Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕ್ಷಮೆ
ವಿಶೇಷ ಲೇಖನ

ಕ್ಷಮೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)

– ಜಯಶ್ರೀ ಜೆ. ಅಬ್ಬಿಗೇರಿ
ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨

ತಪ್ಪು ಮಾಡುವುದು ಸಹಜ ತಿದ್ದಿ ನಡೆಯೋನೇ ಮನುಜ ಎಂದು ಬಲ್ಲವರು ಹೇಳುತ್ತಾರೆ.ಅಂದರೆ ತಪ್ಪು ಮಾಡುವದು ಮಾನವನ ಸಹಜ ಗುಣ. ಎಂಥ ಮಹಾನ್ ಸಾಧಕನೇ ಆಗಲಿ, ಏನಾದರೂ ಒಂದು ತಪ್ಪು ಮಾಡಿಯೇ ಮಾಡುತ್ತಾನೆ. ಮಾನವ ಪರಿಪೂರ್ಣನಲ್ಲ. ದೇವರು ಮಾತ್ರ ಪರಿಪೂರ್ಣ ತಪ್ಪುಗಳನ್ನು ನೋಡದೆ ಕೇವಲ ಗುಣಗಳನ್ನು ಮಾತ್ರ ಗಮನಿಸುವದೇ ಕ್ಷಮೆ ’ಒಮ್ಮೆ ತಪ್ಪು ಮಾಡಿದವರಿಗೆ ಸರಿಪಡಿಸಿಕೊಳ್ಳಲು ಅವಕಾಶ ಕೊಡುವುದು ಕ್ಷಮೆ. ಘೋರ ಅಪರಾಧ ಮಾಡಿದವನನ್ನು ಸರಿದಾರಿಗೆ ತರಲು ಕ್ಷಮೆಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳು ನಮಗೆ ಕಾಣುವುದೇ ಇಲ್ಲ. ನಮ್ಮ ತಪ್ಪುಗಳು ಅರಿವಿಗೆ ಬಂದರೂ ಅವುಗಳನ್ನು ಇತರರ ಮೇಲೆ ಹೊರಿಸಿ ಕೈತೊಳೆದುಕೊಳ್ಳಲು ನೋಡುತ್ತೇವೆ. ನಮ್ಮ ತಪ್ಪುಗಳ ಕುರಿತು ನಾವು ಕ್ಷಮಾಶೀಲರಾಗಿರುತ್ತೇವೆ.ನಮ್ಮ ಎಡೆಯಲ್ಲಿನ ಎಮ್ಮೆ ಕಾಣಿಸುವದಿಲ್ಲ ಮತ್ತೊಬ್ಬರ ಎಡೆಯಲ್ಲಿನ ನೊಣ ಕಾಣಿಸುತ್ತೆ ಅಂತ ಅದಕ್ಕೆ ಹಿರಿಯರು ಗಾದೆ ಮಾಡಿದ್ದು.
ಕ್ಷಮಾ ಗುಣದ ಕೊರತೆಯಿಂದ ಅನೇಕರು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಡಿಗಡಿಗೂ ಮತ್ತೊಬ್ಬರ ತಪ್ಪುಗಳನ್ನು ಸೂಕ್ಷ್ಮದರ್ಶಕದಲ್ಲಿಟ್ಟು ಹೀಯಾಳಿಸುತ್ತ, ಟೀಕಿಸುತ್ತ ಕಾಲ ಕಳೆಯುತ್ತಾರೆ. ಅವರಿಗೆ ತಮ್ಮ ತಪ್ಪಿನ ಅರಿವು ಆಗುವದೇ ಇಲ್ಲ. ಯಾರಾದರೂ ಅವರ ತಪ್ಪಿನ ಬಗ್ಗೆ ತಿಳಿಸಿದರೆ ಅವರನ್ನು ಹೀನಾಯಮಾನವಾಗಿ ಜರಿಯುತ್ತಾರೆ. ಮತ್ತು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾರಲ್ಲದೆ. ಕ್ಷಮಿಸುವದು ದೌರ್ಬಲ್ಯದ ಸಂಕೇತವೆಮದು ತಪ್ಪಾಗಿ ತಿಳಿದಿರುತ್ತಾರೆ.
ನಾವು ದಿನ ನಿತ್ಯ ಕಾಲುಗಳಿಂದ ಭೂತಾಯಿಯನ್ನು ತುಳಿದು ನಡೆಯುತ್ತಿದ್ದರೂ, ಅವಳ ಗರ್ಭದಲ್ಲಿರುವ ಅಮೂಲ್ಯ ಲೋಹಗಳ ಆಸೆಗೆ ಗಣಿಗಾರಿಕೆ ನಡೆಸುತ್ತಿದ್ದರೂ ಅವಳು ನಮ್ಮನ್ನು ಕ್ಷಮಿಸುವುದು ಮಾತ್ರವಲ್ಲ, ನಮಗಾಗಿ ರುಚಿ ರುಚಿಯಾದ ಹಣ್ಣು, ಶಕ್ತಿವರ್ಧಕ ಕಾಳು ತರಕಾರಿಗಳನ್ನು, ಬಗೆ ಬಗೆಯ ಮನಮೋಹಕ ಹೂವುಗಳನ್ನು ನೀಡುತ್ತಾಳೆ. ಭೂದೇವಿಗೆ ಕ್ಷಮಾ ಎಂಬ ಹೆಸರು ಅತ್ಯಂತ ಸೂಕ್ತ ಎನ್ನುವದು ಇದೇ ಕಾರಣಕ್ಕೆ. ಕ್ಷಮೆಗೆ ಹೆಸರಾದವಳು ಕ್ಷಮೆಯಾ ಧರಿತ್ರಿ..
ಕ್ಷಮೆ ಸದ್ಗುಣವಂತನ ಶ್ರೇಷ್ಠ ಗುಣವೆಂದು ಹಿರಿಯರು ಹೇಳಿದ್ದಾರೆ. ತುಂಬಾ ಹಟಕ್ಕೆ ಬಿದ್ದು ಮತ್ತೊಬ್ಬರ ಮನಸ್ಸನ್ನು ನೋಯಿಸುವುದಕ್ಕಿಂತ ಪ್ರೀತಿಯಿಂದ ಕ್ಷಮಿಸಿದರೆ ಬದುಕಿನಲ್ಲಿ ಶತ್ರುಗಳೇ ಇರಲಾರರು. ಚಾಣಕ್ಯ ಹೇಳಿದಂತೆ ಶತ್ರುವಿನಲ್ಲೂ ಉತ್ತಮ ಗುಣಗಳಿದ್ದರೆ ಅದನ್ನು ಪ್ರಶಂಸಿಸಬೇಕು. ಶತ್ರುಗಳನ್ನು ಕ್ಷಮಿಸಿ ಆಲಂಗಿಸಿದಾಗ ಬದುಕು ನಂದನವನವಾಗುತ್ತದೆ.

– ಜಯಶ್ರೀ ಜೆ. ಅಬ್ಬಿಗೇರಿ
ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್.ಎಮ್.ಮಣೂರ ಪಬ್ಲಿಕ್ ಸ್ಕೂಲ್ ನಲ್ಲಿ ಗುಣಾತ್ಮಕ ಶಿಕ್ಷಣ
    In (ರಾಜ್ಯ ) ಜಿಲ್ಲೆ
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.