Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಾರಣಾಸಿ ಜಿಲ್ಲಾ ನ್ಯಾಯಾಲಯದ ಐತಿಹಾಸಿಕ ತೀರ್ಪು | ಒಂದು ವಾರದೊಳಗಾಗಿ ಅಗತ್ಯ ವ್ಯವಸ್ಥೆಗೆ ಸೂಚನೆ ಲಖನೌ: ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂ ಭಕ್ತರು ಪೂಜೆ-ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.ವಾರಣಾಸಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲ ಮಹಡಿ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಭಕ್ತರು ಪೂಜೆ ಸಲ್ಲಿಸಬಹುದಾಗಿದೆ. ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಇನ್ನು ಒಂದು ವಾರದೊಳಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ನ್ಯಾಯಾಲಯವು ತನ್ನ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಬ್ಯಾರಿಕೇಡ್‌ಗಳನ್ನು ತೆಗೆಯುವುದು ಸೇರಿದಂತೆ ವ್ಯವಸ್ಥೆಗಳನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಅರ್ಚಕರಿಂದ ಪ್ರಾರ್ಥನೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಮಹಿಳಾ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್, ಎಲ್ಲರಿಗೂ ಅಲ್ಲಿ ಪ್ರಾರ್ಥನೆ ಮಾಡುವ ಹಕ್ಕು ಇದೆ, ಇದೊಂದು ಮಹತ್ವದ ಆದೇಶವಾಗಿದೆ. ಆದೇಶದಂತೆಯೇ ವಾರದೊಳಗೆ ಅಲ್ಲಿ ನಾವು…
ತಿಕೋಟಾ: ತಾಲೂಕಿನ ಹೊನವಾಡ ಗ್ರಾಮದಲ್ಲಿ ಶಬ್ದ ಗಾರುಡಿಗ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆಯನ್ನು ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ತಿಕೋಟಾ ಹಾಗು ಶ್ರೀ ಬಸವಂತರಾಯ ಪ .ಪೂ ಕಾಲೇಜ್ ಹೊನ್ವಾ ಡ ಸಹಯೋಗದಲ್ಲಿ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯ ರೇ.ಸಿ.ಪಾಟೀಲ ಪಾಟೀಲ, ನಿವೃತ್ತ ಉಪನ್ಯಾಸಕ ಎಮ್.ಎಸ್. ಯಚ್ಚಿ ಆಗಮಿಸಿದ್ದರು. ಪ್ರಾಚಾರ್ಯ ಎಂ.ಎ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಳಿನಿಕಾಂತ ಸಾವಂತ ಉಪಸ್ಥಿತರಿದ್ದರು.ಕಸಾಪ ತಿಕೋಟಾ ಅಧ್ಯಕ್ಷ ಸಿದ್ರಾಮಯ್ಯ ಜಿ ಲಕ್ಕುಂಡಿಮಠ ವಂದಿಸಿದರು. ಜಗದೀಶ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಮಠಪತಿ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಎಮ್.ಜಿ. ಕುಲಕರ್ಣಿ,ಆರ್.ಬಿ. ಶೇಡ್ಯಾಳ, ವಾಲಿಕಾರ, ಮಂಜುನಾಥ್ ಎಸ್.ಪಿ, ಶ್ರೀಮತಿ ಮಮತಾ ಹಿರೇಮಠ, ಕು.ನಿವೇದಿತಾ ಹಿರೇಮಠ, ಇಂದಿರಾಬಾಯಿ ಪಾತ್ರೋಟ ಉಪಸ್ಥಿತರಿದ್ದರು.
