ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ವಿಜಯಪುರ: ಭೌತಜಗತ್ತಿಗೆ ಆಲ್ಬರ್ಟ ಐನ್‍ಸ್ಟೈನ್ ಕೊಟ್ಟ ವಿಶಿಷ್ಟ ಸಾಪೇಕ್ಷ ಸಿದ್ದಾಂತದ ಸೂತ್ರ.E=mc ಒಂದು ಕ್ಲಿಷ್ಟಕರ ಭೌತ ಸೂತ್ರ. ಆದರೆ ಅದನ್ನು ಅವರು ಉದಾಹರಿಸುವ ರೀತಿ ಶ್ಲಾಘನೀಯವಾದದ್ದು ಎಂದು ಪ್ರಾಚಾರ್ಯ ಡಾ.ಆರ್.ಎಂ.ಮಿರ್ದೆ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಐಐಸಿ ಮತ್ತು ಭೌತಶಾಸ್ತ್ರ ವಿಭಾಗದ ಎಪ್ಸಿಲಾನ್ ಕ್ಲಬ್ ಹಾಗೂ ‘ಜನರಂಗ ಕಲಬುರಗಿ ಮತ್ತು ಕಲಾ ಕುಟೀರ ತಂಡ ಸಹಯೋಗದಲ್ಲಿ ಜರುಗಿದ “ನಾನು ಅಲ್ಬರ್ಟ ಐನ್‍ಸ್ಟೈನ್” ಎಂಬ ಏಕಪಾತ್ರಾಭಿನಯದ ಕಿರುನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦ ನೇ ಶತಮಾನದ ಮಹಾನ್ ಮೇಧಾವಿ ಹಾಗೂ ಭೌತ ಜಗತ್ತಿಗೆ ವಿಶಿಷ್ಟ ಸಾಪೇಕ್ಷ ಸಿದ್ದಾಂತ ಸೂತ್ರವನ್ನು E=mc ನೀಡಿದ ವಿಜ್ಞಾನಿ ಅವರ ಜೀನದ ಸಾಹಸ ಗಾಥೆಯನ್ನು ಬಿಚ್ಚಿಡುವ ಈ ಕಿರುನಾಟಕದ ಪ್ರದರ್ಶನ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಡಾ.ಪ್ರಕಾಶ ಗರುಡ ರಚನೆಯ ಮತ್ತು ಉಮೇಶ ಪಾಟೀಲ ನಿರ್ದೇಶನದ, ಶಂಕರಯ್ಯ ಘಂಟಿ ಅವರ ಏಕಪಾತ್ರ ಅಭಿನಯದ ಹಾಗೂ ಸಾಗರ್ ಗಾಲಿ ಅವರ ಸಂಗೀತದ ಈ ಏಕಪಾತ್ರ ಅಭಿನಯದ ಕಿರುನಾಟಕವು ನಿಜಕೂ ಇಂದಿನ ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಪಿ.ಎಸ್.ಪಾಟೀಲ, ಐಐಸಿ ಸಂಯೋಜಕ ಪ್ರೊ.ಎನ್.ಜಿ.ಜೋಶಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅನಿಲ ನಾಯಕ, ನ್ಯಾಕ್ ಸಂಯೋಜಕ ಡಾ.ಮಹೇಶಕುಮಾರ ಕೆ, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

