ವಿಜಯಪುರ: ಅಂತಾರಾಷ್ಟ್ರೀಯ ಖ್ಯಾತಿ ಓಟಗಾರ ಮತ್ತು ಖ್ಯಾತ ವೈದ್ಯ ಡಾ. ಸಿ. ಆರ್. ಬಿದರಿ ಅವರ ಪುಣ್ಯಸ್ಮರಣೆ ಅಂಗವಾಗಿ ಫೆಬ್ರುವರಿ 2 ರಂದು ಶುಕ್ರವಾರ ನಗರದಲ್ಲಿ ಕ್ಯಾನ್ಸರ್ ಕುರಿತು ರಾಜ್ಯ ಮಟ್ಟದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸ್ಕಿಲ್ಸ್ ಲ್ಯಾಬೊರೇಟರಿ ಕಟ್ಟಡದಲ್ಲಿರುವ ಸೆಂಟ್ ಫಾರ್ ಅಡ್ವಾನ್ಸಡ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ವಿಭಾಗದಲ್ಲಿ ಬೆಳಿಗ್ಗೆ 9.30ಕ್ಕೆ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ವಿವಿಯ ಸಮುಕುಲಾಧಿಪತಿ ಡಾ. ವೈ. ಜಯರಾಜ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಪ್ರಾಚಾರ್ಯ ಡಾ. ಆನಂದ ಪಾಟೀಲ, ಡಾ. ಆರ್. ಸಿ. ಬಿದರಿ, ಡಾ. ಆರ್. ವಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಕ್ಯಾನ್ಸರ್ ಕುರಿತು ತಿಳುವಳಿಕೆ ಮೂಡಿಸುವುದು, ಕ್ನಾನ್ಸರ್ ತಪಾಣೆಯಲ್ಲಿ ಅತ್ಯಾಧುನಿಕ ವಿಧಾನಗಳು, ಚಿಕಿತ್ಸೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಮನೋಬಲ ತುಂಬಿ ಆರೈಕೆ ಮಾಡುವ ಕುರಿತು ನಾನಾ ವಿಚಾರಗೋಷ್ಠಿಗಳು ನಡೆಯಲಿವೆ. ಬೆಂಗಳೂರು ಎಚ್.ಸಿ.ಜಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಪ್ರಭು ಎನ್. ನೆಸರ್ಗಿಕರ, ಡಾ. ನಟರಾಜ ಕೆ. ಎಸ್. ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಹೆಸರಾಂತ ಕ್ಯಾನ್ಸರ್ ತಜ್ಞವೈದ್ಯರು, ಡಾ. ಸಿ. ಆರ್. ಬಿದರಿ ಅವರ ಕುಟುಂಬ ಸದಸ್ಯರು, ಆಶಾ ಎಂ. ಪಾಟೀಲ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿರಲಿದ್ದಾರೆ.
ಜನಸಾಮಾನ್ಯರಿಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂಬುದು ಡಾ. ಸಿ. ಆರ್. ಬಿದರಿ ಅವರ ಕನಸಾಗಿತ್ತು. ಅವರ ಕನಸುಗಳನ್ನು ನನಸು ಮಾಡಲು ಕ್ಯಾನ್ಸರ್ ಕುರಿತು ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಿದರಿ ಕುಟುಂಬಸ್ಥರು ಈ ಕಾರ್ಯಕ್ರಮದ ಅಂಗವಾಗಿ ಅಂಧ ಮತ್ತು ಕಿವುಡ ಹಾಗೂ ಮೂಕ ಶಾಲಾ ಮಕ್ಕಳಿಗೆ ಅಗತ್ಯವಾಗಿರುವ ಸಲಕರಣೆಗಳನ್ನು ವಿತರಿಸಲಿದ್ದಾರೆ ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ಮೆಡಿಸೀನ್ ವಿಭಾಗದ ಮುಖ್ಯಸ್ಥ ಡಾ. ಎಸ್. ಎನ್. ಬೆಂತೂರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
