ಸಿಂದಗಿ: ಇಸ್ರೋ ಸಂಸ್ಥೆಯಲ್ಲಿ ಶ್ರೀ ಗುರುಕೃಪಾ ಶಾಲೆಯ ವಿದ್ಯಾರ್ಥಿಗಳು ಬರಬೇಕು, ಭವ್ಯ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಹಕಾರಿಯಾಗಬೇಕೆಂದು ಇಸ್ರೋ ವಿಜ್ಞಾನಿ ಅಭಿಷೇಕ ಅರವಿಂದ ದೇಶಪಾಂಡೆ ಅವರು ಕರೆ ನೀಡಿದರು.
ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಈ ಸಂಸ್ಥೆಯಲ್ಲಿ ದೇಶದ ಅತ್ಯುನ್ನತ ಸಂಸ್ಥೆ ಇಸ್ರೊಕ್ಕೆ ಸೇರಿಸುವ ಮಟ್ಟದಲ್ಲಿ ಈ ಗುರುಕೃಪಾ ಶಾಲೆಯಲ್ಲಿ ಬೋಧನೆ ಆಗುತ್ತಿದೆ, ಇಲ್ಲಿಯ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯಲ್ಲಿಯ ಶಿಕ್ಷಕರು ಉತ್ತಮ ಜ್ಞಾನಾರ್ಜನೆ ಮಾಡುತ್ತಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು, ಗುರುವಿನ ಸ್ಮರಣೆ ಸದಾ ನಮ್ಮಲ್ಲಿರಬೇಕು ಎಂದು ಹೇಳಿದ ಅವರು ವಿದ್ಯಾರ್ಥಿಗಳು ತಮ್ಮಲ್ಲಿ ಜಾಣ್ಮೆ ಇದ್ದು, ಸಂಕುಚಿತ ಮನೋಭಾವನೆ ಇಟ್ಟುಕೊಳ್ಳದೇ ಧೈರ್ಯದಲ್ಲಿ ಮುನ್ನುಗ್ಗಿ ಸಾಧನೆ ಮಾಡಿದಾಗಲೇ ಗುರಿ ಮುಟ್ಟಲು ಸಾಧ್ಯ. ಅದಕ್ಕೆ ನಾನೆ ಒಂದು ಉದಾಹರಣೆ ಎಂದರಲ್ಲದೆ, ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕಲಿತ ಶಾಲೆಗೆ ಕೀರ್ತಿ ತರುವಂತವರಾಗಬೇಕೆಂದರು.
ಅತಿಥಿಯಾಗಿ ಬಸವ ಸಮಿತಿ ಅಧ್ಯಕ್ಷ ಎನ್. ಎಸ್. ಪಾಟೀಲ ಮಾತನಾಡಿದರು.
ನಿಡಗುಂದಿಯ ಜಿ.ವಿ.ವಿ.ಎಸ್ ಬಿಎಡ್ ಕಾಲೇಜ್ ಪ್ರಿನ್ಸಿಪಾಲ್ ಡಾ. ಸವಿತಾ ದೇಸಾಯಿ ಮಾತನಾಡಿ,
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಮೌಲ್ಯ ಬರುವಂತೆ ಈ ಶಿಕ್ಷಣ ಸಂಸ್ಥೆಯಲ್ಲಿ ಹೇಳಿಕೊಡಲಾಗುತ್ತಿದ್ದು, ಇದೊಂದು ಮಾದರಿ ಸಂಸ್ಥೆ ಎಂದು ಹೇಳಿದರು.
ವಿದ್ಯೆಗಿಂತ ಮೊದಲು ಸಂಸ್ಕಾರ ಅವಶ್ಯ ಆ ಕಾರ್ಯ ಈ ಸಂಸ್ಥೆಯಲ್ಲಿ ನಡೆಯುತ್ತಿದೆ ಅದರ ಸದುಪಯೋಗವನ್ನು ಪಾಲಕರು ಪಡೆದುಕೊಳ್ಳಬೇಕು ಜೊತೆಗೆ ಮಕ್ಕಳಲ್ಲಿ ಜ್ಞಾನ ಎಷ್ಟು ಇದೆ ಎಂದು ಪರೀಕ್ಷಿಸಿಕೊಳ್ಳಬೇಕು ಎಂದು ಅಥರ್ಗಾದ ಜ್ಞಾನ ಭಾರತಿ ಶಾಲೆಯ ಆಡಳಿತಾಧಿಕಾರಿ ಆರ್. ಬಿ. ಪುರೋಹಿತ ಹೇಳಿದರು.
ಪಾಲಕರ ಪ್ರತಿನಿಧಿಯಾಗಿ ಆಗಮಿಸಿದ ಸಿಂದಗಿಯ ಎಚ್.ಡಿ.ಎಫ್.ಸಿ. ಬ್ಯಾಂಕ್ ವ್ಯವಸ್ಥಾಪಕ ವಿನಾಯಕ ಮಹೀಂದ್ರಕರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಎಚ್.ಟಿ. ಕುಲಕರ್ಣಿ ಮಾತನಾಡಿದರು.
ಸಂಸ್ಥೆಯ ವಾರ್ಷಿಕ ವರದಿಯನ್ನು ಮುಖ್ಯ ಗುರುಮಾತೆ ಹೇಮಾ ಪೊದ್ದಾರ ಮಂಡಿಸಿದರು. ಇಸ್ರೋ ವಿಜ್ಞಾನಿ ಅಭಿಷೇಕ ಅರವಿಂದ ದೇಶಪಾಂಡೆ ಹಾಗೂ ನಿಡಗುಂದಿಯ ಜಿ.ವಿ.ವಿ.ಎಸ್ ಬಿಎಡ್ ಕಾಲೇಜ್ ಪ್ರಿನ್ಸಿಪಾಲ್ ಡಾ. ಸವಿತಾ ದೇಸಾಯಿ ಅವರೊಂದಿಗೆ ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಹಲವಾರು ವಿಷಯಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು.
ಶೃತಿ ಕುಲಕರ್ಣಿ ಅವರಿಂದ ಸ್ವಾಗತ, ಪ್ರಸನ್ನ ಕುಲಕರ್ಣಿ ಅವರಿಂದ ವಂದನಾರ್ಪಣೆ ಜರುಗಿತು. ಕಾರ್ಯಕ್ರಮದ ನಿರ್ವಹಣೆಯನ್ನು ಹರೀಷ ಪೊದ್ದಾರ ನಿರ್ವಹಿಸಿದರು.
ವೇದಿಕೆಯ ಮೇಲೆ ಶ್ರೀ ಗುರು ಕೃಪಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಚ್. ಜಿ. ಪೊದ್ದಾರ, ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
