ತಿಕೋಟಾ: ತಾಲ್ಲೂಕಿನ ಟಕ್ಕಳಕಿ ಗ್ರಾಮದ ಕರ್ಪೆವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯ ಶಿಕ್ಷಕರು ತಮ್ಮ ಸ್ವಂತ ಹಣದಿಂದ 43 ಇಂಚಿನ ಒಳ್ಳೆಯ ಗುಣಮಟ್ಟದ ಟಿವಿಯನ್ನು ತಮ್ಮ ಶಾಲೆಗೆ ಕೊಡುಗೆಯಾಗಿ ನೀಡಿ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಬೀರಪ್ಪ ಕೃಷ್ಣ ಕರ್ಪೆ ಮಾತನಾಡಿ ನಮ್ಮ ಶಾಲೆಯ ಶಿಕ್ಷಕರು 14 ವರ್ಷಗಳಿಂದ ಸತತವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿದ್ದು ಇಂದು ಶಾಲೆಗೆ ಟಿವಿ ನೀಡಿದ್ದು ಎಲ್ಲ ಪಾಲಕರು ಮೆಚ್ಚುಗೆ ವ್ಯಕ್ತಪಡಿದ್ದಾರೆ ಎಂದರು.
ಮುಖ್ಯ ಶಿಕ್ಷಕರ ಸಿದ್ಧರಾಮ ಝಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಮಾರುತಿ ಲಮಾಣಿ, ಎ.ಡಿ.ಎಮ್. ಉಪಾಧ್ಯಕ್ಷ ಮಾನಂದಾ ಪಾಟೀಲ, ಸದಸ್ಯರಾದ ಗೋಪಾಲ ಮಾನೆ, ವಿಠೋಬಾ ಕರ್ಪೆ,ಬೀರು ಕರ್ಪೆ, ಮಲಕನಗೌಡ ಪಾಟೀಲ , ರಮೇಶ ಹೊನಖಂಡೆ, ಚಂದ್ರು ಪಾಂಡ್ರೆ, ಜಕ್ಕವ್ವ ಪಾಟೀಲ, ಸಿದ್ದಮ್ಮ ಬಿರಾದಾರ,ಬಪ್ಪಣ್ಣ ಕರ್ಪೆ, ಪರಶುರಾಮ ಕಲಾಲ, ದೊಂಡಿಬಾ ಪಾಂಡ್ರೆ, ರತ್ನಾಬಾಯಿ ಬಿರಾದಾರ, ನಿಲಾಂಬಿಕಾ ಪಾಟೀಲ ಮತ್ತು ಹಳೆಯ ವಿದ್ಯಾರ್ಥಿಗಳು, ಇತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

