ವಿಜಯಪುರ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಚುನ್ನಪ್ಪಾ ಪೂಜೇರಿ ಅವರ ಮಾರ್ಗದರ್ಶನದಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಸಂಘದ ತತ್ವ ಹಾಗೂ ಸಿದ್ದಾಂತಗಳನ್ನು ಹೇಳಿ ಆದೇಶಪ್ರತಿ ಹಾಗೂ ಶಾಲು ದೀಕ್ಷೆಯನ್ನು ಮಾಡಿದರು.
ರೈತಸಂಘದಲ್ಲಿ ಯಾರು ದೊಡ್ಡವರು ಸಣ್ಣವರು, ಬಡವ, ಬಲ್ಲಿದ, ಮೇಲ್ಜಾತಿ, ಕೇಳಜಾತಿ ಎಂಬುದಿಲ್ಲ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಇರುವ ಏಕೈಕ ಸಂಘಟನೆ ಇದಾಗಿದೆ, ಜಿಲ್ಲೆಯ ಯಾವುದೇ ರೈತರಿಗೆ ಅನ್ಯಾಯವಾಗದಂತೆ, ಸರಕಾರದ ಎಲ್ಲಾ ಯೋಜನೆಗಳ ಮಾಹಿತಿ ಕೊಡುತ್ತಾ ರೈತರ ಏಳ್ಗೆಗಾಗಿ, ರೈತರ ಆದಾಯವನ್ನು ದ್ವೀಗುಣ ಮಾಡುವಲ್ಲಿ, ರೈತರನ್ನು ಸ್ವಾವಲಂಭಿಗಳಾಗಿ ಬದುಕುವಂತೆ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಸಂಪತ್ತ ಜಮಾದಾರ, ಜಿಲ್ಲಾ ಸಂ.ಕಾರ್ಯದರ್ಶಿಗಳಾಗಿ ನಜೀರ ನಂದರಗಿ, ವಿಜಯಪುರ ತಾಲೂಕಾ ಅಧ್ಯಕ್ಷರಾಗಿ ಅರುಣಗೌಡ ತೇರದಾಳ ಹಾಗೂ ತಾಲೂಕಾ ಉಪಾಧ್ಯಕ್ಷರಾಗಿ ಮಹಾದೇವಪ್ಪ ತೇಲಿ ಅವರಿಗೆ ಆದೇಶ ಪ್ರತಿ ನೀಡಿ ಶಾಲು ಹೊದಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರಾದ ರೇಖಾ ಪಾಟೀಲ, ದೇವರಹಿಪ್ಪರಗಿ ತಾ ಅಧ್ಯಕ್ಷ ಈರಪ್ಪ ಕುಳೆಕುಮಟಗಿ, ತಿಕೋಟಾ ತಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಚಡಚಣ ತಾ ಅಧ್ಯಕ್ಷ ಮಹಾದೇವ ಬನಸೋಡೆ, ತಾಲಿಕೋಟಿ ತಾ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಸೇರಿದಂತೆ ಮುಖಂಡರಾದ ಶಿವಾನಂದಯ್ಯ ಹಿರೇಮಠ, ಸುಭಾಸ ಸಜ್ಜನ, ಶಾನೂರ ನಂದರಗಿ, ಖಾದರಸಾಬ ವಾಲಿಕಾರ, ರಾಮನಗೌಡ ಪಾಟೀಲ, ಸಂಗಪ್ಪ ಟಕ್ಕೆ, ಸಂಗಮೇಶ ಹುಣಸಗಿ, ಹಣಮಂತ ಬ್ಯಾಡಗಿ, ಹೆಚ್.ಎನ್.ಪಾಟೀಲ, ಮಹಾದೇವ ಕದಂ, ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

