾರ್ಯ ಡಾ.ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಐಐಸಿ ಮತ್ತು ಭೌತಶಾಸ್ತ್ರ ವಿಭಾಗದ ಎಪ್ಸಿಲಾನ್ ಕ್ಲಬ್ ಹಾಗೂ ‘ಜನರಂಗ ಕಲಬುರಗಿ ಮತ್ತು ಕಲಾ ಕುಟೀರ ತಂಡ ಸಹಯೋಗದಲ್ಲಿ ಜರುಗಿದ “ನಾನು ಅಲ್ಬರ್ಟ ಐನ್‍ಸ್ಟೈನ್” ಎಂಬ ಏಕಪಾತ್ರಾಭಿನಯದ ಕಿರುನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦ ನೇ ಶತಮಾನದ ಮಹಾನ್ ಮೇಧಾವಿ ಹಾಗೂ ಭೌತ ಜಗತ್ತಿಗೆ ವಿಶಿಷ್ಟ ಸಾಪೇಕ್ಷ ಸಿದ್ದಾಂತ ಸೂತ್ರವನ್ನು E=mc ನೀಡಿದ ವಿಜ್ಞಾನಿ ಅವರ ಜೀನದ ಸಾಹಸ ಗಾಥೆಯನ್ನು ಬಿಚ್ಚಿಡುವ ಈ ಕಿರುನಾಟಕದ ಪ್ರದರ್ಶನ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಡಾ.ಪ್ರಕಾಶ ಗರುಡ ರಚನೆಯ ಮತ್ತು ಉಮೇಶ ಪಾಟೀಲ ನಿರ್ದೇಶನದ, ಶಂಕರಯ್ಯ ಘಂಟಿ…

Read More

ವಿಜಯಪುರ: ಅಂತಾರಾಷ್ಟ್ರೀಯ ಖ್ಯಾತಿ ಓಟಗಾರ ಮತ್ತು ಖ್ಯಾತ ವೈದ್ಯ ಡಾ. ಸಿ. ಆರ್. ಬಿದರಿ ಅವರ ಪುಣ್ಯಸ್ಮರಣೆ ಅಂಗವಾಗಿ ಫೆಬ್ರುವರಿ 2 ರಂದು ಶುಕ್ರವಾರ ನಗರದಲ್ಲಿ ಕ್ಯಾನ್ಸರ್ ಕುರಿತು ರಾಜ್ಯ ಮಟ್ಟದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿದೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸ್ಕಿಲ್ಸ್ ಲ್ಯಾಬೊರೇಟರಿ ಕಟ್ಟಡದಲ್ಲಿರುವ ಸೆಂಟ್ ಫಾರ್ ಅಡ್ವಾನ್ಸಡ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ವಿಭಾಗದಲ್ಲಿ ಬೆಳಿಗ್ಗೆ 9.30ಕ್ಕೆ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ವಿವಿಯ ಸಮುಕುಲಾಧಿಪತಿ ಡಾ. ವೈ. ಜಯರಾಜ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಪ್ರಾಚಾರ್ಯ ಡಾ. ಆನಂದ ಪಾಟೀಲ, ಡಾ. ಆರ್. ಸಿ. ಬಿದರಿ, ಡಾ. ಆರ್. ವಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿರಲಿದ್ದಾರೆ.ಈ ಸಂದರ್ಭದಲ್ಲಿ ಕ್ಯಾನ್ಸರ್ ಕುರಿತು ತಿಳುವಳಿಕೆ ಮೂಡಿಸುವುದು, ಕ್ನಾನ್ಸರ್ ತಪಾಣೆಯಲ್ಲಿ ಅತ್ಯಾಧುನಿಕ ವಿಧಾನಗಳು, ಚಿಕಿತ್ಸೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಮನೋಬಲ ತುಂಬಿ ಆರೈಕೆ ಮಾಡುವ ಕುರಿತು ನಾನಾ ವಿಚಾರಗೋಷ್ಠಿಗಳು ನಡೆಯಲಿವೆ. ಬೆಂಗಳೂರು ಎಚ್.ಸಿ.ಜಿ ಆಸ್ಪತ್ರೆಯ…

Read More

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ ವಾಗ್ದಾಳಿ ಬೆಂಗಳೂರು: ‘ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ಬಹುತೇಕ ವಿಲೀನ ಮಾಡಿದ್ದಾರೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರ ಜತೆ ಪ್ರತಿಭಟನೆ ಮಾಡಿದ ಬಗ್ಗೆ ಮಾಧ್ಯಮದವರು ಕೇಳಿದಾಗ, ‘ಇದು ಅವರ ಪಕ್ಷದ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಅವರು ಯಾವ ಬಣ್ಣದ ಶಾಲನ್ನಾದರೂ ಧರಿಸಲಿ. ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲ. ಅಲ್ಲಿ ನೆಲೆ ಕಂಡುಕೊಳ್ಳಲು ಇವರಿಬ್ಬರಲ್ಲಿ ಯಾರು ಯಾರನ್ನು ನುಂಗುತ್ತಾರೋ ಗೊತ್ತಿಲ್ಲ’ ಎಂದರು.ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಭಾಗದ ಎಲ್ಲಾ ಜಾತಿ ಹಾಗೂ ಧರ್ಮದ ಜನರು ಬಹಳ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ನಮ್ಮ ಕಡೆ ಊರ ಹಬ್ಬ ಮಾಡುವಾಗ ಯಾವರೀತಿ ಮಾಡುತ್ತಾರೆ ಎಂದು ನೀವು ನೋಡಿದ್ದೀರಲ್ಲಾ? ಈಗ ಅವರು ಹೊಸ ಪ್ರಯೋಗ ಮಾಡುತ್ತಿದ್ದಾರೆ’…

