ವಿಜಯಪುರ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ೪-೫ ತಿಂಗಳು ಕಳೆದರೂ ಇನ್ನುವರೆಗೂ ಯಾವ ರೈತರಿಗೂ ಪರಿಹಾರ ಬಂದಿರುವುದಿಲ್ಲ, ಫಸಲ್ ಭೀಮಾ ಯೋಜನೆಯಲ್ಲಿ ಭಾರಿ ಪ್ರಮಾಣದ ಅನ್ಯಾಯವಾಗುತ್ತಿದೆ, ಅದೇರೀತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಲವಾರು ಸಮಸ್ಯೆಗಳಿವೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ, ಸ್ಪಿಂಕಲರ್ ಪೈಪಗಳ ಸಮಸ್ಯೆ ದೊಡ್ಡದಾಗಿದೆ, ಕಳೆದ ೨-೩ ವರ್ಷಗಳ ಹಿಂದೆ ಡಿ.ಡಿ ತುಂಬಿದ ಹಣವನ್ನು ಮರಳಿ ಹಾಕಲಾಗಿದೆ, ಈಗ ಮತ್ತೆ ಡಿ.ಡಿ ತುಂಬುವಂತೆ ಹೇಳುತ್ತಿದ್ದಾರೆ, ಅದು ನಿಮ್ಮ ಸರದಿ ಬಂದಾಗ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ, ಜೊತೆಗೆ ವಿಮೆಯಲ್ಲಿ ದೊಡ್ಡಪ್ರಮಾಣದ ಅವ್ಯವಹಾರ ನಡೆಯುತ್ತಿದೆ, ನಷ್ಟಗೊಂಡ ರೈತರಿಗೆ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ, ಅದರ ಬಗ್ಗೆ ಸರಿಯಾದ ಮಾರ್ಗಸೂಚಿ ಇಲ್ಲ, ಅದುಕೂಡಾ ಗೊಂದಲವಿದೆ ಎಂದರು. ಇಲಾಖೆಯಲ್ಲಿ ವಿಜಿಲೇನ್ಸ್ ತಂಡವನ್ನು ಇನ್ನು ಹೆಚ್ಚಿಸಿ ಜಿಲ್ಲೆಯಲ್ಲಿ ಅಕ್ರಮವಾಗಿ ನಕಲಿ ಬೀಜ ಗೊಬ್ಬರ, ಕೀಟನಾಶಕ ಮಾರಾಟವಾಗುವುದು ತಡೆಯುವಂತೆ ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ರೇಖಾ ಪಾಟೀಲ, ದೇವರಹಿಪ್ಪರಗಿ ತಾ ಅಧ್ಯಕ್ಷ ಈರಪ್ಪ ಕುಳೆಕುಮಟಗಿ, ತಿಕೋಟಾ ತಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಚಡಚಣ ತಾ ಅಧ್ಯಕ್ಷ ಮಹಾದೇವ ಬನಸೋಡೆ, ತಾಲಿಕೋಟಿ ತಾ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಸೇರಿದಂತೆ ಮುಖಂಡರಾದ ಶಿವಾನಂದಯ್ಯ ಹಿರೇಮಠ, ಸುಭಾಸ ಸಜ್ಜನ, ನಜೀರ ನಂದರಗಿ, ಶಾನೂರ ನಂದರಗಿ, ಖಾದರಸಾಬ ವಾಲಿಕಾರ, ರಾಮನಗೌಡ ಪಾಟೀಲ, ಮಹಾದೇವ ತೇಲಿ, ಅರುಣಗೌಡ ತೇರದಾಳ, ಸಂಗಪ್ಪ ಟಕ್ಕೆ, ಸಂಪತ್ತ ಜಮಾದಾರ, ಸಂಗಮೇಶ ಹುಣಸಗಿ, ಹಣಮಂತ ಬ್ಯಾಡಗಿ, ಹೆಚ್.ಎನ್.ಪಾಟೀಲ, ಮಹಾದೇವ ಕದಂ, ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
ಬೇಡಿಕೆ ಈಡೇರಿಕೆಗೆ ಜಂಟಿ ಕೃಷಿ ನಿರ್ದೇಶಕರಿಗೆ ರೈತ ಸಂಘ ಮನವಿ
Related Posts
Add A Comment

