ತಿಕೋಟಾ: ತಾಲೂಕಿನ ಹೊನವಾಡ ಗ್ರಾಮದಲ್ಲಿ ಶಬ್ದ ಗಾರುಡಿಗ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆಯನ್ನು ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ತಿಕೋಟಾ ಹಾಗು ಶ್ರೀ ಬಸವಂತರಾಯ ಪ .ಪೂ ಕಾಲೇಜ್ ಹೊನ್ವಾ ಡ ಸಹಯೋಗದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯ ರೇ.ಸಿ.ಪಾಟೀಲ ಪಾಟೀಲ, ನಿವೃತ್ತ ಉಪನ್ಯಾಸಕ ಎಮ್.ಎಸ್. ಯಚ್ಚಿ ಆಗಮಿಸಿದ್ದರು. ಪ್ರಾಚಾರ್ಯ ಎಂ.ಎ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಳಿನಿಕಾಂತ ಸಾವಂತ ಉಪಸ್ಥಿತರಿದ್ದರು.
ಕಸಾಪ ತಿಕೋಟಾ ಅಧ್ಯಕ್ಷ ಸಿದ್ರಾಮಯ್ಯ ಜಿ ಲಕ್ಕುಂಡಿಮಠ ವಂದಿಸಿದರು. ಜಗದೀಶ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಮಠಪತಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಎಮ್.ಜಿ. ಕುಲಕರ್ಣಿ,ಆರ್.ಬಿ. ಶೇಡ್ಯಾಳ, ವಾಲಿಕಾರ, ಮಂಜುನಾಥ್ ಎಸ್.ಪಿ, ಶ್ರೀಮತಿ ಮಮತಾ ಹಿರೇಮಠ, ಕು.ನಿವೇದಿತಾ ಹಿರೇಮಠ, ಇಂದಿರಾಬಾಯಿ ಪಾತ್ರೋಟ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