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ವಿತರಣಾ ತೊಟ್ಟಿ-೧ ಎ ರ ಕಾಜಿಬೀಳಗಿ ಪಶ್ಚಿಮ ಕಾಲುವೆಯ ವಿತರಣಾ ಕಾಲುವೆ-೧೦ ರ ಮೇನ್ ಮತ್ತು ವಿತರಣಾ ಕಾಲುವೆ ೧೧ ರ ನಿರ್ಮಾಣಕ್ಕಾಗಿ ಅನೇಕ ರೈತರ ಜಮೀನುಗಳನ್ನು ೨೦೨೦ ರಲ್ಲಿ ಕೇವಲ ಭೂಸ್ವಾಧಿನ ನೋಟಿಸ್ ಕೊಟ್ಟು ಕೆಲಸ ಮುಗಿಸಿ ಇಲ್ಲಿಯವರೆಗೆ ಬೂಮಿ ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ನೀಡಿರುವುದಿಲ್ಲ, ಬೇಗ ಕೊಡಿಸಿ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.ಕಾಮಗಾರಿ ಪ್ರಾರಂಭಕ್ಕೂ ಮೊದಲೇ ರೈತರಿಗೆ ಹಣ ಬಿಡುಗಡೆ ಮಾಡಿ ನಂತರ ಕಾಮಗಾರಿ ಪ್ರಾರಂಭಿಸಬೇಕು ಎಂಬ ನಿಯಮವಿದ್ದರೂ, ಅದನ್ನು ಗಾಳಿಗೆ ತೂರಿ ಗುತ್ತಿಗೆದಾರರು ತಮ್ಮ ಕೆಲಸ ಬೇಗ ಮುಗಿಸಿ ಬಿಲ್ ಪಡೆದುಕೊಳ್ಳುವ ತರಾತುರಿಯಲ್ಲಿ ರೈತರಿಗೆ ಅನ್ಯಾಯವೆಸಗಿದ್ದಾರೆ. ಭೂಮಿ ಕಳೆದುಕೊಂಡ ರೈತರು ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು ಇಲ್ಲಿಯವರಿಗೂ…
ವಿಜಯಪುರ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ೪-೫ ತಿಂಗಳು ಕಳೆದರೂ ಇನ್ನುವರೆಗೂ ಯಾವ ರೈತರಿಗೂ ಪರಿಹಾರ ಬಂದಿರುವುದಿಲ್ಲ, ಫಸಲ್ ಭೀಮಾ ಯೋಜನೆಯಲ್ಲಿ ಭಾರಿ ಪ್ರಮಾಣದ ಅನ್ಯಾಯವಾಗುತ್ತಿದೆ, ಅದೇರೀತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಲವಾರು ಸಮಸ್ಯೆಗಳಿವೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ, ಸ್ಪಿಂಕಲರ್ ಪೈಪಗಳ ಸಮಸ್ಯೆ ದೊಡ್ಡದಾಗಿದೆ, ಕಳೆದ ೨-೩ ವರ್ಷಗಳ ಹಿಂದೆ ಡಿ.ಡಿ ತುಂಬಿದ ಹಣವನ್ನು ಮರಳಿ ಹಾಕಲಾಗಿದೆ, ಈಗ ಮತ್ತೆ ಡಿ.ಡಿ ತುಂಬುವಂತೆ ಹೇಳುತ್ತಿದ್ದಾರೆ, ಅದು ನಿಮ್ಮ ಸರದಿ ಬಂದಾಗ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ, ಜೊತೆಗೆ ವಿಮೆಯಲ್ಲಿ ದೊಡ್ಡಪ್ರಮಾಣದ ಅವ್ಯವಹಾರ ನಡೆಯುತ್ತಿದೆ, ನಷ್ಟಗೊಂಡ ರೈತರಿಗೆ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ, ಅದರ…
