ವಿಜಯಪುರ: ನಗರದ ವಾರ್ಡ್ ನಂ.೨೪ರ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ ಹಾಗೂ ಧನ್ವಂತರಿ ಆಸ್ಪತ್ರೆಯ ಮುಂಭಾಗದಲ್ಲಿ ಉದ್ಯಾನವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೇಯರ್ ಮೆಹಜಬೀನ್ ಹೊರ್ತಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಮೆಹಜಬೀನ್ ಹೊರ್ತಿ, ವಿಜಯಪುರ ನಗರದ ಸರ್ವತೋಮುಖ ಪ್ರಗತಿಯೇ ನನ್ನ ಗುರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ನಗರದ ಅಭಿವೃದ್ಧಿಗೆ ಸದಾ ಮಾರ್ಗದರ್ಶನ ತೋರುತ್ತಿದ್ದು, ಅವರ ಹಾಗೂ ಎಲ್ಲ ಸದಸ್ಯರ ಸಲಹೆ-ಸೂಚನೆ ಅನ್ವಯ ಸುಂದರ ನಗರ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.
ಪಾಲಿಕೆ ಸದಸ್ಯೆ ವಿಮಲಾ ರಫೀಕ್‌ಅಹ್ಮದ್ ಖಾಣೆ ಮಾತನಾಡಿ, ವಿಜಯಪುರ ವಾರ್ಡ್ ನಂ.೨೪ ಅನೇಕ ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿತ್ತು, ಈಗ ಈ ವಾರ್ಡ್ನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ, ಸಚಿವ ಡಾ.ಎಂ.ಬಿ. ಪಾಟೀಲರ ಅಭಿವೃದ್ಧಿಪರ ದೃಷ್ಟಿಕೋನದಿಂದಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದೇನೆ, ಮೊನ್ನೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಸಹ ಬಡಾವಣೆ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು, ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸಿ ಸುಂದರ ವಾರ್ಡ್ ನಿರ್ಮಾಣದ ಮಾತು ಈಡೇರಿಸುವೆ ಎಂದು ಭರವಸೆ ನೀಡಿದರು.
ಉಪಮೇಯರ್ ದಿನೇಶ ಹಳ್ಳಿ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ಅಬ್ದುಲ್‌ರಜಾಕ್ ಹೊರ್ತಿ, ಕಾಂಗ್ರೆಸ್ ಮುಖಂಡ ರಫೀಕ್‌ಅಹ್ಮದ್ ಖಾಣೆ, ಅಲ್ಲಾಭಕ್ಷ ಕಮತಗಿ, ಶೋಯೇಬ್ ಮೋಮಿನ್, ಗಣಿ ಜಮಾದಾರ, ನದೀಮ್ ಅಫರಾಧ, ಶಿಕ್ಷಕ ಅತ್ತಾರ, ಇಲಿಯಾಸ ಮಕಾನದಾರ ಮೊದಲಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

