ದೇವರಹಿಪ್ಪರಗಿ: ನರ್ಸರಿ ಸೇರಿದಂತೆ ಒಂದರಿಂದ ಐದನೇ ತರಗತಿಯ ಮಕ್ಕಳು ವಿಜ್ಞಾನ, ಆಹಾರ, ಕೃಷಿ ಮೇಳದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಪಟ್ಟಣದ ಇಂದುಮತಿ ಸಾವಳಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಜರುಗಿದ ಒಂದು ದಿನದ ಪ್ರದರ್ಶನ ಮೇಳದಲ್ಲಿ ೬೦ ಕ್ಕೂ ಹೆಚ್ಚು ಮಕ್ಕಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಸೌರವ್ಯೂಹ ರಚನೆ, ವಿದ್ಯುತ್ ಉತ್ಪಾದನೆ. ಆಹಾರ ಹಾಗೂ ಕೃಷಿಗೆ ಸಂಬಂಧಿತ ಬೆಳೆಗಳು ಹಾಗೂ ಹಣ್ಣುಗಳ ಬೆಳೆಯುವ ಹಂತ, ಮಾರಾಟದ ವಿಧಾನಗಳು. ಅರಣ್ಯಿಕರಣ ಹಾಗೂ ಅದರ ಮಹತ್ವ ಸಾರುವ ವಿವಿಧ ನಮೂನೆಗಳನ್ನು ತಯಾರಿಸಿ ವಿವರಿಸಿದರು.
ವಿವರಣೆ ನೀಡುವ ಮಕ್ಕಳ ತೊದಲು ನುಡಿ ಹಾಗೂ ಅವರ ಹಾವಭಾವಗಳು ಎಲ್ಲರ ಗಮನ ಸೆಳೆದವು.
ಬೆಳಿಗ್ಗೆ ಆರಂಭಗೊಂಡ ಮಕ್ಕಳ ಒಂದು ದಿನದ ಪ್ರದರ್ಶನ ಮೇಳಕ್ಕೆ ಸಿಆರ್‌ಸಿ ವಿಜಯಲಕ್ಷ್ಮೀ ನವಲಿ ಸೇರಿದಂತೆ ಪಾಲಕರು ಹಾಗೂ ಸಾರ್ವಜನಿಕರು ಭೇಟಿ ನೀಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥಾಪಕ ಅಧ್ಯಕ್ಷ ಶಾಂತಪ್ಪ ಸಾವಳಗಿ, ಕಾರ್ಯದರ್ಶಿ ಸಂತೋಷ ಸಾವಳಗಿ, ಸಿಬ್ಬಂದಿ ಭಾಗ್ಯಶ್ರೀ ಹಂಚಾಟೆ, ಪವಿತ್ರಾ ಹಳಿಮನಿ, ಪೂಜಾ ಹಿರೇಮಠ ಮಕ್ಕಳಾದ ಪ್ರೀತಂ ಹಳಿಮನಿ, ಸಿದ್ದು ದೇವಣಗಾಂವ, ಸಾನ್ವಿ, ಸಮ್ಮದ್ ಸೇರಿದಂತೆ ಪಾಲಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