Read More

ಬ್ರಹ್ಮದೇವನಮಡು: ಕಲಬುರಗಿ ಜಿಲ್ಲೆ ಕೋಟನೂರ (ಡಿ) ಗ್ರಾಮದಲ್ಲಿ ಇತ್ತಿಚೇಗೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಕನಾ೯ಟಕ ರಾಜ್ಶ ದಲಿತ ಸಂಘಷ೯ ಸಮಿತಿ ಭೀಮ ಗಜ೯ನೆ ತಾಲೂಕು ಘಟಕ ಹಾಗೂ ವಿವಿಧ ಕನ್ನಡಪರ ಸಂಘಟನೆ ಮುಖಂಡರು,ಕಾಯ೯ಕತ೯ರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ ಅಧಿಕಾರಿ ಬಸಯ್ಶ ಮಠ ಅವರ ಮೂಲಕ ಮುಖ್ಶಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಗ್ರಾಮದ ಅಂಬಿಗರ ಚೌಡಯ್ಶ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತ ತಲುಪಿತ್ತು. ನಂತರ ಸಿಂದಗಿ – ಶಹಾಪೂರ ರಾಜ್ಶ ಹೆದ್ದಾರಿ ಸಂಚಾರ ತಡೆದು ಎರಡು ಗಂಟೆಗಳ ಕಾಲ ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಶಕ್ತಪಡಿಸಿದರು. ವಾಹನಗಳ ಸಂಚಾರ ಸಂಪೂಣ೯ ಸ್ಥಗಿತಗೊಂಡಿದ್ದರಿಂದ ರಸ್ತೆಯುದ್ದಕ್ಕೂ ಬಸ್, ಖಾಸಗಿ ವಾಹನಗಳು ನಿಂತುಕೊಂಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಗ್ರಾಮದ ಅಂಗಡಿ ಮುಂಗಟ್ಟುಗಳು ಎರಡು ಗಂಟೆ ಸ್ವಯಂ ಪ್ರೇರಣೆಯಿಂದ ಮುಚ್ಚಲಾಗಿತ್ತು.ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ಭೀಮ ಘಜ೯ನೆ ತಾಲೂಕು ಸಂಚಾಲಕ ಶ್ರೀಶೈಲ ಜಾಲವಾದಿ, ದಯಾನಂದ ಮಠ,…

Read More

ತಿಕೋಟಾ: ತಾಲ್ಲೂಕಿನ ಟಕ್ಕಳಕಿ ಗ್ರಾಮದ ಕರ್ಪೆವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯ ಶಿಕ್ಷಕರು ತಮ್ಮ ಸ್ವಂತ ಹಣದಿಂದ 43 ಇಂಚಿನ ಒಳ್ಳೆಯ ಗುಣಮಟ್ಟದ ಟಿವಿಯನ್ನು ತಮ್ಮ ಶಾಲೆಗೆ ಕೊಡುಗೆಯಾಗಿ ನೀಡಿ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾದರು.ಎಸ್.ಡಿ.ಎಮ್.ಸಿ ಅಧ್ಯಕ್ಷ ಬೀರಪ್ಪ ಕೃಷ್ಣ ಕರ್ಪೆ ಮಾತನಾಡಿ ನಮ್ಮ ಶಾಲೆಯ ಶಿಕ್ಷಕರು 14 ವರ್ಷಗಳಿಂದ ಸತತವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿದ್ದು ಇಂದು ಶಾಲೆಗೆ ಟಿವಿ ನೀಡಿದ್ದು ಎಲ್ಲ ಪಾಲಕರು ಮೆಚ್ಚುಗೆ ವ್ಯಕ್ತಪಡಿದ್ದಾರೆ ಎಂದರು.ಮುಖ್ಯ ಶಿಕ್ಷಕರ ಸಿದ್ಧರಾಮ ಝಲ್ಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಮಾರುತಿ ಲಮಾಣಿ, ಎ.ಡಿ.ಎಮ್. ಉಪಾಧ್ಯಕ್ಷ ಮಾನಂದಾ ಪಾಟೀಲ, ಸದಸ್ಯರಾದ ಗೋಪಾಲ ಮಾನೆ, ವಿಠೋಬಾ ಕರ್ಪೆ,ಬೀರು ಕರ್ಪೆ, ಮಲಕನಗೌಡ ಪಾಟೀಲ , ರಮೇಶ ಹೊನಖಂಡೆ, ಚಂದ್ರು ಪಾಂಡ್ರೆ, ಜಕ್ಕವ್ವ ಪಾಟೀಲ, ಸಿದ್ದಮ್ಮ ಬಿರಾದಾರ,ಬಪ್ಪಣ್ಣ ಕರ್ಪೆ, ಪರಶುರಾಮ ಕಲಾಲ, ದೊಂಡಿಬಾ ಪಾಂಡ್ರೆ, ರತ್ನಾಬಾಯಿ ಬಿರಾದಾರ, ನಿಲಾಂಬಿಕಾ ಪಾಟೀಲ ಮತ್ತು ಹಳೆಯ ವಿದ್ಯಾರ್ಥಿಗಳು, ಇತರು ಇದ್ದರು.

Read More