ವಿಜಯಪುರ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಚುನ್ನಪ್ಪಾ ಪೂಜೇರಿ ಅವರ ಮಾರ್ಗದರ್ಶನದಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಸಂಘದ ತತ್ವ ಹಾಗೂ ಸಿದ್ದಾಂತಗಳನ್ನು ಹೇಳಿ ಆದೇಶಪ್ರತಿ ಹಾಗೂ ಶಾಲು ದೀಕ್ಷೆಯನ್ನು ಮಾಡಿದರು.ರೈತಸಂಘದಲ್ಲಿ ಯಾರು ದೊಡ್ಡವರು ಸಣ್ಣವರು, ಬಡವ, ಬಲ್ಲಿದ, ಮೇಲ್ಜಾತಿ, ಕೇಳಜಾತಿ ಎಂಬುದಿಲ್ಲ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಇರುವ ಏಕೈಕ ಸಂಘಟನೆ ಇದಾಗಿದೆ, ಜಿಲ್ಲೆಯ ಯಾವುದೇ ರೈತರಿಗೆ ಅನ್ಯಾಯವಾಗದಂತೆ, ಸರಕಾರದ ಎಲ್ಲಾ ಯೋಜನೆಗಳ ಮಾಹಿತಿ ಕೊಡುತ್ತಾ ರೈತರ ಏಳ್ಗೆಗಾಗಿ, ರೈತರ ಆದಾಯವನ್ನು ದ್ವೀಗುಣ ಮಾಡುವಲ್ಲಿ, ರೈತರನ್ನು ಸ್ವಾವಲಂಭಿಗಳಾಗಿ ಬದುಕುವಂತೆ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಸಂಪತ್ತ ಜಮಾದಾರ, ಜಿಲ್ಲಾ ಸಂ.ಕಾರ್ಯದರ್ಶಿಗಳಾಗಿ ನಜೀರ ನಂದರಗಿ, ವಿಜಯಪುರ ತಾಲೂಕಾ ಅಧ್ಯಕ್ಷರಾಗಿ ಅರುಣಗೌಡ ತೇರದಾಳ ಹಾಗೂ ತಾಲೂಕಾ ಉಪಾಧ್ಯಕ್ಷರಾಗಿ ಮಹಾದೇವಪ್ಪ ತೇಲಿ ಅವರಿಗೆ ಆದೇಶ ಪ್ರತಿ ನೀಡಿ ಶಾಲು ಹೊದಿಸಲಾಯಿತು.ಈ…
೬೨೦ ಕಿ.ಮೀ ದೂರದ ಹೊಸ ರೈಲ್ವೆ ಮಾರ್ಗ | ಫಲಿಸದ ನೂತನ ರೈಲ್ವೆ ಮಾರ್ಗ ನಿರ್ಮಾಣ ಹೋರಾಟ ಸಮೀತಿ ಮನವಿ ಕೊಲ್ಹಾರ: ಎರಡು ದಶಕಗಳ ಕಾಲದಿಂದ ಕೇಂದ್ರ ಸರಕಾರದ ಗಮನ ಸೆಳೆಯುತ್ತಿರುವ ಬಹುನಿರೀಕ್ಷಿತ ಶೇಡಬಾಳ, ಕೂಡಗಿ, ಯಾದಗಿರಿ, ಶ್ರೀಶೈಲ ಪುಣ್ಯಕ್ಷೇತ್ರಕ್ಕೆ ತಲುಪುವ ಹೊಸ ರೈಲ್ವೆ ಮಾರ್ಗದ ಸಮೀಕ್ಷೆ ಕಾರ್ಯ (ಸರ್ವೇ) ಕನಸು ನನಸಾಗದೇ ಇರುವದು ಈ ಭಾಗದ ಜನರ ಪಾಲಿನ ದೌರ್ಭಾಗ್ಯವಾಗಿದೆ.ಕೇಂದ್ರ ಸರಕಾರವು ಉಡಾನ್ ಯೋಜನೆಯ ಮೂಲಕ ಮೂಲೆ ಮೂಲೆಗೆ ವಿಮಾನ ಸೇವೆ ಸಾಗರಮಾಲಾ ಯೋಜನೆಯ ಮೂಲಕ ನೌಕಾ ಸಂಪರ್ಕ (ಹಡಗು), ಪರ್ವತಮಾಲಾ ಯೋಜನೆ ಅಡಿಯಲ್ಲಿ ನಾಲ್ಕು ದಿಕ್ಕಿನಿಂದ ಭೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕ ಕ್ಷೇತ್ರಕ್ಕೆ ಅನುಕೂಲಮಾಡಿರುವದು ಮುಂದೆ ಮಾಡುವುದು ಕೂಡ ಸ್ವಾಗತಾರ್ಹ ವಿಷಯವಾಗಿದೆ.ಆದರೆ ದಕ್ಷಿಣ ಭಾರತದ ಮಧ್ಯ ಭಾಗದಲ್ಲಿ ರೈಲ್ವೆ ಯೋಜನೆಗಳು ಅಷ್ಟಾಗಿ ಸಂಪರ್ಕದ ಕೊಂಡಿಯಾಗಿ ಜನರಿಗೆ ಹತ್ತಿರವಾಗುವಲ್ಲಿ ಕೇಂದ್ರ ಸರಕಾರದ ಆಡಳಿತ ವ್ಯವಸ್ಥೆಯ ಅಧಿಕಾರಿಗಳ ಜವಾಬ್ದಾರಿ ಕೊರತೆಯೋ, ಅಥವಾ ನಮ್ಮನ್ನಾಳುವ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಅಭಿವೃದ್ದಿ ದಿಸೆಯತ್ತ ಸೌಲಭ್ಯ…
ಸಿಎಂ ಸಿದ್ದರಾಮಯ್ಯ ಜತೆ ಸಚಿವ ಎಂ.ಬಿ.ಪಾಟೀಲ ನೇತೃತ್ವದ ನಿಯೋಗದ ಸಭೆ ಬೆಂಗಳೂರು: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ೧೦೦ ಕೋಟಿ ರೂ. ಬಡ್ಡಿರಹಿತ ಸಾಲ ನೀಡುವಂತೆ ಮತ್ತು ೫೦ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸುವಂತೆ ಕೋರಿ, ಕಾರ್ಖಾನೆಯ ಆಡಳಿತ ಮಂಡಳಿಯು ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ತಿಳಿಸಿದ್ದಾರೆ.ಕಾರ್ಖಾನೆಯ ಉನ್ನತ ಮಟ್ಟದ ನಿಯೋಗವು ತಮ್ಮ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಅವರು ಈ ಮಾಹಿತಿ ನೀಡಿದ್ದಾರೆ.ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದಲ್ಲಿರುವ ಈ ಕಾರ್ಖಾನೆಯು ಸಹಕಾರಿ ವಲಯದಡಿ ಇದ್ದು, ಸದ್ಯಕ್ಕೆ ಪ್ರತೀದಿನ ೬,೦೦೦ ಟನ್ ಕಬ್ಬು ಅರೆಯಲಾಗುತ್ತಿದೆ. ಇದನ್ನು ೧೦ ಸಾವಿರ ಟನ್ ಮಟ್ಟಕ್ಕೆ ಏರಿಸಲು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ, ಸರಕಾರದ ನೆರವು…
ಸಿಂದಗಿ: ತಾಲೂಕಿನ ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಲ್ಲಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕಾರಣ ಫೆ.೧ರಂದು ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಿಂದ ಸರಬರಾಜಾಗುವ ೧೧ಕೆವಿ ಯರಗಲ್ ನಿರಂತರ ಜ್ಯೋತಿ ಮಾರ್ಗದ ಎಲ್ಲ ಗ್ರಾಮಗಳಿಗೆ ಬೆಳಿಗ್ಗೆ ೧೦:೩೦-೨:೩೦ರ ವರೆಗೆ ಹಾಗೂ ೩೩ಕೆವಿ ವಿದ್ಯುತ್ ವಿತರಣಾ ಕೇಂದ್ರ ಗೋಲಗೇರಿ ಮತ್ತು ಕಲಕೇರಿಯಿಂದ ಸರಬರಾಜಾಗುವ ಎಲ್ಲ ೧೧ಕೆವಿ ಮಾರ್ಗಗಳಿಗೆ ಮದ್ಯಾಹ್ನ ೨:೩೦-೬:೩೦ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ ಭಾದಿತರಾಗುವ ಗ್ರಾಮಗಳ ಗ್ರಾಹಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಟಾನಗೊಂಡ ಗೋಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಗೋಕಟ್ಟೆ ನಿರ್ಮಾಣದ ಅನುದಾನ ಬಳಕೆ, ಪ್ರಗತಿ ಹಾಗೂ ಸಾರ್ವಜನಿಕ ಉಪಯೋಗ ಕುರಿತು ಮಾಹಿತಿ ಪಡೆದ ಅವರು, ಕೆರೆ ಅಂಗಳದಲ್ಲಿ ಸಂಗ್ರಹವಾಗುವ ಮಳೆ ನೀರಿನಿಂದ ಸುತ್ತಲಿನ ರೈತರಿಗೆ, ಜಾನುವಾರು ಹಾಗೂ ಪಶು-ಪಕ್ಷಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.ಕಾಮಗಾರಿ ಅನುಷ್ಟಾನ ಮಾಡಲು ಆಯ್ಕೆ ಮಾಡಿದ ಸ್ಥಳ ಹಾಗೂ ಕಾಮಗಾರಿ ಗುಣಮಟ್ಟ ಮತ್ತು ಗೋಕಟ್ಟೆ ಸುತ್ತಲಿನ ಹಸೀಕರಣದ ಕುರಿತು ಸಿಇಒ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಗೋಕಟ್ಟೆಗಳ ನಿರ್ಮಾಣ ಕಾಮಗಾರಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳಬೇಕು. ಜಲಸಂರಕ್ಷಣೆಗೆ ಆದ್ಯತೆ ನೀಡಿ ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಅಳವಡಿಸಿ ಎಂದು ಕೆಲವು ತಾಂತ್ರಿಕ ಸಲಹೆಗಳನ್ನು ನೀಡಿದರು.ಈ ವೇಳೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ ಹನಗಂಡಿ, ತಾ.ಪಂ. ಸಹಾಯಕ ನಿರ್ದೆಶಕರು (ಪಂ.ರಾ.)…
ವಿಜಯಪುರ: ನಗರದ ವಾರ್ಡ್ ನಂ.೨೪ರ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ ಹಾಗೂ ಧನ್ವಂತರಿ ಆಸ್ಪತ್ರೆಯ ಮುಂಭಾಗದಲ್ಲಿ ಉದ್ಯಾನವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೇಯರ್ ಮೆಹಜಬೀನ್ ಹೊರ್ತಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಮೆಹಜಬೀನ್ ಹೊರ್ತಿ, ವಿಜಯಪುರ ನಗರದ ಸರ್ವತೋಮುಖ ಪ್ರಗತಿಯೇ ನನ್ನ ಗುರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ನಗರದ ಅಭಿವೃದ್ಧಿಗೆ ಸದಾ ಮಾರ್ಗದರ್ಶನ ತೋರುತ್ತಿದ್ದು, ಅವರ ಹಾಗೂ ಎಲ್ಲ ಸದಸ್ಯರ ಸಲಹೆ-ಸೂಚನೆ ಅನ್ವಯ ಸುಂದರ ನಗರ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.ಪಾಲಿಕೆ ಸದಸ್ಯೆ ವಿಮಲಾ ರಫೀಕ್‌ಅಹ್ಮದ್ ಖಾಣೆ ಮಾತನಾಡಿ, ವಿಜಯಪುರ ವಾರ್ಡ್ ನಂ.೨೪ ಅನೇಕ ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿತ್ತು, ಈಗ ಈ ವಾರ್ಡ್ನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ, ಸಚಿವ ಡಾ.ಎಂ.ಬಿ. ಪಾಟೀಲರ ಅಭಿವೃದ್ಧಿಪರ ದೃಷ್ಟಿಕೋನದಿಂದಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದೇನೆ, ಮೊನ್ನೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಸಹ ಬಡಾವಣೆ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು, ಎಲ್ಲ ಸಮಸ್ಯೆಗಳಿಗೂ ಪರಿಹಾರ…
